ಪ್ರತಿ ವ್ಯಕ್ತಿಗೂ ಕಾನೂನು ನೆರವು ದೊರಕಲಿ: ನ್ಯಾ.ಯೋಗೇಶ್
ಚಾಮರಾಜನಗರ

ಪ್ರತಿ ವ್ಯಕ್ತಿಗೂ ಕಾನೂನು ನೆರವು ದೊರಕಲಿ: ನ್ಯಾ.ಯೋಗೇಶ್

November 10, 2018

ಗುಂಡ್ಲುಪೇಟೆ: ಸಮಾಜದ ಕಟ್ಟ ಕಡೇ ವ್ಯಕ್ತಿಗೂ ಕಾನೂನು ನೆರವು ದೊರಕುವಂತೆ ಮಾಡುವ ಸಲು ವಾಗಿ ಕಾನೂನು ಸೇವೆ ನೀಡಲಾಗುತ್ತಿದೆ ಎಂದು ಜೆಎಂಎಫ್‍ಸಿ ನ್ಯಾಯಾಧೀಶ ಜೆ.ಯೋಗೇಶ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀ ಲರ ಸಂಘದ ಆಶ್ರಯದಲ್ಲಿ ಆಯೋಜಿ ಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ದೊರೆಯಬೇಕಾಗಿದೆ. ಆದರೆ ಇನ್ನೂ ಶ್ರೀಸಾಮಾ ನ್ಯರಿಗೆ ಕನಿಷ್ಠ ಮೂಲ ಕಾನೂನು ಬಗ್ಗೆಯೇ ತಿಳುವಳಿಕೆ ಇಲ್ಲವಾಗಿದೆ ಎಂದರು.

1980ರಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಪ್ರಾರಂಭಿಸಿ ರಾಜ್ಯ, ಜಿಲ್ಲೆ ಮತ್ತು ತಾಲೂಕು ವiಟ್ಟದಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಪ ನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮ ನಡೆಸ ಲಾಗುತ್ತದೆ. ಅಲ್ಲದೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಸಮಾಜದಲ್ಲಿ ಅಪ ಘಾತ, ಅತ್ಯಾಚಾರ, ಆಸಿಡ್ ದಾಳಿ ಮುಂತಾದ ದುಷ್ಕøತ್ಯದಿಂದ ಸಂತ್ರಸ್ಥರಾದ ವ್ಯಕ್ತಿಗಳಿಗೆ ಸಹಾಯ ಧನ ನೀಡಲಾಗುತ್ತಿದೆ ಎಂದರು.

ಆದರೆ ಇವುಗಳ ಬಗ್ಗೆ ಅರಿವಿಲ್ಲದ ಸಂತ್ರ ಸ್ತರು ಇದರ ಉಪಯೋಗ ಪಡೆದು ಕೊಳ್ಳದ ಕಾರಣ ಪ್ರತಿ ವರ್ಷ ಇದಕ್ಕಾಗಿ ಮೀಸಲಿರುವ ಕೋಟಿಗಟ್ಟಲೆ ಅನುದಾನ ಹಿಂದಿರುಗುತ್ತಿದೆ. ಈ ಬಗ್ಗೆ ಕಾನೂನು ಅರಿವು ಮೂಡಿಸಲಾಗುತ್ತಿದ್ದು, ಇವುಗಳ ಸದ್ಬಳಕೆಯಾಗಬೇಕು. ಎಲ್ಲಾ ವ್ಯಾಜ್ಯಗ ಳನ್ನೂ ನ್ಯಾಯಾಲಯದಲ್ಲಿ ಬಗೆಹರಿಸಲು ವಿಳಂಬವಾಗುತ್ತಿರುವುದರಿಂದ ಅದಾಲತ್ ನಲ್ಲಿ ಮಾತುಕತೆಗಳ ಮೂಲಕ ಬಗೆಹರಿ ಸಿಕೊಂಡಲ್ಲಿ ಶೀಘ್ರ ನ್ಯಾಯ ದೊರಕಲಿದೆ ಎಂದು ಸಲಹೆ ನೀಡಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಎ.ಎನ್.ರಾಜಣ್ಣ ಮಾತನಾಡಿ, ಪ್ರತಿಯೊ ಬ್ಬರಿಗೂ ಸಮಾಜದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಲು ಅವಕಾಶವಿದ್ದರೂ ಈ ಬಗ್ಗೆ ಅರಿವಿಲ್ಲದೆ ಮನುಷ್ಯ ಮಾನಸಿಕ ಒತ್ತಡಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾಗಬಹುದು. ಆದ್ದ ರಿಂದ ಕಾನೂನಿನ ಅರಿವು ಪಡೆದುಕೊಳ್ಳ ಬೇಕು ಎಂದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ಕಾರ್ಯದರ್ಶಿ ವೆಂಕ ಟೇಶ್, ರಾಜಶೇಖರಮೂರ್ತಿ, ಬಿ.ಪಿ. ಪುಟ್ಟಸ್ವಾಮಿ, ಸಿಬ್ಬಂದಿ ಉಮೇಶ್ ಸೇರಿ ದಂತೆ ಸಾರ್ವಜನಿಕರು ಹಾಜರಿದ್ದರು.

Translate »