ನಗರ, ಮಂಡಿ ಪೊಲೀಸರಿಂದ ಕೊರೊನಾ ಜಾಗೃತಿ
ಮೈಸೂರು

ನಗರ, ಮಂಡಿ ಪೊಲೀಸರಿಂದ ಕೊರೊನಾ ಜಾಗೃತಿ

December 24, 2020

ಮೈಸೂರು,ಡಿ.23(ಎಂಕೆ)-ಮೈಸೂರು ನಗರ ಪೊಲೀಸ್, ಮಂಡಿ ಪೊಲೀಸ್ ಠಾಣೆಯಿಂದ ನಗರದ ಮಿಷನ್ ಆಸ್ಪತ್ರೆ ವೃತ್ತದಲ್ಲಿ ಬುಧವಾರ ಕೊರೊನಾ ಜನಜಾಗೃತಿ ಆಂದೋಲನ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಸಿಜೆಎಂ ನ್ಯಾಯಾ ಲಯ ಮತ್ತು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಕೆ.ವಿದ್ಯಾ ಮಾತನಾಡಿ, ಕೊರೊನಾ ಸೋಂಕಿದ್ದರೆ ಆಗ ಸಕಾರಾತ್ಮಕ ಚಿಂತನೆ, ಧೈರ್ಯ ಮೈಗೂಡಿಸಿಕೊಂಡರೆ ಬೇಗ ಗುಣವಾಗಬಹುದು. ಮಾಸ್ಕ್, ಸ್ಯಾನಿಟೆಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೋಂಕು ತಗುಲದಂತೆ ನೋಡಿಕೊಳ್ಳÀಬಹುದು ಎಂದು ಗಮನ ಸೆಳೆದರು.

ಯುವಕರು ಕಾನೂನು, ಸಂಚಾರ ನಿಯಮ ಅರಿಯಬೇಕು. ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಸಂಚಾರ ಮೊದಲಾದ ಕ್ರಿಯೆಗಳಿಂದ ಅನಾನುಕೂಲವೇ ಹೊರತು ಯಾವುದೇ ಒಳಿತಿಲ್ಲ. ಕಾನೂನಿನ ದುರ್ಬಳಕೆ ಸಲ್ಲ ಎಂದರು. ಎಸಿಪಿ ಶಿವಶಂಕರ್ ಮಾತನಾಡಿ, ಕಾನೂನಿರುವುದು ಪೊಲೀಸರಿ ಗಷ್ಟೆ, ನಮಗಲ್ಲ ಎಂದು ತಪ್ಪಾಗಿ ತಿಳಿದವರೇ ಇತ್ತೀಚೆಗೆ ಹೆಚ್ಚಾಗುತ್ತಿ ದ್ದಾರೆ. ಪೊಲೀಸರು ದಂಡ ಹಾಕುತ್ತಾರೆನ್ನುವ ಭಯದಲ್ಲಿ ಮಾಸ್ಕ್, ಹೆಲ್ಮೆಟ್ ಹಾಕುತ್ತೇವೆ ಅಷ್ಟೆ ಎನ್ನುತ್ತಾರೆ. ಶಾಂತಿ, ಸುವ್ಯವಸ್ಥೆ ಯಿಂದ ಜೀವನ ಸಾಗಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಾನೂನು ಪಾಲಿಸಬೇಕು. ಇಲ್ಲದಿದ್ದರೆ ಬಲ ಪ್ರಯೋಗ, ದಂಡ ಪ್ರಯೋಗ ಅನಿವಾರ್ಯವಾಗುತ್ತದೆ ಎಂದರು. ಇದೇ ವೇಳೆ ಸಾರ್ವಜನಿ ಕರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು. ಮಂಡಿ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ನಾರಾಯಣಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಸುಹೇಲ್ ಬೇಗ್ ಮತ್ತಿತರರಿದ್ದರು.

Translate »