ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸುಲಿಗೆ
ಮೈಸೂರು

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸುಲಿಗೆ

July 10, 2022

ಕಾರು ತಡೆದು ಚಾಕು ತೋರಿಸಿ ೨೩ ಸಾವಿರ ಕಿತ್ತ ದುಷ್ಕರ್ಮಿ

ಮತ್ತೆ ಆರಂಭವಾಗಿದೆ ಖತರ್ನಾಕ್ `ನಕಲಿ ಅಪಘಾತ’

ಮಂಡ್ಯ, ಜು.೯-ಅಪಘಾತದ ನೆಪದಲ್ಲಿ ಕಾರನ್ನು ಅಡ್ಡ ಹಾಕಿ, ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕಿ ೨೩ ಸಾವಿರ ರೂ. ಸುಲಿಗೆ ಮಾಡಿದ ಘಟನೆ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ನಡೆದಿದೆ.ಬೆಂಗಳೂರು ನಿವಾಸಿ ಟಿ.ಎಸ್.ಚಂದ್ರ ಶೇಖರ್ (೩೯) ಎಂಬುವರು ಹುಂಡೈ-ಐ೧೦ ಗ್ರಾಂಡ್ ಕಾರಿನಲ್ಲಿ (ಕೆಎಲ್ ೨೨ ಹೆಚ್ ೯೦೨೦) ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಮಂಡ್ಯದ ಫ್ಟಾಕ್ಟರಿ ಸರ್ಕಲ್ ಬಳಿ ಸುಜುಕಿ ಆಕ್ಸೆಸ್ ಸ್ಕೂಟರ್‌ನಲ್ಲಿ (ಕೆಎ ೧೧ ಇಕ್ಯೂ ೨೮೫೮) ಕಾರನ್ನು ಅಡ್ಡ ಹಾಕಿದ ವ್ಯಕ್ತಿ ಕಾರಿ ನೊಳಗೆ ಬಂದು ಕುಳಿತು `ನಿಮ್ಮ ಕಾರು ನನ್ನ ಸ್ಕೂಟರ್‌ಗೆ ಗುದ್ದಿ, ಸ್ಕೂಟರ್‌ಗೂ ಡ್ಯಾಮೇಜ್ ಆಗಿದೆ, ನನಗೂ ಗಾಯ ವಾಗಿದೆ. ಹೀಗಾಗಿ ೨೩ ಸಾವಿರ ರೂ. ಕೊಡಬೇಕು’ ಎಂದು ಕೇಳಿದ್ದಾನೆ. ತನ್ನ ಕಾರು ಯಾರಿಗೂ ಗುದ್ದಿಲ್ಲ ಎಂದು ಚಂದ್ರಶೇಖರ್ ಹೇಳಿದಾಗ ಚಾಕು ತೋರಿಸಿ, ಹಣ ನೀಡಬೇಕು, ಇಲ್ಲದಿದ್ದರೆ ತಿವಿಯುವುದಾಗಿ ಬೆದರಿಸಿದ್ದಾನೆ. ಆಗ ಚಂದ್ರಶೇಖರ್ ತನ್ನ ಬಳಿ ೫ ಸಾವಿರ ರೂ. ಮಾತ್ರ ಇದೆ ಎಂದು ಕೊಟ್ಟಿದ್ದಾರೆ. ಆದರೆ ಪಕ್ಕದಲ್ಲೇ ಎಟಿಎಂ ಇದೆ. ಡ್ರಾ ಮಾಡಿಕೊಡಿ ಎಂದು ಆತ ಒತ್ತಾಯಿಸಿದ್ದಾನೆ. ತನ್ನ ಬಳಿ ಎಟಿಎಂ ಕಾರ್ಡ್ ಇಲ್ಲ ಎಂದು ಹೇಳಿದಾಗ ಅವರನ್ನು ಕಾರಿನಿಂದ ಇಳಿಸಿ ಮೈಸೂರು-ಬೆಂಗಳೂರು ರಸ್ತೆ ಪಕ್ಕದಲ್ಲಿರುವ ಬೀಡಾ ಅಂಗಡಿ ಬಳಿ ಕರೆದೊಯ್ದು, ಸುತ್ತಲೂ ನಮ್ಮ ಕಡೆಯವರಿದ್ದಾರೆ. ಹಣ ಕೊಡದಿದ್ದರೆ ಮುಗಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದ ಚಂದ್ರಶೇಖರ್ ತನ್ನ ಸ್ನೇಹಿತ ಸುರೇಶ್ ಅವರ ಪತ್ನಿಯ ಅಕೌಂಟ್ ಮತ್ತು ಸಹೋದರ ಮೋಹನ್ ರಾಜ್ ಅವರ ಅಕೌಂಟ್‌ನಿAದ ತನ್ನ ಗೂಗಲ್ ಪೇಗೆ ಹಣ ವರ್ಗಾವಣೆ ಮಾಡಿಸಿಕೊಂಡು ಸುಲಿಗೆಕೋರ ತಿಳಿಸಿದ ಮೊಬೈಲ್ ಸಂಖ್ಯೆ ೯೯೧೬೭೯೨೩೦೮ಗೆ ಗೂಗಲ್ ಪೇ ಮಾಡಿದ್ದಾರೆ. ಈ ಸಂಬAಧ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Translate »