ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮೈಸೂರು ವಿವಿ ಭೂಗೋಳಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಹೆಚ್.ನಾಗರಾಜ್ ಅಮಾನತು
ಮೈಸೂರು

ಸಹಾಯಕ ಪ್ರಾಧ್ಯಾಪಕರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮೈಸೂರು ವಿವಿ ಭೂಗೋಳಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಹೆಚ್.ನಾಗರಾಜ್ ಅಮಾನತು

May 5, 2022

ಮೈಸೂರು, ಮೇ ೪(ಆರ್‌ಕೆ)- ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿ, ಬಂಧಿತ ರಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಭೂಗೋಳಶಾಸ್ತç ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಹೆಚ್.ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.

ಕುಲಸಚಿವ ಪ್ರೊ. ಆರ್.ಶಿವಪ್ಪ ಬುಧವಾರ ಅಮಾನತು ಗೊಳಿಸಿ ಆದೇಶ ಹೊರಡಿಸಿದ್ದಾರೆ. ಏಪ್ರಿಲ್ ೨೭ರಂದು ಬೆಂಗ ಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಪ್ರೊ. ನಾಗರಾಜ್ ರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರ ಹುದ್ದೆಯ ನೇಮಕಾತಿಯನ್ನೂ ಸರ್ಕಾರ ರದ್ದುಪಡಿಸಿತ್ತು.

ಅದರ ಬೆನ್ನಲ್ಲೇ ಮಾತೃ ಇಲಾಖೆಯಾದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ನಿರ್ದೇಶನದ ಮೇರೆಗೆ ಕುಲಸಚಿವರು ಸಿಂಡಿಕೇಟ್ ಸಭೆಯ ತೀರ್ಮಾನ ಹಾಗೂ ವಿಚಾರಣೆಯನ್ನು ಕಾಯ್ದಿರಿಸಿ ಪ್ರೊ. ನಾಗರಾಜ್‌ರನ್ನು ಏಪ್ರಿಲ್ ೨೭ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಂದು ಆದೇಶ ಹೊರಡಿ ಸಿದ್ದಾರೆ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಗಾಗಿ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಭೂಗೋಳಶಾಸ್ತç ವಿಷಯದ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರೊ. ನಾಗರಾಜ್‌ಗೆ ತಿಳಿಸಿತ್ತು. ಆದರೆ ಪರೀಕ್ಷೆ ದಿನವೇ ಪ್ರಶ್ನೆ ಪತ್ರಿಕೆ ಅವರ ಶಿಷ್ಯೆ ಡಾ. ಸೌಮ್ಯರಿಂದ ಸೋರಿಕೆಯಾಗಿತ್ತು. ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದರಿAದ ಮೈಸೂರು ವಿಶ್ವವಿದ್ಯಾನಿಲಯವು ಅವರ ಪೋಸ್ಟ್ ಡಾಕ್ಟುರಲ್ ಫೆಲೋಶಿಪ್ ಅನ್ನು ಅಮಾನತುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Translate »