ವಿದ್ಯುತ್ ಬಿಲ್ ಬಾಕಿ ಪಾವತಿಸಿ ಎಂದು ಕೇಳಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಹುಷಾರ್…
ಮೈಸೂರು

ವಿದ್ಯುತ್ ಬಿಲ್ ಬಾಕಿ ಪಾವತಿಸಿ ಎಂದು ಕೇಳಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಾರೆ ಹುಷಾರ್…

July 10, 2022

ಮೈಸೂರಿನ ಇಬ್ಬರು ಹಿರಿಯ ನಾಗರಿಕರಿಗೆ ಕ್ರಮವಾಗಿ ೪.೪೦ ಹಾಗೂ ೨.೭೪ ಲಕ್ಷ ಸುಲಿಗೆ

ಮೊಬೈಲ್ ಸಂದೇಶಗಳ ಮೂಲಕ ನಡೆದಿದೆ ವ್ಯವಸ್ಥಿತ ಸುಲಿಗೆ

ಲೋನ್ ಮರುಪಾವತಿ ಕತೆ ಕಟ್ಟಿಯೂ ೯೮ ಸಾವಿರ ವಂಚನೆ

ಮೈಸೂರು, ಜು.೯-ವಿದ್ಯುತ್ ಬಿಲ್ ಪಾವತಿಸಬೇಕೆಂದು ಮೊಬೈಲ್‌ಗೆ ಸಂದೇಶ ಕಳುಹಿಸಿ ಲಕ್ಷಾಂತರ ರೂ. ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಪ್ರಕರಣ ಗಳು ವರದಿಯಾ ಗಿವೆ. ಮೈಸೂರಿನ ವಿವಿ ಮೊಹಲ್ಲಾ ದಲ್ಲಿರುವ ಬ್ರಿಗೇಡ್ ರೆಸಿಡೆನ್ಸಿ ಅಪಾರ್ಟ್ ಮೆಂಟ್‌ನ ನಿವಾಸಿ ಕೆ.ಬಿ.ರಾಮಪ್ರಕಾಶ್ (೮೦) ಅವರಿಗೆ ವಿದ್ಯುತ್ ಬಿಲ್ ಪಾವತಿ ಮಾಡುವಂತೆಯೂ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿಯೂ ೨ ಮೊಬೈಲ್ ನಂಬರ್‌ಗಳಿAದ ಸಂದೇಶ ಬಂದಿತ್ತು. ನಂತರ ಮತ್ತೊಂದು ನಂಬರ್‌ನಿAದ ಕರೆ ಮಾಡಿ ಕ್ವಿಕ್ ಸಪೋರ್ಟ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ತಿಳಿಸಲಾಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಅವರು ಆ್ಯಪ್ ಇನ್ ಸ್ಟಾಲ್ ಮಾಡಿ ಅಲ್ಲಿ ಬಂದ ನಿರ್ದೇಶನ ಗಳನ್ನು ಪಾಲಿಸಿದಾಗ ಅವರ ಖಾತೆಯಿಂದ ೪.೪೦ ಲಕ್ಷ ರೂ. ಕಡಿತಗೊಂಡಿದೆ. ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ಯಾದವಗಿರಿ ನಿವಾಸಿ ವತ್ಸಲ್ ಚಾರಿ (೮೦) ಎಂಬುವರ ಮೊಬೈಲ್‌ಗೆ ವಿದ್ಯುತ್ ಬಿಲ್ ಅಪ್ ಡೇಟ್ ಮಾಡಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಸಂದೇಶ ಬಂದಿತ್ತು. ನಂತರ ಅವರ ವಾಟ್ಸಾಪ್‌ಗೆ ಲಿಂಕ್ ವೊಂದನ್ನು ಕಳುಹಿಸಿದ್ದು, ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ಅವರ ಬ್ಯಾಂಕ್ ಖಾತೆ ಯಿಂದ ೨,೭೪, ೯೨೦ ರೂ. ಕಡಿತಗೊಂಡಿದೆ.

ವೈದ್ಯರಿಗೆ ವಂಚನೆ: ಮೈಸೂರಿನ ಬನ್ನೂರು ರಸ್ತೆಯಲ್ಲಿ ವಾಸವಿರುವ ವೈದ್ಯ ಡಾ. ಜಿ.ರಾಜ್‌P ÀÄಮಾರ್ ಎಂಬುವರಿಗೆ ಕ್ರೆಡಿಟ್ ಬಸ್ ಲೋನ್ ಆ್ಯಪ್‌ನಿಂದ ವಾಟ್ಸಾಪ್ ಮೂಲಕ ಕರೆ ಬಂದಿದ್ದು, ನೀವು ಲೋನ್ ತೆಗೆದುಕೊಂಡು ಮರುಪಾವತಿ ಮಾಡಿಲ್ಲ ಎಂದು ತೊಂದರೆ ಕೊಡಲಾಗುತ್ತಿತ್ತು. ನಂತರ ಅವರ ಫೇಸ್‌ಬುಕ್ ಮತ್ತು ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಿ ಅದರಲ್ಲಿದ್ದ ಫೋಟೋ ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಎಡಿಟ್ ಮಾಡಿ ಅವರ ಕಾಂಟಾಕ್ಟ್ ಲಿಸ್ಟ್ನಲ್ಲಿರುವವರಿಗೆ ಕಳುಹಿಸುವ ಮೂಲಕ ಬ್ಲಾಕ್‌ಮೇಲ್ ಮಾಡಿ ೯೮ ಸಾವಿರ ರೂ.ಗಳನ್ನು ಪಡೆದು ವಂಚಿಸ ಲಾಗಿದೆ. ಈ ಮೂರೂ ಪ್ರಕರಣಗಳು ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿವೆ.

Translate »