ಕೊಡಗಿನಲ್ಲಿ ಮುಂದುವರೆದ ವ್ಯಾಘ್ರನ ಅಟ್ಟಹಾಸ
ಕೊಡಗು

ಕೊಡಗಿನಲ್ಲಿ ಮುಂದುವರೆದ ವ್ಯಾಘ್ರನ ಅಟ್ಟಹಾಸ

March 30, 2022

ಗೋಣ ಕೊಪ್ಪ, ಮಾ.೨೯- ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸ ಮುಂದುವರೆದಿದ್ದು, ಮಂಗಳವಾರ ಸಮೀಪದ ಕುಂದಾ ಗ್ರಾಮದಲ್ಲಿ ಹುಲಿ ದಾಳಿಯಿಂದ ಕರುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸೋಮವಾರ ರುದ್ರಗುಪ್ಪೆ ಗ್ರಾಮದ ಕಾಫಿ ತೋಟದಲ್ಲಿ ಹುಲಿ ದಾಳಿ ಯಿಂದ ಕಾರ್ಮಿಕನೊಬ್ಬ ಸಾವನ್ನಪ್ಪಿ ದ್ದನು. ಮಂಗಳವಾರ ರುದ್ರಗುಪ್ಪೆ ಗ್ರಾಮದಿಂದ ಕೇವಲ ೩ ಕಿ.ಮೀ ದೂರದಲ್ಲಿರುವ ಕುಂದಾ ಗ್ರಾಮದಲ್ಲಿ ಹುಲಿ ದಾಳಿಗೆ ಕರು ಬಲಿಯಾಗಿದ್ದು, ಇದು ನರಭಕ್ಷಕ ಹುಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ರೈತರಲ್ಲಿ ಹಾಗೂ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ.

ಕರು ಸಾವು: ಗ್ರಾಮದ ಕಡೇಮಾಡ ಮೋಹನ್ ಅವರಿಗೆ ಸೇರಿದ ಕರು ಸಾವನ್ನಪ್ಪಿದ್ದು, ಇವರು ಕರುವನ್ನು ತಮ್ಮ ಮನೆಯ ಮುಂಭಾಗದಲ್ಲಿದ್ದ ಕೊಟ್ಟಿಗೆಯ ಹೊರ ಭಾಗದಲ್ಲಿ ಕಟ್ಟಿಹಾಕಿದ್ದರು. ಮಂಗಳವಾರ ಮುಂಜಾನೆ ಕರುವಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಮನೆಯಲ್ಲಿದ್ದವರು ಕೂಗಿಕೊಂಡಿದ್ದರಿAದ ಈ ವೇಳೆ ಹುಲಿ ಕರು ಬಿಟ್ಟು ಪರಾರಿಯಾಗಿದೆ. ಘಟನೆಯಿಂದ ಕರುವಿನ ಹೊಟ್ಟೆ ಹಾಗೂ ತಲೆ ಭಾಗದಲ್ಲಿ ಗಂಭೀರ ಗಾಯವಾಗಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಹುಲಿ ಸೆರೆಗೆ ಬೋನ್ ಇಡಲು ಮುಂದಾಗಿದ್ದಾರೆ.

Translate »