ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್ ಸ್ಥಗಿತ
ಮೈಸೂರು

ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್ ಸ್ಥಗಿತ

November 20, 2018

ಮೈಸೂರು:  ಮೈಸೂರು ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನಿಂದ ದೂರ ಉಳಿದಿದ್ದು, ಇದರಿಂದ ಜಿಲ್ಲಾ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣದ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಜಿಲ್ಲಾ ಪೊಲೀಸ್ ವೆಬ್‍ಸೈಟ್‍ನ ಕ್ರೈಂ ಫೈಲ್‍ನಲ್ಲಿ 2017ರ ಮೇ 9ರವರೆಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ವಿವರ ಬಿಟ್ಟರೆ, ನಂತರ ನಡೆದ ಪ್ರಕರಣದ ವಿವರಗಳ ಮಾಹಿತಿ ದೊರಕುತ್ತಿಲ್ಲ. ಮೇ.9ರಂದು ಜಯಪುರ, ಮೈಸೂರು ದಕ್ಷಿಣ, ಹುಣಸೂರು, ಬೆಟ್ಟದಪುರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಪ್ರಕರಣ, ಹೆಚ್.ಡಿ.ಕೋಟೆ ಹಾಗೂ ಹುಲ್ಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ ಬಂಧನ. ನಂಜನಗೂಡು ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ನಾಪತ್ತೆ ಹಾಗೂ ತಿ.ನರಸೀಪುರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ. ಮೇ 10ರಿಂದ ಇಂದಿನವರೆಗೆ ದಾಖಲಾದ ಪ್ರಕರಣಗಳ ಕುರಿತ ಮಾಹಿತಿ ವೆಬ್‍ಸೈಟ್‍ನಲ್ಲಿ ದಾಖಲಿಸಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳ ಮಾಹಿತಿಗಳನ್ನು ಇಂಟರ್‍ನೆಟ್‍ನಲ್ಲಿ ಲಭ್ಯವಾಗುವಂತೆ ನಿರ್ವಹಿಸಲು ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಇದನ್ನು ಉಪಯೋಗಿಸುವ ವಿಧಾನ ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿದಿಲ್ಲವೆ? ಅಥವಾ ಇದರ ನಿರ್ವಹಣೆಗೆ ಬೇಕಾದ ಅಗತ್ಯ ಸಿಬ್ಬಂದಿ ಕೊರತೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಪೊಲೀಸ್ ಇಲಾಖೆ ಸೇರಿದಂತೆ ಮತ್ತಿತರೆ ಇಲಾಖೆಗಳಲ್ಲೂ ಡಿಟಜಿಲ್ ಮೂಲಕ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸಬೇಕು ಎಂಬ ಪ್ರಯತ್ನದಲ್ಲಿರುವಾಗಲೇ ಜಿಲ್ಲಾ ಪೊಲೀಸ್ ಇಲಾಖೆ ಮಾತ್ರ ಡಿಜಿಟಲ್ ಆಡಳಿತದಿಂದ ವಿಮುಖವಾಗಿರುವುದು ಬೇಸರದ ಸಂಗತಿ.

ಜಿಲ್ಲಾ ಎಸ್ಪಿ ಭಾವಚಿತ್ರವೇ ಇಲ್ಲ: ಕೆಲವು ತಿಂಗಳ ಹಿಂದೆ ಮೈಸೂರು ಜಿಲ್ಲಾ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅಮಿತ್‍ಸಿಂಗ್ ಅವರ ಭಾವಚಿತ್ರ, ಅವರ ಕುರಿತ ವಿವರಣೆಯಾಗಲಿ ವೆಬ್‍ಸೈಟ್‍ನಲ್ಲಿ ಲಭ್ಯವಿಲ್ಲದಿರುವುದು ಬೇಸರದ ಸಂಗತಿ.

Translate »