ಮಾಹಿತಿ, ಮೋಜಿಗೆ ಮಾತ್ರವಲ್ಲ ವಾಟ್ಸಾಪ್, ಫೇಸ್‍ಬುಕ್: ಜೀವನಕ್ಕೆ ದಾರಿಯು ಉಂಟು
ಮೈಸೂರು

ಮಾಹಿತಿ, ಮೋಜಿಗೆ ಮಾತ್ರವಲ್ಲ ವಾಟ್ಸಾಪ್, ಫೇಸ್‍ಬುಕ್: ಜೀವನಕ್ಕೆ ದಾರಿಯು ಉಂಟು

November 20, 2018

ಸಾಮಾಜಿಕ ಜಾಲತಾಣದ ಮೂಲಕ ಉದ್ಯೋಗದಾತ!
ಮೈಸೂರು: ಪ್ರಸ್ತುತ ದಿನಗಳಲ್ಲಿ ಫೇಸ್‍ಬುಕ್, ವಾಟ್ಸಾಪ್ ಮತ್ತಿತರೆ ಸಾಮಾಜಿಕ ಜಾಲತಾಣದಿಂದ ಉಂಟಾಗುತ್ತಿ ರುವ ಅವಾಂತರಗಳ ಪಟ್ಟಿಯೇ ದೊಡ್ಡದಿದೆ. ಆದರೆ, ಇಲ್ಲೊಬ್ಬರು ವಾಟ್ಸಾಪ್ ಅನ್ನೇ ಬಳಸಿ ಕೊಂಡು ಹಲವರಿಗೆ ಉದ್ಯೋಗ ದೊರೆಯು ವಂತೆ ಮಾಡುವ ಮೂಲಕ ಸಾಮಾಜಿಕ ಜಾಲತಾಣವನ್ನು ಹೀಗೂ ಬಳಸಿಕೊಳ್ಳ ಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ, ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಕಾಫಿ ಪಾಯಿಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಸ್. ಅಚ್ಯುತಾನಂದ ಅವರು ಆರಂಭಿಸಿದ ‘ಉದ್ಯೋಗ ನಿಮಿತ್ತಂ’ ವಾಟ್ಸಾಪ್ ಗ್ರೂಪ್‍ನಿಂದ ಇದುವರೆಗೆ 250ಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದಿದ್ದಾರೆ. ಯಾವುದೇ ಮಧ್ಯವರ್ತಿ ಗಳ ಹಾವಳಿ ಇಲ್ಲದೆ, ಜಾಬ್ ಕನ್ಸಲ್ಟೆನ್ಸಿಗಳ ಮಧ್ಯ ಪ್ರವೇಶವಿಲ್ಲದೆ ಉದ್ಯೋಗ ನೀಡುವ ವೇದಿಕೆಯನ್ನು ಕಲ್ಪಿಸಲಾಗಿದೆ.

ಅಚ್ಯುತಾನಂದ ಅವರು ನೇರವಾಗಿ ಉದ್ಯೋಗಾಕಾಂಕ್ಷಿಗಳನ್ನು ಭೇಟಿ ಮಾಡುವ ವೇದಿಕೆ ಸೃಷ್ಟಿಸಬೇಕು. ಅದರ ಲ್ಲಿಯೂ ಮುಖ್ಯವಾಗಿ ಉದ್ಯೋಗದ ಅಗತ್ಯ ವಿರುವ ಗ್ರಾಮೀಣ ಭಾಗದ ಯುವಕ-ಯುವತಿಯರನ್ನು ಮುಖ್ಯ ಗುರಿಯಾಗಿಸಿ ಕೊಂಡು ಆರಂಭಿಸಿದ ಈ ಗ್ರೂಪ್, ಉದ್ಯೋಗಿಗಳ ಬಗ್ಗೆ ಮಾಹಿತಿ ಪಡೆದು ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆ ಗಳನ್ನು ಒದಗಿಸುವ ಮೂಲಕ ಉದ್ಯೋಗ ದಾತರು ಮತ್ತು ಉದ್ಯೋಗಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಯಶಸ್ವಿ ಪಯಣದತ್ತ ಹೆಜ್ಜೆ ಇಟ್ಟಿದೆ. ಮೊದಲ ಬಾರಿಗೆ 50 ಮಂದಿ ಯಿಂದ ಆರಂಭವಾದ ಈ ಗುಂಪು, ಪ್ರಸ್ತುತ 14 ತಂಡಗಳಿದ್ದು, ಸುಮಾರು 3,500 ಮಂದಿ ಸದಸ್ಯರನ್ನು ಹೊಂದಿದೆ. ಈ ಗುಂಪಿನ ಮತ್ತೊಂದು ವಿಶೇಷವೆಂದರೆ ವಿವಿಧ ಕಂಪನಿಯ ಮಾನವ ಸಂಪ ನ್ಮೂಲ ವಿಭಾಗದ ಮುಖ್ಯಸ್ಥರು ಮತ್ತು ಸಿಬ್ಬಂದಿ ಸದಸ್ಯರಾಗಿದ್ದಾರೆ.

