ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಕ್ರಿಸ್‍ಮಸ್ ಆಚರಣೆ
ಮೈಸೂರು

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಕ್ರಿಸ್‍ಮಸ್ ಆಚರಣೆ

December 24, 2020

ಮೈಸೂರು, ಡಿ.23(ಎಂಕೆ)- ಮೈಸೂ ರಿನ ನಾಯ್ಡು ನಗರದಲ್ಲಿರುವ ಬಾಲ ಯೇಸು ಚರ್ಚ್‍ನ ಸಭಾಂಗಣದಲ್ಲಿ ಬುಧವಾರ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಘಟಕ ದಿಂದ ಸಡಗರ-ಸಂಭ್ರಮದಿಂದ ಕ್ರಿಸ್ ಮಸ್ ಆಚರಣೆ ಮಾಡಲಾಯಿತು.

ಗೋದಲಿಯೊಳಗಿದ್ದ ಬಾಲಯೇಸು ವಿನ ಮೂರ್ತಿಯನ್ನು ಹೂಗಳಿಂದ ಅಲಂ ಕರಿಸುವ ಮೂಲಕ ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ) ಅಧ್ಯಕ್ಷ ಹೆಚ್.ವಿ. ರಾಜೀವ್ ಕ್ರಿಸ್‍ಮಸ್ ಹಬ್ಬಕ್ಕೆ ಚಾಲನೆ ನೀಡಿದರು. ಇದೇ ವೇಳೆ ಕ್ರಿಸ್‍ಮಸ್ ಗೀತೆ ಹಾಡಲಾಯಿತು. ಛಾಯಾದೇವಿ ಬಿ.ಇಡಿ ಕಾಲೇಜು ವಿದ್ಯಾರ್ಥಿಗಳು ಯೇಸು ಜನನ ಕುರಿತು ನಾಟಕ ಪ್ರದರ್ಶಿಸಿದರು. ಸಾಂತಾ ಕ್ಲಾಸ್ ವೇಷತೊಟ್ಟು ಕೆಂಪು ಟೋಪಿ ಜೊತೆಗೆ ಚಾಕಲೇಟ್ ವಿತರಿಸಿದರು. ಸೋಲೋ ಮನ್ ತಂಡದವರು ಕ್ರಿಸ್‍ಮಸ್ ಶುಭಾ ಷಯ ಗೀತೆಗಳನ್ನು ಹಾಡಿ ಮೆಚ್ಚುಗೆ ಗಳಿಸಿದರು. ಕ್ರೈಸ್ತ ಧರ್ಮಗುರು ಪ್ರಸನ್ನ ಕುಮಾರ್ ಮಾತನಾಡಿ, ಪ್ರಪಂಚದ ಎಲ್ಲರೂ ಪ್ರೀತಿ, ನೆಮ್ಮದಿಯಿಂದ ಇರಬೇಕೆನ್ನುವುದು ಯೇಸುವಿನ ಸಂದೇಶ ಎಂದರು.

ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತ ನಾಡಿ, ಸಮಾಜದಲ್ಲಿ ಅಧರ್ಮ ಹೆಚ್ಚಾದ ಸನ್ನಿವೇಶದಲ್ಲಿ ಯೇಸುವಿನಂತಹ ದೇವತೆಗಳು ಜನಿಸಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುತ್ತಾರೆ ಎಂದರು. ಎಲ್ಲರಿಗೂ ಕ್ರಿಸ್ ಮಸ್ ಶುಭಾಷಯ ತಿಳಿಸಿದರು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯ ದರ್ಶಿ ಅನಿಲ್ ಥಾಮಸ್, ಎನ್‍ಆರ್ ಕ್ಷೇತ್ರ ಘಟಕದ ಅಧ್ಯಕ್ಷ ಭಾನುಪ್ರಕಾಶ್, ಸಿ.ಅಂತೋಣಿ ಪಾಲ್ ರಾಜ್, ಮಮತಾ ಮತ್ತಿತರÀರಿದ್ದರು.

Translate »