ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ  2 ಕೋಟಿ ವೆಚ್ಚದಲ್ಲಿ ಮೈಸೂರಲ್ಲಿ ಯೋಗಾ ಉದ್ಯಾನವನ ನಿರ್ಮಾಣ
ಮೈಸೂರು

ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ 2 ಕೋಟಿ ವೆಚ್ಚದಲ್ಲಿ ಮೈಸೂರಲ್ಲಿ ಯೋಗಾ ಉದ್ಯಾನವನ ನಿರ್ಮಾಣ

June 22, 2022

ಮೈಸೂರು,ಜೂ.21(ಪಿಎಂ)- ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ 2 ಕೋಟಿ ರೂ. ವೆಚ್ಚ ದಲ್ಲಿ ಮೈಸೂರಿನಲ್ಲಿ ಯೋಗ ಉದ್ಯಾನವನ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಮೋದಿಯವರ ಘನ ಉಪಸ್ಥಿತಿಯಲ್ಲಿ ಸಾಮೂಹಿಕ ಯೋಗ ಪ್ರದರ್ಶನ ಏರ್ಪಡಿಸಬೇಕು ಎಂಬುದು ಬಹಳ ದಿನಗಳ ಕನಸು. ಅದೀಗ ನನಸಾಗಿದೆ. ದೇಶದ ಸ್ವಾತಂ ತ್ರ್ಯದ ಅಮೃತ ಮಹೋತ್ಸವ, 8ನೇ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಮೋದಿಯವರ 8 ವರ್ಷಗಳ ಆಡಳಿತದ ಈ ಸುಸಂದರ್ಭದಲ್ಲಿ ಮೈಸೂರಿನಲ್ಲಿ ಮೋದಿ ಯವರ ಯೋಗ ಪ್ರದರ್ಶನ ಇಡೀ ವಿಶ್ವದ ಗಮನ ಸೆಳೆ ದಿದೆ ಎಂದರು. ಇದಕ್ಕಾಗಿ ಮೋದಿಯವರಿಗೆ ಮೈಸೂರು ಮತ್ತು ರಾಜ್ಯದ ಜನತೆ ಪರವಾಗಿ ಧನ್ಯವಾದ ಅರ್ಪಿ ಸುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಪ್ರಕೃತಿಯ ಯಾವುದೇ ಅಡೆತಡೆ ಇಲ್ಲದೆ, ಯೋಗ ಪ್ರದರ್ಶನ ಯಶಸ್ವಿಯಾಗಿ ನೆರವೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇದು `ಯೋಗ ವರ್ಷ’: ಮೋದಿಯವರು ಮೈಸೂರಿಗೆ ಭೇಟಿ ನೀಡಿ ಯೋಗ ಪ್ರದರ್ಶನ ಯಶಸ್ವಿಗೊಳಿಸಿದ್ದಾರೆ. ಹಾಗಾಗಿ ಮುಂದಿನ ವರ್ಷದವರೆಗೆ ಮೈಸೂರಿನಲ್ಲಿ `ಯೋಗ ವರ್ಷ’ ಎಂದು ಆಚರಿಸಲಿದ್ದೇವೆ. ಇದರ ಭಾಗವಾಗಿ ಮೈಸೂರಿನ ಎಲ್ಲಾ ಯೋಗ ಶಿಕ್ಷಣ ಸಂಸ್ಥೆಗಳು, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಸರ್ಕಾರಿ ಕಾಲೇಜು ಜೊತೆಗೂಡಿ `ಮನೆ ಮನೆಗೆ ಯೋಗ’ ಎಂಬ ಪರಿಕಲ್ಪನೆಯಡಿ ಮೈಸೂ ರಿನ ಎಲ್ಲಾ ಮನೆಗಳಿಗೆ ಯೋಗ ಪರಿಚಯಿಸಿ, ಜೀವನ ದಲ್ಲಿ ಇದನ್ನು ರೂಢಿಸಿಕೊಳ್ಳಲು ಉತ್ತೇ ಜನ ನೀಡಲಾಗುವುದು ಎಂದರು.

ಜೊತೆಗೆ ನಗರದ 65 ವಾರ್ಡ್‍ಗಳ ಪೈಕಿ ಒಂದು ವಾರ್ಡ್ ಅನ್ನು ಟೋಟಲ್ ಹೆಲ್ತ್ ಪ್ರೋಗ್ರಾಂ ಅಡಿಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ, ವರ್ಷದಲ್ಲಿ ವಾರ್ಡಿನ ಜನತೆಯ ಆರೋಗ್ಯದಲ್ಲಿ ಸುಧಾರಣೆ ತರುವ ಕಾರ್ಯಕ್ರಮ ಕೈಗೆತ್ತಿ ಕೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಕಾರ್ಯಕ್ರಮ ಒಂದು ಮಾದರಿಯಾಗಿ ನಡೆಯಲಿದೆ ಎಂದರು.ಯೋಗ ವಸ್ತು ಪ್ರದರ್ಶನ: ವಸ್ತು ಪ್ರದರ್ಶನ ಆವರಣ ದಲ್ಲಿ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಯೋಗದ ಪ್ರಯೋಜನ ಕುರಿತು ಅರಿವು ಮೂಡಿಸಲು ಆಧುನಿಕ ಸಂವಹನಾ ತಂತ್ರಜ್ಞಾನ ಗಳ ಬಳಕೆ ಮೂಲಕ ಏರ್ಪಡಿಸಿರುವ ಈ ಡಿಜಿಟಲ್ ವಸ್ತು ಪ್ರದರ್ಶನ ನಮ್ಮ ದೇಹ ಮತ್ತು ಮನಸ್ಸು ಅರ್ಥ ಮಾಡಿ ಕೊಳ್ಳಲು ಸಹಕಾರಿಯಾಗಲಿದೆ. ಇಂದು ಮತ್ತು ನಾಳೆ (ಜೂ.22) ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಾರ್ವಜನಿ ಕರು ಭೇಟಿ ನೀಡಬಹುದು ಎಂದು ಮಾಹಿತಿ ನೀಡಿದರು.

Translate »