ಕಂಪೆನಿಗಳು ತಮ್ಮ ಸಂಸ್ಥೆಗೆ ಬೇಕಾದ ಸಿಬ್ಬಂದಿಗಳ ಸಂಖ್ಯೆ, ವಯಸ್ಸು, ಅರ್ಹತೆ, ವೇತನ ಮತ್ತಿತರ ವಿವರವನ್ನು ಗುಂಪಿನಲ್ಲಿ ಪ್ರಕಟಿಸಿದರೆ, ಎಲ್ಲಾ ರೀತಿಯ ವಿದ್ಯಾ ರ್ಹತೆ ಮತ್ತು ವಯಸ್ಸಿನವರೂ ಈ ಗುಂಪಿನಲ್ಲಿ ಸದಸ್ಯರಾಗಿರುವುದರಿಂದ ಅರ್ಹರಿಗೆ ಆಯಾ ಉದ್ಯೋಗಗಳ ದೊರಕಿಸಿಕೊಡಲು ಅನುಕೂಲವಾಗಿದೆ.

ಒಂದೂವರೆ ವರ್ಷದ ಹಿಂದೆ ಆರಂಭ ವಾದ ಈ ಗುಂಪಿನಲ್ಲಿ 3,500ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ಇದುವರೆಗೆ 250 ಕ್ಕೂ ಹೆಚ್ಚು ಮಂದಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಈ ಸಂತಸದ ವಿಷಯ ವನ್ನು ಗುಂಪಿನಲ್ಲಿನ ಇತರೆ ಸದಸ್ಯರೊಡ ನೆಯೂ ಹಂಚಿಕೊಂಡಿದ್ದಾರೆ.

ಪ್ರಸ್ತುತ ಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ವೇಳೆ ವಾಟ್ಸಾಪ್ ಮೂಲಕವೇ ಉದ್ಯೋಗ ದೊರಕಿಸಿಕೊಡುತ್ತಿರುವ ಅಚ್ಯುತಾನಂದ ಅವರನ್ನು ಗುರುತಿಸಿ, ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿನ ಸಾಧನೆಗಾಗಿ ಸಮರ್ಥ ಕನ್ನಡಿಗ ಸಂಘವು 2018ರ ಅ.28ರಂದು ತುಮಕೂರಿನಲ್ಲಿ `ಸಮರ್ಥ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಿದರೆ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ 2018ರ ಸೆ.8ರಂದು ನಡೆದ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ ಸನ್ಮಾನಿಸಿದ್ದಾರೆ.
ನೀವೂ ಉದ್ಯೋಗಾಕಾಂಕ್ಷಿಗಳಾಗಿದ್ದರೆ ಸದಸ್ಯರಾಗಲು ಎಸ್.ಅಚ್ಯುತಾನಂದ ಮೊ.99020 24614 ಸಂಪರ್ಕಿಸಬಹುದು.

Translate »