ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ: ಪ್ರೊ. ಶಿವಪ್ಪ ಅಭಿಮತ
ಮೈಸೂರು

ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ: ಪ್ರೊ. ಶಿವಪ್ಪ ಅಭಿಮತ

December 24, 2020

ಮೈಸೂರು, ಡಿ.22(ಎಸ್‍ಪಿಎನ್)- ದಲಿತ ಸಾಹಿತಿ ದೇವನೂರ ಮಹಾದೇವ ರಚಿತ `ಕುಸುಮಾ ಬಾಲೆ’ಯಲ್ಲಿ ಉಲ್ಲೇಖವಾಗಿ ರುವ `ಸಂಬಂಜ ಅನ್ನೋದಾ ದೊಡ್ಡದು ಕನಾ’… ಈ ವಾಕ್ಯವನ್ನು ನಾನಾ ವಿಧವಾಗಿ ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಸಂಬಂಧಕ್ಕೂ ಸಂವಹನವೇ ಅಡಿಪಾಯ ಎಂದು ಮೈಸೂರು ವಿವಿ ಕುಲ ಸಚಿವ ಪ್ರೊ. ಆರ್.ಶಿವಪ್ಪ ಅಭಿಪ್ರಾಯಪಟ್ಟರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಪ್ನ ರಚಿಸಿದ `ಕಾರ್ಪೊರೇಟ್ ಕಮ್ಯುನಿ ಕೇಷನ್’ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಮಾತನಾಡಿ, ಸುಸ್ಥಿರ ಸಂಬಂಧಗಳಿಗೆ ಸಂವಹನ ಅಡಿಪಾಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ಸಂವಹನ ಚೆನ್ನಾಗಿ ದ್ದರೆ ಮಿತ್ರರಾಷ್ಟ್ರಗಳ ಜತೆ ವ್ಯವಹಾರ ಸುಲಲಿತ ಎಂದರು. ಒಂದು ಸಂದರ್ಭಕ್ಕೆ ಮೌನವೂ ದೊಡ್ಡ ಸಂವಹನ ಎಂದರು.

ಶಿಕ್ಷಕರಿಗೆ, ಹತ್ತಾರು ವರ್ಷಗಳ ಅಧ್ಯ ಯನ, ವಿದ್ಯಾರ್ಥಿಗಳೊಂದಿಗೆ ಸಂವಹನದ ಅನುಭವ ಅಪಾರ ಜ್ಞಾನದ ಕೇಂದ್ರವಾಗಿ ರುತ್ತದೆ. ಇದನ್ನು ಪುಸ್ತಕ ರೂಪದಲ್ಲಿ ದಾಖ ಲಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಮಾಹಿತಿ ನೀಡಿದಂತಾಗುತ್ತದೆ. ನಾನೇ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸಲು ಯತ್ನಿಸಿ 3 ಪುಸ್ತಕಗಳನ್ನು ತರಲು ಪ್ರಯ ತ್ನಿಸಿದೆ. ಎರಡು ವರ್ಷ ಕಳೆದರೂ ಇನ್ನೂ ಪ್ರಕಟಿಸಲು ಸಾಧ್ಯವಾಗಿಲ್ಲ. ಎಂ.ಎಸ್.ಸಪ್ನ ಅವರ `ಕಾರ್ಪೋರೇಟ್ ಕಮ್ಯುನಿಕೇ ಷನ್’ ಕೃತಿ ಉತ್ತಮವಾಗಿದೆ ಎಂದು ಮೈವಿವಿ ಕುಲಪತಿ ಜಿ.ಹೇಮಂತ್ ಕುಮಾರ್ ಹೇಳಿದರು. ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ ದಕ್ಷಿಣ ವಲ ಯದ ಛೇರ್ಮನ್ ಜಯಪ್ರಕಾಶ್ ರಾವ್, ಪಿಆರ್‍ಸಿಐ ಎಮೆರಿಟಸ್ ವಿಭಾಗದ ಛೇರ್ಮನ್ ಎಂ.ಬಿ.ಜಯರಾಂ ವೇದಿಕೆಯಲ್ಲಿದ್ದರು.

Translate »