ಜೆಎಸ್‍ಎಸ್ ಆಸ್ಪತ್ರೆಯಲ್ಲಿ  ಸ್ವಚ್ಛತೆಗೆ ರೊಬೊಟ್ ಬಳಕೆ
ಮೈಸೂರು

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ರೊಬೊಟ್ ಬಳಕೆ

October 19, 2021

ಮೈಸೂರು, ಅ.18 (ಎಂಕೆ)- ಮೈಸೂ ರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಹಮ್ಮಿ ಕೊಂಡಿರುವ ‘ತಂತ್ರಜ್ಞಾನ ಮುಖಾಂತರ ಶುಚಿಗೊಳಿಸುವ ವಾರ (ಕ್ಲಿನಿಂಗ್ ಟೆಕ್ನಾ ಲಜಿ ವೀಕ್)ದ’ ಅಂಗವಾಗಿ ‘ಸ್ವಚ್ಛತೆಗಾಗಿ ಮಾನವ ರಹಿತ (ರೊಬೊಟ್) ಯಂತ್ರ’ದ ಬಳಕೆಗೆ ಸೋಮವಾರ ಚಾಲನೆ ನೀಡ ಲಾಯಿತು.

ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ. ಕರ್ನಲ್ ಎಂ.ದಯಾನಂದ ಯಂತ್ರದ ಬಟನ್ ಪ್ರೆಸ್ ಮಾಡುವ ಮೂಲಕ ಸ್ವಯಂ ಚಾಲಿತ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ದರು. ಬಳಿಕ ಮಾತನಾಡಿದ ಅವರು, 1,800 ಹಾಸಿಗೆ ಸಾಮರ್ಥ್ಯದ ಜೆಎಸ್‍ಎಸ್ ಆಸ್ಪತ್ರೆ ದೇಶದಲ್ಲೇ ಅತೀ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ಕಳೆದ ಮೂರು ವರ್ಷಗಳಿಂದಲೂ ಮೈಸೂರು ಮಹಾನಗರ ಪಾಲಿಕೆ ವತಿ ಯಿಂದ ಅತ್ಯಂತ ಸ್ವಚ್ಛ ಆಸ್ಪತ್ರೆ ಎಂಬ ಶ್ರೇಯಕ್ಕೆ ಆಸ್ಪತ್ರೆ ಪಾತ್ರವಾಗಿದೆ. ಡಿಟಿಎಸ್‍ಎಸ್ (ಡಸ್ಟರ್ಸ್ ಟೋಟಲ್ ಸರ್ವಿಸಸ್ಸ್) ಕಂಪ ನಿಯ ಸಹಯೋಗದಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರವನ್ನು ಸ್ವಚ್ಛತೆಗೆ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಯಂತ್ರ ಮಾನವ ರಹಿತವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತದೆ. ಯಂತ್ರಕ್ಕೆ ಸೆನ್ಸಾರ್ ಅಳವಡಿಸಿರುವುದರಿಂದ ಒಂದು ಮೀಟರ್ ಅಂತರದಲ್ಲಿ ಯಾವುದೇ ವಸ್ತು, ಮನುಷ್ಯರು ಎದುರಾದರೆ ತಕ್ಷಣ ನಿಲ್ಲುತ್ತದೆ. ಯಂತ್ರದ ಉಸ್ತುವಾರಿಗೆ ಸಿಬ್ಬಂದಿ ಬೇಕಿಲ್ಲ. ನಿಗದಿತ ಸಮಯಕ್ಕೆ ಅನುಸಾರವಾಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಬಗೆಯ ಸ್ವಯಂ ಚಾಲಿತ ಯಂತ್ರವನ್ನು ಸ್ವಚ್ಛತೆಗೆ ಅಳವಡಿಸಿರುವುದು ಮೈಸೂರಿನಲ್ಲಿ ಇದೇ ಪ್ರಥಮ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಗುರುಸ್ವಾಮಿ, ಮುಖ್ಯ ಇಂಜಿ ನಿಯರ್ ವಿಜಯ್ ಬೆನ್ನೂರು, ಹಣಕಾಸು ಅಧಿಕಾರಿ ಎಂ.ಭಗವಾನ್, ಡಾ.ಎನ್. ಲೋಕೇಶ್, ಪಿಆರ್‍ಒ ಜೀವನ್, ಡಿಟಿ ಎಸ್‍ಎಸ್ ಕಂಪನಿಯ ಪ್ರಾದೇಶಿಕ ವ್ಯವ ಸ್ಥಾಪಕಿ ಆಶ್ಮಿ ಜಿಸಿಂತಾ, ಕೆ.ವೈ.ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.

Translate »