ಅಟಲ್ ಸ್ಮರಣಾರ್ಥ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ನೆರವು
ಮೈಸೂರು

ಅಟಲ್ ಸ್ಮರಣಾರ್ಥ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ನೆರವು

December 24, 2020

ಮೈಸೂರು,ಡಿ.23(ಎಂಟಿವೈ)-ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ 9 ಕೋಟಿ ರೈತರಿಗೆ 18 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದಾರೆ. ಡಿ.25ರ ಮಧ್ಯಾಹ್ನ 12ಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾ ಯಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಈ ಕಾರ್ಯ ಕ್ರಮದ ನೇರಪ್ರಸಾರವನ್ನು ಬಿಜೆಪಿಯ ಮೈಸೂರು ನಗರ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ, ರಾಜ್ಯ ಸರ್ಕಾರ ಗಳು ಸದಾ ರೈತರ ಹಿತ ಕಾಯುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. ಆ ಮೂಲಕ ಕೃಷಿ ಕ್ಷೇತ್ರದ ಮೇಲಿರುವ ಕಾಳಜಿ ಪ್ರದರ್ಶಿಸುತ್ತಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ವಿವಿಧ ರಾಜ್ಯಗಳ 9 ಕೋಟಿ ರೈತರಿಗೆ ಕೃಷಿ ಚಟುವಟಿಕೆಗೆ ನೆರವಾಗಲು ತಲಾ 2000 ರೂ.ಗಳ (ಒಟ್ಟು 18 ಸಾವಿರ ಕೋಟಿ ರೂ.) ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡ ಲಿರುವ ಪ್ರಧಾನಿ ಮೋದಿ, ಬಳಿಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಪಕ್ಷದ ಮೈಸೂರು ಕಚೇರಿಯಲ್ಲಿ ರೈತರನ್ನು ಸನ್ಮಾನಿಸಲಾಗುವುದು. ಇದೇ ಬಗೆಯ ಕಾರ್ಯ ಕ್ರಮಗಳು ಪಕ್ಷದ ಪ್ರತಿ ಮಂಡಲ ದಲ್ಲೂ ನಡೆಯಲಿವೆ ಎಂದರು.

ಕಾಂಗ್ರೆಸ್ ತನ್ನ ಇಡೀ ಅಧಿಕಾರ ಅವಧಿಯಲ್ಲಿ ಒಟ್ಟು 57 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಒಂದೇ ವರ್ಷದಲ್ಲಿ 72 ಸಾವಿರ ಕೋಟಿ ರೂ. ಪೆÇ್ರೀತ್ಸಾಹ ಧನವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಮೋದಿ ಅವರು ತಮ್ಮ ಮೊದಲ 5 ವರ್ಷಗಳ ಅವಧಿಯಲ್ಲಿಯೇ ಪೂರ್ಣಗೊಳಿಸಿದ್ದಾರೆ ಎಂದರು. ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಜಿಲ್ಲಾ ಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಮಾಧ್ಯಮ ವಕ್ತಾರ ಎಂ.ಬಿ.ಮಹೇಶ್ ಸುದ್ದಿಗೋಷ್ಠಿಯಲ್ಲಿದ್ದರು.

Translate »