ಬಂದ್ ಆಗಿರುವ ಮೈಸೂರು ವಿಕ್ರಂ ಜೇಷ್ಠ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸಾ ವ್ಯವಸ್ಥೆ
ಮೈಸೂರು

ಬಂದ್ ಆಗಿರುವ ಮೈಸೂರು ವಿಕ್ರಂ ಜೇಷ್ಠ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸಾ ವ್ಯವಸ್ಥೆ

July 8, 2020

ಮೈಸೂರು, ಜು.7 (ಆರ್‍ಕೆ)- ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ಸೋಂಕಿತರ ಚಿಕಿತ್ಸೆಗಾಗಿ ಹೆಚ್ಚುವರಿ ಆಸ್ಪತ್ರೆ ವ್ಯವಸ್ಥೆ ಶೋಧನೆ, ಸಿದ್ಧತೆಯಲ್ಲಿ ತೊಡಗಿದ್ದು, ಕೆಲ ವರ್ಷದಿಂದ ಸೇವೆ ಸ್ಥಗಿತಗೊಳಿಸಿದ್ದ ಪ್ರಸಿದ್ಧ ವಿಕ್ರಂ ಜೇಷ್ಠ ಆಸ್ಪತ್ರೆಯನ್ನು ಈ ಉದ್ದೇಶಕ್ಕೆ ವಶಕ್ಕೆ ಪಡೆಯಲಾಗಿದೆ.

ಕೆಆರ್‍ಎಸ್ ರಸ್ತೆಯಲ್ಲಿರುವ ಜಿಲ್ಲಾ ಕೋವಿಡ್ ಆಸ್ಪತ್ರೆ ಕಟ್ಟಡದಲ್ಲಿ ಇರುವ ಎಲ್ಲಾ 200 ಹಾಸಿಗೆಗಳೂ ಭರ್ತಿಯಾಗಿರುವುದರಿಂದ ಈಗಾಗಲೇ ಇಎಸ್‍ಐ ಆಸ್ಪತ್ರೆ, ಮಂಡಕಳ್ಳಿ ಬಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ (ಕೆಎಸ್‍ಓಯು)ದ ವಿಸ್ತರಣಾ ನೂತನ ಕಟ್ಟಡವನ್ನು ಕೋವಿಡ್ ಸೋಂಕಿ ತರಿಗೆ ಚಿಕಿತ್ಸೆ ನೀಡಲು ಸಜ್ಜು ಗೊಳಿಸಿ, ಮೀಸಲಾಗಿರಿಸಿದೆ.

ಪ್ರತಿನಿತ್ಯ ಸರಾಸರಿ 50 ಕೋವಿಡ್ ಪಾಸಿಟಿವ್ ಪ್ರಕ ರಣಗಳು ದಾಖಲಾಗುತ್ತಿರು ವುದರಿಂದ, ಜೊತೆಗೆ ಹಲವು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲೂ ಸೋಂಕು ದೃಢಪಡುತ್ತಿರುವ ಕಾರಣ ಅವರ ಪ್ರಾಥಮಿಕ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್‍ನಲ್ಲಿರುವ ಸಿಬ್ಬಂದಿಗೂ ಪಾಸಿಟಿವ್ ಬರುವ ಸಾಧ್ಯತೆ ಇರುವುದರಿಂದ ಮೈಸೂರು ಜಿಲ್ಲಾಡಳಿತ ಕೆಲ ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಕೆಲ ವರ್ಷದಿಂದ ಸೇವೆ ಸ್ಥಗಿತಗೊಂಡು, ಬಾಗಿಲು ಮುಚ್ಚಿರುವ ಮೈಸೂರಿನ ಯಾದವಗಿರಿಯ ವಿವೇಕಾ ನಂದ ರಸ್ತೆಯಲ್ಲಿರುವ `ವಿಕ್ರಂ ಜೇಷ್ಠ ಆಸ್ಪತ್ರೆ’ ಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮುಡಾ ಅಧಿಕಾರಿಗಳು ಇಂದು ಮುಚ್ಚಿರುವ ಈ ಆಸ್ಪತ್ರೆಯ ನೆಲಮಹಡಿ ಸೇರಿ 5 ಮಹಡಿಯನ್ನು ಸ್ವಚ್ಛಗೊಳಿಸಿ, ರಿಪೇರಿ ಮಾಡಿಸುವ ಕೆಲಸ ಆರಂಭಿಸಿದ್ದಾರೆ.

