ಸೋಮವಾರ ರಾತ್ರಿ ಯಿಡೀ ಶವವಿಟ್ಟು ಪ್ರತಿಭಟನೆ
ಅರಣ್ಯ ಇಲಾಖೆಯಿಂದ ಮೃತನ ಪತ್ನಿಗೆ ಉದ್ಯೋಗ, ೫ ವರ್ಷಗಳವರೆಗೆ ೨ ಸಾವಿರ ರೂ. ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ
ತಾಲೂಕು ಆಡಳಿತದಿಂದ ಪಡಿತರ, ಇತರ ಸೌಲಭ್ಯ ಕಲ್ಪಿಸುವ ಭರವಸೆ
ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ, ಡಿವೈಎಸ್‌ಪಿಗೆ ದೂರು
ವಿರಾಜಪೇಟೆ, ಮಾ.೨೯- ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಮಂಗಳವಾರ ಹುಲಿ ದಾಳಿಯಿಂದ ಕೂಲಿ ಕಾರ್ಮಿಕ ಗಣೇಶ್‌ಪುಟ್ಟು(೨೯) ಸಾವನ್ನಪ್ಪಿದ್ದು, ಘಟನೆ ಸಂಬAಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.
ಘಟನೆ ನಡೆದ ಸ್ಥಳದಲ್ಲಿಯೇ ಮೃತ ದೇಹವನ್ನು ಇಟ್ಟು, ಸೋಮವಾರ ರಾತ್ರಿ ಯಿಂದ ರೈತರು, ಗ್ರಾಮಸ್ಥರು ಹಾಗೂ ಮೃತನ ಸಂಬAಧಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಹುಲಿ ದಾಳಿಯಿಂದ ಗ್ರಾಮಸ್ಥರು, ರೈತರು ತೋಟ ಗಳಿಗೆ ತೆರಳಲು ಭಯಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷö್ಯ ದಿಂದ ಇಂದು ಕೂಲಿ ಕಾರ್ಮಿಕ ಬಲಿ ಯಾಗಿದ್ದಾನೆ. ಇದಕ್ಕೆ ಡಿಎಫ್‌ಓ, ಎಸಿ ಎಫ್, ಸಿಸಿಎಫ್ ಹಾಗೂ ಆರ್‌ಎಫ್ ಅವರು ಹೊಣೆಯಾಗಿದ್ದು, ಅವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು ಎಂದು ಸ್ಥಳದಲ್ಲಿದ್ದ ವಿರಾಜಪೇಟೆ ಡಿವೈಎಸ್‌ಪಿ ಜಯಕುಮಾರ್ ಅವರಿಗೆ ಮನವಿ ಮಾಡಿ ದರು. ಮನವಿ ಸ್ವೀಕರಿಸಿದ ಜಯಕುಮಾರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಮಾತನಾಡಿ, ಈ ಭಾಗದಲ್ಲಿ ಕಾಡಾನೆ ಹಾಗೂ ಹುಲಿಗಳ ಹಾವಳಿ ಹೆಚ್ಚಾ ಗಿದ್ದು, ಕೃಷಿಕರು ಹಾಗೂ ಗ್ರಾಮಸ್ಥರು ತೋಟದಲ್ಲಿ ಭಯದಿಂದ ಕೆಲಸ ಮಾಡು ವಂತಾಗಿದೆ. ಈ ಸಂಬAಧ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರ ಪಾಣ ಅವರು, ಸಾರ್ವಜನಿಕರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿಲ್ಲ. ಅವರ ನಿರ್ಲಕ್ಷö್ಯ ದಿಂದಲೇ ಇಂದು ಹುಲಿ ದಾಳಿಯಿಂದ ಕಾರ್ಮಿಕ ಬಲಿಯಾಗಿದ್ದಾನೆ ಎಂದು ಅಸ ಮಾಧಾನ ವ್ಯಕ್ತಪಡಿಸಿದರು. ಮೃತ ಗಣೇಶ್ ಕುಟುಂಬದಿAದ ಬಂದ ಮನವಿಗೆ ಸ್ಪಂದಿಸಿದ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಪೂವಯ್ಯ ಅವರು ಗ್ರಾಮಸ್ಥ ರೊಂದಿಗೆ ಮಾತನಾಡಿ, ಈ ಘಟನೆ ನಡೆಯಬಾರದಿತ್ತು. ಕಾಡುಗಳು ನಮ್ಮ ಅವಿಭಾಜ್ಯ ಅಂಗ. ಹುಲಿ ದಾಳಿಗೆ ಬಲಿ ಯಾಗಿರುವ ಗಣೇಶ್ ಪುಟ್ಟು ಅವರ ಪತ್ನಿಗೆ ಐದು ವರ್ಷದವರೆಗೂ ೨ ಸಾವಿರ ರೂ. ಮಾಸಾಶನ ಹಾಗೂ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದರು. ವಿರಾಜಪೇಟೆ ತಹಸೀಲ್ದಾರ್ ಆರ್. ಯೋಗನಂದ ಮಾತನಾಡಿ, ಇನ್ನೆರಡು ದಿನದಲ್ಲಿ ಪಡಿತರ ಹಾಗೂ ಇತರ ಸೌಲಭ್ಯ ಗಳನ್ನು ನೀಡುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಪ್ರತಿ ಭಟನೆ ಸಂದರ್ಭ ಡಿವೈಎಸ್‌ಪಿ ಮುಂದಾ ಳತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಬಳಿಕ ಗಣೇಶ್ ಪುಟ್ಟು ಮೃತದೇಹ ವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಸಾರ್ವ ಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು.
ಡಿಎಫ್‌ಓ ಅಡ್ಡಗಟ್ಟಿ ಧಿಕ್ಕಾರ ಕೂಗಿದ ಗ್ರಾಮಸ್ಥರು
ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪ್ರತಿಭಟನಾಕಾರರು ಹಾಗೂ ಅಧಿಕಾರಿ ಗಳ ನಡುವೆ ಮಾತಿನ ಚಕಮಕಿ ನಡೆ ಯಿತು. ಈ ವೇಳೆ ಡಿಎಫ್‌ಓ ಚಕ್ರಪಾಣ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಕೊಡಗಿಗೆ ನಿಮ್ಮಂತ ಅಧಿಕಾರಿಗಳು ಬೇಡವಾಗಿದೆ. ಕರ್ತವ್ಯಕ್ಕೆ ನೀವು ದ್ರೋಹ ಮಾಡಿದ್ದೀರಿ ಎಂದು ಹರಿಹಾಯ್ದರು. ಬಳಿಕ, ಡಿಎಫ್‌ಓ ಚಕ್ರಪಾಣ ಸ್ಥಳದಿಂದ ಕಾಲ್ಕಿತ್ತರು. ಈ ವೇಳೆ ಅವರನ್ನು ಅಡ್ಡಗಟ್ಟಿದ ಪ್ರತಿಭಟನಾ ಕಾರರು ದಾರಿಯುದ್ದಕ್ಕೂ ಘೋಷಣೆ ಕೂಗಿ ಅವರನ್ನು ಸುತ್ತುವರಿದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಡಿಎಫ್‌ಓ ಅವರನ್ನು ರಕ್ಷಣೆ ಮೂಲಕ ಕರೆದೊ ಯ್ದರು. ನಂತರ ಘಟನೆಗೆ ವಿಷಾದ ವ್ಯಕ್ತಪಡಿಸಿದ ಡಿಎಫ್‌ಓ ಸುದ್ದಿಗಾರ ರೊಂದಿಗೆ ಮಾತನಾಡಿ, ಮುಂದಿನ ೭ ದಿನಗಳೊಳಗೆ ಹುಲಿ ಸೆರೆ ಹಿಡಿಯ ಲಾಗುವುದು ಎಂದು ಭರವಸೆ ನೀಡಿದರು.