ಮೈಸೂರು, 17(ಎಂಟಿವೈ)- ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.17ರಿಂದ ಖಾಸಗಿ ದರ್ಬಾರ್ ಆರಂಭವಾಗಲಿದೆ. ಅದಕ್ಕೂ ಮುನ್ನ ಸೆ.18ರ ಬೆಳಗ್ಗೆ ರತ್ನ ಖಚಿತ ಸಿಂಹಾಸನ ವನ್ನು ದರ್ಬಾರ್ ಹಾಲ್‍ನಲ್ಲಿ ಜೋಡಿಸುವ ಪ್ರಕ್ರಿಯೆ ನಡೆಯ ಲಿದೆ. ಶುಕ್ರವಾರ ಬೆಳಗ್ಗೆ ಅರ ಮನೆಯ ನೆಲಮಾಳಿಗೆಯ ಸ್ಟ್ರಾಂಗ್‍ರೂಮ್‍ನಿಂದ ಬಂಗಾ ರದ ಸಿಂಹಾಸನದ ಬಿಡಿಭಾಗ ಗಳನ್ನು ಬಿಗಿಭದ್ರತೆಯಲ್ಲಿ ತಂದು ಸಿಂಹಾಸನದ ಜೋಡಣಾ ಕಾರ್ಯ ನಡೆಸಲಾಗುತ್ತದೆ. ಹಾಗಾಗಿ, ಬೆಳಗ್ಗೆಯಿಂದ ಮಧ್ಯಾಹ್ನ 2ರವ ರೆಗೂ ಅರಮನೆಗೆ ಪ್ರವಾಸಿ ಗರು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಯದುವಂಶದ ಪರಂಪರೆ ಗಳಲ್ಲಿ ಖಾಸಗಿ ದರ್ಬಾರ್ ಪ್ರಮುಖ ಆಚರಣೆ. ರಾಜರ ಆಳ್ವಿಕೆ ಕಾಲ ದಿಂದಲೂ ನವರಾತ್ರಿ ವೇಳೆ ಖಾಸಗಿ ದರ್ಬಾರ್ ಆಚರಿಸಿಕೊಂಡು ಬರಲಾಗಿದೆ. ಹಲವು ಕಟ್ಟುಪಾಡುಗಳೊಂದಿಗೆ 9 ದಿನವೂ ಖಾಸಗಿ ದರ್ಬಾರ್ ನಡೆಯಲಿದೆ.
ಶತಮಾನಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ಕೈಂಕರ್ಯ, ಖಾಸಗಿ ದರ್ಬಾರ್ ನಡೆಸುತ್ತಾರೆ. ಅರಮನೆಯ ಪಂಚಾಂಗದಂತೆ ಸೆ.18ರ ಬೆಳಗ್ಗೆ 6.30ರಿಂದಲೇ ಧಾರ್ಮಿಕ ಕಾರ್ಯ ನಡೆಯಲಿದ್ದು, ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರೊಳಗೆ ದರ್ಬಾರ್ ಹಾಲ್‍ನಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಸಿಂಹಾಸನದ ಜೋಡಣೆ ನಡೆಯಲಿದೆ. ಜೋಡಣೆ ಕಾರ್ಯಕ್ಕೆ ಅರಮನೆ ಸಿಬ್ಬಂದಿಯನ್ನೇ ನಿಯೋಜಿಸಲಾಗಿದೆ. ಸಂಪ್ರದಾಯದಂತೆ ಜಿಲ್ಲಾಧಿಕಾರಿ ಶರತ್, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಪೊಲೀಸ್ ಆಯುಕ್ತ ಚಂದ್ರಗುಪ್ತ, ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಪಾಲ್ಗೊಳ್ಳುವ ಸಾಧ್ಯತೆ ಇದೆ.