ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆ
ಕೊಡಗು

ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆ

October 27, 2020

ಮಡಿಕೇರಿ,ಅ.26-ರಾಷ್ಟ್ರೀಯ ಕರಾಟೆ ಅಸೋಶಿಯೇಷನ್ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಆಯ್ಕೆಯಾಗಿದ್ದಾರೆ. ಕೇರಳ ಮತ್ತು ಹರ್ಯಾಣ ಹೈ ಕೋರ್ಟ್ ಆದೇಶದಂತೆ, ಭಾರತ ಸರ್ಕಾರ ಕ್ರೀಡಾ ಮಂತ್ರಾಲಯ ಮತ್ತು ಇಂಡಿಯನ್ ಒಲಪಿಂಕ್ ಅಸೋಶಿಯೇಷನ್ ಜಂಟಿ ಆಶ್ರಯ ದೊಂದಿಗೆ ಅಸ್ಸಾಂ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಪಿ.ಬೋರ್ಕೋಟಗಿ ಅವರ ಸಮ್ಮುಖದಲ್ಲಿ ಅಸ್ಸಾಂ ರಾಜ್ಯದ ಗೌಹಟ್ಟಿಯಲ್ಲಿ ನಡೆದ ಸಭೆಯಲ್ಲಿ ಕರಾಟೆ ರಾಷ್ಟ್ರೀಯ ಮಂಡಳಿಯ ಹಿರಿಯ ಉಪಾಧ್ಯಕ್ಷರಾಗಿ ಕರಾಟೆಪಟು ಅರುಣ್ ಮಾಚಯ್ಯರನ್ನು ಆಯ್ಕೆ ಮಾಡಲಾಯಿತು.

1977ರಲ್ಲಿ ಪ್ರಥಮ ರಾಷ್ಟ್ರೀಯ ಕರಾಟೆ ಚಾಂಪಿಯನ್ ಆಗಿ ಹೊರಹೊಮ್ಮಿರುವ ಅರುಣ್ ಮಾಚಯ್ಯ ಸಿಂಗಾಪುರ್‍ನಲ್ಲಿ ಉನ್ನತ ತರಬೇತಿ ಮುಗಿಸಿದರು.  ನಂತರದ ವರ್ಷಗಳಲ್ಲಿ ಇಂಡೋನೇಷ್ಯಾ ಮಲೇಷಿಯಾ, ಜಪಾನ್, ಆಸ್ಟ್ರೇಲಿಯಾ, ಚೀನಾ, ಮೆಕ್ಸಿಕೋ, ನೇಪಾಳ ಸೇರಿದಂತೆ ಹಲವು ವಿಶ್ವ ಮತ್ತು ಏಶಿಯನ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 1989ರಲ್ಲಿ 1993ರಲ್ಲಿ ಹೆವಿವೈಟ್ ವಿಭಾಗದಲ್ಲಿ ಪದಕ ಗಳಿಸಿದ್ದಾರೆ. 1994ರಲ್ಲಿ ಕರ್ನಾಟಕ ಸರ್ಕಾರ ರಾಜ್ಯ ಕ್ರೀಡಾಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಇವರು ವಿಶ್ವ ಕರಾಟೆ ಫೆಡರೇಷನ್(ಡಬ್ಲ್ಯುಕೆಎಫ್) 7ನೇ ಡಿಗ್ರಿ ಬ್ಲಾಕ್ ಬೆಲ್ಟ್ ಪಡೆದಿದ್ದು, ಅಂತಾರಾಷ್ಟ್ರೀಯ ತೀರ್ಪುಗಾರರಾಗಿದ್ದಾರೆ. ಪೋಟೊ 07

 

 

Translate »