ಜೈಲಿಗೆ ಹೋಗಿ ಬಂದವರಿಗೆ ನನ್ನ ವಿರುದ್ಧ ಆರೋಪ ಮಾಡಲು ನೈತಿಕತೆ ಇಲ್ಲ
ಮೈಸೂರು

ಜೈಲಿಗೆ ಹೋಗಿ ಬಂದವರಿಗೆ ನನ್ನ ವಿರುದ್ಧ ಆರೋಪ ಮಾಡಲು ನೈತಿಕತೆ ಇಲ್ಲ

May 5, 2022

ಬೆಂಗಳೂರು: ಜವಾಬ್ದಾರಿಯುತ ಸ್ಥಾನ ದಲ್ಲಿದ್ದುಕೊಂಡು ನನ್ನ ವಿರುದ್ಧ ನಿರಾಧಾರದ ಹೇಳಿಕೆಗಳನ್ನು ನೀಡು ತ್ತಿದ್ದಾರೆ. ನನ್ನಂಥ ಪ್ರಾಮಾ ಣ ಕ ವ್ಯಕ್ತಿಯ ವಿರುದ್ಧ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವುದು ಖಂಡ ನೀಯ ಎಂದು ಉನ್ನತ ಶಿಕ್ಷಣ ಸಚಿವರೂ ಆದ ರಾಮನಗರ ಉಸ್ತುವಾರಿ ಸಚಿವ ಡಾ. ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಅವರು ಕಾಂಗ್ರೆಸ್ ನಾಯಕರ ವಿರುದ್ಧ ಅದ ರಲ್ಲೂ ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವರ ಸಂಬAಧಿ ಭಾಗಿಯಾಗಿದ್ದಾರೆ, ಸಚಿವರ ಪಾತ್ರವೂ ಇದೆ ಎಂದು ಶಿವಕುಮಾರ್ ಆರೋಪಿಸುತ್ತಿರು ವುದು ಅವರನ್ನು ಕೆರಳಿಸಿದೆ. ವಿಧಾನಸೌಧದ ಆವರಣದಲ್ಲಿ
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್, ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಜೊತೆಗೆ ಮಾನನಷ್ಟ ಮೊಕದ್ದಮೆಯನ್ನೂ ಹೂಡುವ ಯೋಚನೆ ಮಾಡುತ್ತಿದ್ದೇನೆ ಎಂದು ಹೇಳಿದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪಾಲುದಾರನಾಗಲು ನಾನೇನು ಆ ಖಾತೆಯ ಸಚಿವನೇ? ಪ್ರಗತಿಪರ ಧೋರಣೆಗಳ ನನ್ನ ಸಾರ್ವಜನಿಕ ಬದುಕು ಪಾರದರ್ಶಕವಾಗಿದೆ. ನನ್ನ ರಾಜಕೀಯ ಬದುಕು ಒಂದು ತೆರೆದ ಪುಸ್ತಕ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದ ಉತ್ತಮವಾದ ರೀತಿಯಲ್ಲಿ, ಕಳಂಕರಹಿತವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಜೈಲಿಗೆ ಹೋಗಿ ಬಂದಿರುವ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ವಿರುದ್ಧ ಅರೋಪ ಮಾಡಲು ನೈತಿಕತೆ ಅನ್ನೋದೇ ಇಲ್ಲ. ಅಸಲಿಗೆ ಅವರ ಪಕ್ಷವೇ ನಿರ್ನಾಮವಾಗುವ ಹಂತದಲ್ಲಿದೆ. ಬೇರೆಯವರ ವಿರುದ್ಧ ಸುಳ್ಳು ಅರೋಪಗಳನ್ನು ಮಾಡುವ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅಶ್ವಥ್ ನಾರಾಯಣ ಎಚ್ಚರಿಸಿದರು.

 

Translate »