ಶಂಕರಾಚಾರ್ಯರ ಪ್ರತಿಮೆ ನಿರ್ಮಾತೃ ಅರುಣ್  ಯೋಗಿರಾಜ್ ನಿವಾಸಕ್ಕೆ ಕೇಂದ್ರ ಸಚಿವರ ಭೇಟಿ
ಮೈಸೂರು

ಶಂಕರಾಚಾರ್ಯರ ಪ್ರತಿಮೆ ನಿರ್ಮಾತೃ ಅರುಣ್ ಯೋಗಿರಾಜ್ ನಿವಾಸಕ್ಕೆ ಕೇಂದ್ರ ಸಚಿವರ ಭೇಟಿ

November 22, 2021

ಮೈಸೂರು, ನ.21(ಎಂಕೆ)- ಮೈಸೂರಿನಲ್ಲಿ ಕಲಾಗ್ರಾಮದ ಮಾದರಿಯಲ್ಲಿ ಶಿಲ್ಪಕಲೆ ಕಲಿಕೆಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಪ್ರಯತ್ನಿಸ ಲಾಗುವುದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೇದಾರನಾಥದಲ್ಲಿ ಪ್ರತಿಷ್ಠಾಪನೆಗೊಂಡ ಶಂಕರಾ ಚಾರ್ಯರ ಪ್ರತಿಮೆಯ ನಿರ್ಮಾತೃ ಶಿಲ್ಪಿ ಅರುಣ್ ಯೋಗಿರಾಜ್ ಮನೆಗೆ ಭಾನುವಾರ ಭೇಟಿ ನೀಡಿದ ಕೇಂದ್ರ ಸಚಿವೆ, ಶಿಲ್ಪಿ ಅರುಣ್ ಯೋಗಿ ರಾಜ್ ಹಾಗೂ ಕುಟುಂಬದವರನ್ನು ಸನ್ಮಾನಿಸಿ ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಯವರಿಂದ ಲೋಕಾರ್ಪಣೆಗೊಂಡ ಸುಮಾರು 12 ಅಡಿ ಎತ್ತರದ ಶಂಕರಾಚಾರ್ಯರ ಪ್ರತಿಮೆ ಹಿಂದಿ ರುವ ಶಿಲ್ಪಿ ನಮ್ಮ ಅರುಣ್ ಯೋಗಿರಾಜ್ ಎಂದು ಹೇಳಿಕೊಳ್ಳುವುದೇ ಖುಷಿಯಾಗಿದೆ ಎಂದರು.

ಇಡೀ ದೇಶವೇ ತಿರುಗಿ ನೋಡುವಂತಹ ಹೆಮ್ಮೆಯ ಸಂಗತಿ ಇದಾಗಿದೆ. ರಾಜ್ಯಕ್ಕಲ್ಲದೇ ಇಡೀ ದೇಶಕ್ಕೆ ಅರುಣ್ ಕೀರ್ತಿ ತಂದುಕೊಟ್ಟಿದ್ದಾರೆ. ಅಮರ ಶಿಲ್ಪಿ ಜಕಣಾಚಾರಿಯವರ ಹೆಸರು ಕೇಳಿದ್ದೇವೆ. ಅವರಂತೆ ಇಂದಿಗೂ ಶಿಲ್ಪಿಗಳಿದ್ದಾರೆ ಎಂದರೆ ಹೆಮ್ಮೆಯ ಸಂಗತಿಯಾಗಿದೆ. ಶಿಲ್ಪಕಲೆ ಯನ್ನು ಹೆಚ್ಚೆಚ್ಚು ಜನರಿಗೆ ಕಲಿಸುವ ನಿಟ್ಟಿನಲ್ಲಿ ಯೋಗಿರಾಜ್ ಅವರ ಮನವಿಯಂತೆ ಮೈಸೂರಿ ನಲ್ಲಿ ಕಲಾಗ್ರಾಮದ ಮಾದರಿಯಲ್ಲಿ ಶಿಲ್ಪಕಲೆ ಹೇಳಿಕೊಡುವ ಪ್ರಯತ್ನವನ್ನು ಸರ್ಕಾರದಿಂದ ಮಾಡಲಾಗುವುದು. ಅಲ್ಲದೆ ವೈಯಕ್ತಿಕವಾಗಿಯೂ ಸಹಕಾರ ನೀಡುತ್ತೇನೆ ಎಂದರು.

ದೇಶದಲ್ಲಿರುವ ಹಲವಾರು ದೇವಸ್ಥಾನಗಳಲ್ಲಿನ ಮೂರ್ತಿಗಳು ಹಾಳಾಗಿವೆ. ಮುಂದಿನ ದಿನಗಳಲ್ಲಿ ಶಿಲ್ಪಿ ಯೋಗಿರಾಜ್ ಅವರಿಂದಲೇ ಹೊಸ ಮೂರ್ತಿ ಗಳನ್ನು ಮಾಡಿಸಲಾಗುವುದು ಎಂದರು. ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಬಿ.ಪಿ.ಮಂಜು ನಾಥ್, ಸೋಮಸುಂದರ್ ಮತ್ತಿತರರಿದ್ದರು.

Translate »