ಅಶ್ವತ್ಥನಾರಾಯಣ್ ಕಡು ಭ್ರಷ್ಟ
ಮೈಸೂರು

ಅಶ್ವತ್ಥನಾರಾಯಣ್ ಕಡು ಭ್ರಷ್ಟ

May 5, 2022

ರಾಮನಗರ, ಮೇ ೪- ರಾಜ್ಯ ರಾಜಕಾರಣ ದಲ್ಲಿ ಅತ್ಯಂತ ಕಡು ಭ್ರಷ್ಟ ರಾಜಕಾರಣ ಸಚಿವ ಅಶ್ವತ್ಥ ನಾರಾಯಣ್ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.

ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಮಾತ ನಾಡಿದ ಅವರು, ನಾನು ಬ್ರಾಹ್ಮಣನ ರೀತಿ ಶುದ್ಧ ರಾಜಕಾರಣ ಎಂದು ಹೇಳಿ ಕೊಂಡು ತಿರುಗುತ್ತಾರೆ. ಆದರೆ, ಸಂಸ್ಕöÈತಿ ಇರುವವರು ಯಾರು ಹೀಗೆ ಮಾಡುವು ದಿಲ್ಲ ಎಂದು ಟೀಕಿಸಿದರು.

ಇದೇ ವೇಳೆ ಪಿಎಸ್‌ಐ ಹಗರಣದಲ್ಲಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ, ನನ್ನ ವಿರುದ್ಧ ಎಲ್ಲವನ್ನು ಬಿಚ್ಚುತ್ತೇನೆ ಎಂದಿದ್ದಾರೆ. ಬಿಚ್ಚಿಡಲಿ ಯಾರು ಬೇಡ ಅಂತಾರೆ. ನನಗೆ ಏನು ಬೇಕಾದರೂ ಮಾಡಲಿ, ಅವರನ್ನು ಎದುರಿಸಲು ಸಿದ್ಧರಾಗಿ ದ್ದೇವೆ. ಶಿಕ್ಷೆ ಕೊಟ್ಟರು ಅನುಭವಿಸಲು ಸಿದ್ಧರಿ ದ್ದೇವೆ. ಸತ್ಯವನ್ನು ನಾವು ಜನರ ಮುಂದೆ ಇಟ್ಟಿ ದ್ದೇವೆ ಅಷ್ಟೇ ಎಂದು ಹೇಳಿದರು.

ಭ್ರಷ್ಟçಚಾರದ ಕುರಿತು ಬಿಜೆಪಿಯ ಕೆಲವರು ನಮ್ಮ ಜೊತೆ ಮಾತನಾಡಿದ್ದಾರೆ. ಅದನ್ನೆಲ್ಲ ಹೇಳಲು ಆಗಲ್ಲ. ಸಾಮಾನ್ಯವಾಗಿ ಹತ್ತಿರ ಇರು ವವರೇ ಮಾಹಿತಿ
ಕೊಡುವುದು. ಇದೊಂದೇ ಇಲಾಖೆ ಅಲ್ಲ, ಶಿಕ್ಷಣ ಇಲಾಖೆ, ಕೆಪಿಎಸ್ಸಿಯಲ್ಲೂ ಅಕ್ರಮ ಆಗಿದೆ. ಇದರ ಬಗ್ಗೆ ಬೊಮ್ಮಾಯಿಯವರು ಎಸಿಬಿಗೆ ದೂರು ನೀಡಿ ಎಫ್‌ಐಆರ್ ದಾಖಲು ಮಾಡಬೇಕಿತ್ತು. ಪ್ರಕರಣ ಕುರಿತು ವಿಚಾರಣೆ ಮಾಡಬೇಕಿತ್ತು, ಯಾಕೆ ಮಾಡಿಲ್ಲ. ಕೆಪಿಎಸ್ಸಿಯಲ್ಲಿ ಅಕ್ರಮ ಆಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಯಾಕೆ ಸುಮ್ಮನಿದ್ದಾರೆ. ರಾಜ್ಯಪಾಲರು, ಮುಖ್ಯ ಕಾರ್ಯದರ್ಶಿ ಯಾಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ರಾಮನಗರದ ಮೂರು ನಾಲ್ಕು ಮಂದಿ ಒಳಗೆ ಇದ್ದಾರೆ: ಇನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ಆರೋಪ ವಿಚಾರ ಕುರಿತು ಮಾತನಾಡಿದ ಅವರು, ನನಗೆ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಕುಮಾರಸ್ವಾಮಿಯವರು ಪ್ರಮುಖ ಸ್ಥಾನದಲ್ಲಿದ್ದರು, ಅಧಿಕಾರಿಗಳು ಪರಿಚಯ ಇದ್ದರು ತಿಳಿಸಿರಬಹುದು. ಆದರೆ ನಡೆದ ಹಗರಣ ಯಾರು ಮುಚ್ಚಿಹಾಕಲು ಸಾಧ್ಯಾವಾ? ಸರ್ಕಾರದ ಪ್ರಭಾವದಿಂದ ಇದನ್ನ ಮುಚ್ವಿಹಾಕಬಹುದು. ನಮ್ಮ ಜಿಲ್ಲೆಯವರೇ ಮೂರ್ನಾಲ್ಕು ಜನ ಮೊದಲನೇ ರ‍್ಯಾಂಕ್ ಪಡೆದಿದ್ದಾರೆ. ನಮ್ಮ ಪೈಕಿಯವರೇ ಅದರಲ್ಲಿ ಇದ್ದಾರೆ, ಈಗ ಅವರು ಒಳಗಡೆ ಇದ್ದಾರೆ. ನೌಕರಿ ಆಸೆಗೆ ಸಾಲ ಮಾಡಿ ಹಣ ನೀಡಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಹೇಳಿದರು.

 

Translate »