ಸುಮಾರು 100 ಹಾಸಿಗೆ ಸಾಮಥ್ರ್ಯದ ಈ ಆಸ್ಪತ್ರೆಯು ಕಳೆದ 3 ವರ್ಷಗಳಿಂದ ಕಾರ್ಯ ಸ್ಥಗಿತಗೊಂಡಿದ್ದರಿಂದ ಲಿಫ್ಟ್, ವೆಂಟಿಲೇಟರ್, ಸೆಂಟ್ರಲೈಸ್ಡ್ ಆಕ್ಸಿಜನ್ ಸಿಸ್ಟಂ, ಎಲೆಕ್ಟ್ರಿಕ್ ಪೈಪ್‍ಲೈನ್, ಜನರೇಟರ್, ಪ್ಯಾನಲ್ ಬೋರ್ಡ್, ಎಸಿ ಉಪಕರಣಗಳು ಕೆಟ್ಟು ನಿಂತಿದ್ದು, ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿ ಯರ್ (ಎಲೆಕ್ಟ್ರಿಕಲ್) ಹಾಗೂ ಇಬ್ಬರು ಜೂನಿ ಯರ್ ಇಂಜಿನಿಯರ್‍ಗಳು ಸುಮಾರು 50 ಕೆಲಸಗಾರರಿಂದ ಸ್ವಚ್ಛತಾ, ರಿಪೇರಿ ಕೆಲಸ ಮಾಡಿಸುತ್ತಿದ್ದಾರೆ. ಗ್ಯಾಸ್‍ಲೈನ್, ಆಕ್ಸಿ ಜನ್ ಸಂಪರ್ಕ ಮಾರ್ಗಗಳ ಲೀಕೇಜ್ ಪತ್ತೆ ಮಾಡಿ ರಿಪೇರಿ ಮಾಡುವ ತಜ್ಞರ ತಂಡ ವನ್ನು ಕರೆಸಿ ಇಂದು ಬೆಳಿಗ್ಗೆಯಿಂದಲೇ ಕ್ಷಿಪ್ರಗತಿಯ ಕೆಲಸ ನಡೆಯುತ್ತಿದ್ದು, ಎಲ್ಲಾ ಕೊಠಡಿಗಳು, ಐಸಿಯುಗಳಲ್ಲಿ ರಿಪೇರಿ ಕಾರ್ಯ ನಡೆಯುತ್ತಿದೆ.

ಲಿಫ್ಟ್‍ಗಳ ರಿಪೇ ರಿಗೂ ಇಂಜಿನಿಯರ್‍ಗಳನ್ನು ಬೆಂಗಳೂರಿನಿಂದ ಕರೆಸಿ, ಕಾಮಗಾರಿ ಮಾಡಲಾಗು ತ್ತಿದ್ದು, ಇನ್ನೆರಡು ದಿನಗಳಲ್ಲಿ ರಸಾಯನಿಕ ಸಿಂಪಡಿಸಿ ವಿಕ್ರಂ ಜೇಷ್ಠ ಆಸ್ಪತ್ರೆಯನ್ನು ಕೋವಿಡ್ ಸೋಂಕಿತ ಹಿರಿಯ ಅಧಿಕಾರಿ ಗಳು ಹಾಗೂ ಗಣ್ಯರಿಗೆ ಚಿಕಿತ್ಸೆ ನೀಡಲು ಸರ್ವ ರೀತಿಯಲ್ಲಿ ಸಜ್ಜುಗೊಳಿಸಲಾಗು ವುದು ಎಂದು ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್ ತಿಳಿಸಿದ್ದಾರೆ.

Translate »