ಗೃಹಿಣಿ ಮೇಲೆ ಹಲ್ಲೆ: ನಾಲ್ವರ ಬಂಧನ
ಮೈಸೂರು

ಗೃಹಿಣಿ ಮೇಲೆ ಹಲ್ಲೆ: ನಾಲ್ವರ ಬಂಧನ

November 20, 2018

ಮೈಸೂರು: ಗೃಹಿಣಿ ಮೇಲೆ ಮಾರ ಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಮೈಸೂರಿನ ಎನ್.ಆರ್. ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಶಿವಾಜಿ ರಸ್ತೆ ನಿವಾಸಿ, ಗುಜರಿ ವ್ಯಾಪಾರಿ ಮೀರ್ ಸಲಾವುದ್ದೀನ್ ಅವರ 2ನೇ ಪತ್ನಿ ಆಯಿಷಾ ಸಿದ್ಧಿಕ್ ಅವರ ಮೇಲೆ ಹಲ್ಲೆ ನಡೆಸಿದ್ದ ಮುಜೀಬ್ ಉರ್ ರೆಹಮಾನ್, ಉಮರ್ ಖಾನ್, ಸಿದ್ಧಿಖ್ ಖಾನ್ ಹಾಗೂ ಆದಿಲ್‍ನನ್ನು 3 ದಿನಗಳ ಹಿಂದೆ ಬಂಧಿಸಿರುವ ಪೊಲೀಸರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕುಶಾಲನಗ ರದ ಮುಜೀಬ್ ಉರ್ ರೆಹಮಾನ್ ಹಾಗೂ ಆತನ ಪತ್ನಿ, ಆಯಿಷಾ ಸಿದ್ಧಿಕ್ ಅವರ ಮನೆಗೆ ಆಗಾಗ್ಗೆ ಬಂದು ಹೋಗು ತ್ತಿದ್ದರು.

ಹಾಗೆಯೇ ಅ.18ರಂದು ರಾತ್ರಿ 10.30ಕ್ಕೆ ಈ ದಂಪತಿಯೊಂದಿಗೆ ಇನ್ನೂ ನಾಲ್ವರು ಮನೆಗೆ ಬಂದು, ಮುಜೀಬ್ ಉರ್ ರೆಹಮಾನ್ ಅವರ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಅಪ ಪ್ರಚಾರ ಮಾಡುತ್ತಿರುವುದಾಗಿ ಆರೋಪಿಸಿ ಆಯಿಷಾ ಸಿದ್ಧಿಕ್ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದರು. ಬಳಿಕ ಆಯಿಷಾ ಸಿದ್ಧಿಕ್ ಅವರ ಪತಿ ಮೀರ್ ಸಲಾವುದ್ಧೀನ್‍ಗೆ ಕರೆ ಮಾಡಿ, ಕರೆಸಿಕೊಂಡು ನಿನ್ನ ಪತ್ನಿ ಮೇಲೆ ಹಲ್ಲೆ ನಡೆಸಿರುವುದನ್ನು ಪೊಲೀಸ ರಿಗೆ ಹಾಗೂ ಬೇರೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವು ದಾಗಿ ಬೆದರಿಕೆ ಹಾಕಿ, ಸಾಕ್ಷಿ ಸಿಗದಂತೆ ಸಿಸಿಟಿವಿ ಡಿವಿಆರ್ ಅನ್ನೂ ಕಿತ್ತುಕೊಂಡು ಹೋಗಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Translate »