ಮಾರಕಾಸ್ತ್ರಗಳಿಂದ ಹಲ್ಲೆ: ಮೂವರ ಬಂಧನ
ಮೈಸೂರು

ಮಾರಕಾಸ್ತ್ರಗಳಿಂದ ಹಲ್ಲೆ: ಮೂವರ ಬಂಧನ

November 14, 2018

ಮೈಸೂರು:  ಸ್ನೇಹಿತೆಯನ್ನು ಗುರಾಯಿಸಿದನೆಂದು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ 6 ಮಂದಿ ಪೈಕಿ ಮೂವರನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೀರ್ತಿ, ರಾಜು ಮತ್ತು ಮೋಕ್ಷನ್ ಬಂಧಿತರು. ನ.7 ರಂದು ರಾತ್ರಿ ಸತ್ಯನಗರದ ಆರ್.ಕೆ.ಪ್ಯಾಲೇಸ್ ಎದುರಿನ ಚಹಾ ಅಂಗಡಿಯಲ್ಲಿ ವಿನಯ್ ಮತ್ತು ಸ್ನೇಹಿತರು ಚಹಾ ಸೇವಿಸುತ್ತಿದ್ದರು. ಈ ವೇಳೆ ಆರೋಪಿ ಕೀರ್ತಿ ಮತ್ತು ಸ್ನೇಹಿತರು ಗುಂಪಾಗಿ ಬಂದು ವಿನಯ್ ಬಳಿ ತನ್ನ ಸ್ನೇಹಿತೆ ಯನ್ನು ಏಕೆ ಗುರಾಯಿಸಿದೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಮಾರಾ ಕಾಸ್ತ್ರಗಳಿಂದ ವಿನಯ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಗಾಯಾಳು ವಿನಯ್ ನೀಡಿದ ದೂರಿನ ಮೇರೆಗೆ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದವರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Translate »