ಹನೂರು: ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ತನಿಖೆಗೆ ಆಗಮಿಸಿದ್ದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ನಾಲ್ವರನ್ನು ರಾಮಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ನಗರ ಠಾಣೆ ಪೊಲೀಸ್ ಪೇದೆಗಳಾದ ಕೆಂಪರಾಜು, ಕೃಷ್ಣ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ರಾಮಾ ಪುರ ಪೊಲೀಸರು ಗೆಜ್ಜಲನಾಥ ಗ್ರಾಮದ ಕುಮಾರ್, ಆರ್ಮುಗಂ, ಮುತ್ತು ಹಾಗೂ ಕುಮಾರ್‍ಸ್ವಾಮಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಕರಣ ವಿವರ: ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಯುವತಿ ಇಲ್ಲಿನ ರಾಮಾಪುರ ಪೊಲೀಸ್ ಠಾಣೆ ಸರ ಹದ್ದಿನ ಗೆಜ್ಜೆಗುಡ್ಡೆ ಅರಣ್ಯದಂಚಿನ ಮನೆಯೊಂದರಲ್ಲಿ ಇರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಕೆ.ಆರ್.ನಗರ ಠಾಣೆ ಪೊಲೀಸ್ ಪೇದೆ ಗಳಾದ ಕೃಷ್ಣ, ಕೆಂಪರಾಜು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಯುವತಿ ಅಪಹರಿಸಿಕೊಂಡು ಬಂದಿದ್ದ ಯುವಕನ ಸಂಬಂಧಿಗಳಾದ ಗೆಜ್ಜಲ ನಾಥ ಗ್ರಾಮದ ಕುಮಾರ್, ಆರ್ಮುಗಂ, ಮುತ್ತು, ಕುಮಾರಸ್ವಾಮಿ ಅವರುಗಳು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣ ಘಟನೆ ಸಂಬಂಧ ಪೇದೆ ಕೃಷ್ಣ ರಾಮಾಪುರ ಪೊಲೀಸರಿಗೆ ದೂರು ನೀಡಿದ್ದು, ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.