ರಸ್ತೆಗೆ ವಿಮೆ ಮಾಡಿಸಿದ ಮಾದರಿ ಕ್ಯಾಬ್ ಚಾಲಕ ವಾಸುಗೆ ಸನ್ಮಾನ
ಮೈಸೂರು

ರಸ್ತೆಗೆ ವಿಮೆ ಮಾಡಿಸಿದ ಮಾದರಿ ಕ್ಯಾಬ್ ಚಾಲಕ ವಾಸುಗೆ ಸನ್ಮಾನ

July 8, 2020

ಮೈಸೂರು, ಜು.7(ಆರ್‍ಕೆಬಿ)- ರಸ್ತೆಗೆ ವಿಮೆ ಮಾಡಿಸಿ ಇತರರಿಗೆ ಮಾದರಿಯಾದ ಮೈಸೂರಿನ ಬೋಗಾದಿ 2ನೇ ಹಂತದ ಸಿಎಫ್‍ಟಿಆರ್‍ಐ ಬಡಾವಣೆಯ ಕ್ಯಾಬ್ ಚಾಲಕ ವಾಸು ಅವರ ಸಾಮಾಜಿಕ ಕಳಕಳಿ ಯನ್ನು ಪ್ರಶಂಸಿಸಿ ಬಿಜೆಪಿ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.

ಮುಖಂಡ ಕೌಟಿಲ್ಯ ರಘು ಅವರ ನೇತೃತ್ವ ದಲ್ಲಿ ಬಿಜೆಪಿ ಕಾರ್ಯಕರ್ತರು ವಾಸು ಅವರ ಮನೆಗೆ ತೆರಳಿ ಫಲ ತಾಂಬೂಲ ನೀಡಿ, ಶಾಲು ಹೊದಿಸಿ ಗೌರವಿಸಿದರು. ವಾಸು ಅವರ ಸಾಮಾಜಿಕ ಕಳಕಳಿಯನ್ನು ಪ್ರಶಂ ಸಿಸಿದರು. ಈ ಸಂದರ್ಭ ಮಾತನಾಡಿದ ಕೌಟಿಲ್ಯ ರಘು, ವಾಸು ಅವರು ರಸ್ತೆಗೆ ವಿಮೆ ಮಾಡಿಸುವ ಮೂಲಕ ಮಾದರಿಯಾಗಿ ದ್ದಾರೆ. ಗುತ್ತಿಗೆದಾರರು ರಸ್ತೆ ಕಾಮಗಾರಿ ಯನ್ನು ಬಲು ಎಚ್ಚರಿಕೆಯಿಂದ ಮಾಡಬೇಕು. ಮೂರು ತಿಂಗಳಿಗೆ, 6 ತಿಂಗಳಿಗೆ ರಸ್ತೆಗಳು ಹಾಳಾಗುವಂತಾಗಬಾರದು. ಏಕೆಂದರೆ ನಾಳೆ ರಸ್ತೆಗೆ ವಿಮೆ ಮಾಡಿದರೆ ವಿಮಾ ಕಂಪನಿಯವರು ಪರಿಹಾರದ ಹಣ ನೀಡುವ ಮುನ್ನ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಬಹುದು ಎಂದು ಹೇಳಿದರು.

`ಇದು ನಮ್ಮದು, ನಮ್ಮ ನಿಯಮ, ನಮ್ಮ ಕಂದಾಯ’ ಎಂಬ ಪೌರಪ್ರಜ್ಞೆ, ಜತೆಗೆ ಪ್ರಶ್ನಿ ಸುವ ಮನೋಭಾವ ಇದ್ದರೆ ಉತ್ತಮ ಸಮಾಜ ನಿರ್ಮಾಣ ಕಾರ್ಯ ಸಾಧ್ಯವಾಗು ತ್ತದೆ ಎಂದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಲಕ್ಷ್ಮೀದೇವಿ ಮತ್ತಿತರರಿದ್ದರು.

ಸನ್ಮಾನ ಸ್ವೀಕರಿಸಿದ ವಾಸು, ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಕೆಲಸ ಚೆನ್ನಾಗಿದೆ. ಹಾಗೆಯೇ ಇನ್ಫೋಸಿಸ್ ಫೌಂಡೇ ಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಕಾರ್ಯಗಳು ಮೆಚ್ಚುಗೆಯಾಗುತ್ತವೆ. ಈ ಇಬ್ಬರೂ ನನಗೆ ಸ್ಫೂರ್ತಿ. ಮೋದಿ, ಸುಧಾ ಮೂರ್ತಿ, ಧರ್ಮಸ್ಥಳ ಧರ್ಮಾಧಿಕಾರಿ ಗಳನ್ನು ನೋಡಿ ಅವರ ಆಶೀರ್ವಾದ ಪಡೆಯುವ ಮಹದಾಸೆ ಇದೆ ಎಂದರು.

ವಾಸು ಇತ್ತೀಚೆಗೆ ತಮ್ಮ ಮನೆ ಮುಂದಿನ 96.80 ಮೀಟರ್ ಉದ್ದ ಮತ್ತು 4 ಮೀಟರ್ ಅಗಲದ ರಸ್ತೆಯನ್ನು ಓರಿಯಂಟಲ್ ಕಂಪನಿಯಲ್ಲಿ 3.23 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದು, ಮೊದಲ ವಿಮಾ ಕಂತು 899 ರೂ.ಗಳನ್ನು ಸ್ವಂತ ಹಣದಲ್ಲಿ ಭರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »