ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ
ಮೈಸೂರು

ಕಂಪ್ಯೂಟರ್ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ

November 20, 2018

ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿಮತ
ಮೈಸೂರು: ಆಧುನಿಕ ಯುಗದಲ್ಲಿ ಕಂಪ್ಯೂಟರ್‍ಗಳ ಬಳಕೆ ಹೆಚ್ಚಾಗಿದ್ದರೂ ಪುಸ್ತಕಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಪುಸ್ತಕಗಳು ಎಂದೆಂದಿಗೂ ಶಾಶ್ವತ ದಾಖಲೆಗಳು ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅಭಿವ್ಯಕ್ತಪಡಿಸಿದರು.

ಕುವೆಂಪುನಗರದಲ್ಲಿರುವ ಗ್ರಂಥಾಲಯ ದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2018’ರ ಅಂಗವಾಗಿ ಆಯೋಜಿಸಿದ್ದ ‘ಪುಸ್ತಕ ಪ್ರದರ್ಶನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಸಿಗುವಂ ತಹ ಗ್ರಹಿಕೆ ಕಂಪ್ಯೂಟರ್ ಬಳಕೆಯಿಂದ ದೊರೆಯುವುದಿಲ್ಲ. ಕಂಪ್ಯೂಟರ್ ಹಾಗೂ ಮೊಬೈಲ್‍ಗಳು ಹೆಚ್ಚಾಗುತ್ತಿದ್ದರೂ ಪುಸ್ತಕ ಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಪ್ರತಿದಿನವೂ ಹೊಸ ಹೊಸ ಪುಸ್ತಕಗಳು ಬಿಡುಗಡೆಯಾಗುತ್ತಿರುವುದನ್ನು ಕಾಣು ತ್ತೇವೆ ಎಂದರು. ಕುವೆಂಪುನಗರದ ಗ್ರಂಥಾಲಯ ವಿಶಾಲವಾಗಿದ್ದು, ಓದುಗರಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳಿಗೆ ಬೇಕಾ ದಂತಹ ಎಲ್ಲಾ ರೀತಿ ಪುಸ್ತಕಗಳು ಇಲ್ಲಿ ಲಭ್ಯವಿವೆ. ನಾನು ಸಹ ವಿದ್ಯಾರ್ಥಿಯಾಗಿ ದ್ದಾಗ ಗ್ರಂಥಾಲಯಗಳಿಗೆ ನಿರಂತರವಾಗಿ ಹೋಗುತ್ತಿದ್ದೆ.

ಗ್ರಂಥಾಲಯ ನನ್ನ ನೆಚ್ಚಿನ ಸ್ಥಳ ಎಂದು ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ಹಿರಿಯ ಸಾಹಿತಿ ಆರ್ಯಾಂಬ ಪಟ್ಟಾಭಿ ಮಾತನಾಡಿ, ಪುಸ್ತಕ ಓದುವ ಹವ್ಯಾಸವನ್ನು ಬಾಲ್ಯದಿಂದಲೇ ಬೆಳೆಸಿ ಕೊಳ್ಳಬೇಕು. ವಿದ್ಯಾರ್ಥಿಗಳು ಮನೆಯಲ್ಲಿ ಪುಸ್ತಕಗಳನ್ನು ಶೇಖರಣೆ ಮಾಡುವುದ ರಿಂದ ಓದುವ ಹವ್ಯಾಸ ತಾನಾಗಿಯೇ ಬೆಳೆಯುತ್ತದೆ. ಮನೆಯ ವಾತಾವರಣ ಸಹ ಬಹಳ ಚೆನ್ನಾಗಿರುತ್ತದೆ. ಗ್ರಂಥಾಲಯ ಗಳಲ್ಲಿ ಮಾತ್ರ ಶಾಂತವಾಗಿರುವ ವಾತಾ ವರಣ ಹಾಗೂ ಒಳ್ಳೆಯ ಪುಸ್ತಕಗಳು ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಗ್ರಂಥಾಲಯಗಳಿಗೆ ಹೋಗಬೇಕು ಎಂದು ಸಲಹೆ ನೀಡಿದರು.

ಪುಸ್ತಕಗಳನ್ನು ನಿರಂತರವಾಗಿ ಓದುವುದರಿಂದ ಕಥೆ, ಕಾದಂಬರಿಗಳನ್ನು ಬರೆಯುವ ಹವ್ಯಾಸ ಬೆಳೆಯುತ್ತದೆ. ಶಾಲಾ ಕಾಲೇಜುಗಳು ಸಹ ವಿದ್ಯಾರ್ಥಿಗಳಿ ಗಾಗಿ ಕಥಾ ಸ್ಪರ್ಧೆ, ಪ್ರಬಂಧ ಸ್ಪಧೆಗಳನ್ನು ಆಯೋಜಿಸಬೇಕು. ಪುಸ್ತಕಗಳನ್ನು ಓದುವಾಗ ಸಿಗುವ ಸಂತೋಷ ಮೊಬೈಲ್ ನಲ್ಲಿ ಸಿಗುವುದಿಲ್ಲ. ಪುಸ್ತಕ ಜೀವಂತ ಮಗುವಾದರೆ, ಕಂಪ್ಯೂಟರ್ ಜೀವ ಇಲ್ಲದ ಗೊಂಬೆಯಂತೆ. ವಿದ್ಯಾರ್ಥಿಗಳು ಪುಸ್ತಕಗಳಿಗೆ ಅವಲಂಬಿತರಾಗಬೇಕು ಎಂದು ಹೇಳಿದರು. ಕುವೆಂಪು ನಗರ ಶಾಖೆ ಪ್ರಭಾರದಾರ ರಮೇಶ್, ಲತಾ, ಎ.ಜಿ.ದೇವರಾಜು ಉಪಸ್ಥಿತರಿದ್ದರು.

Translate »