ನಿರಂತರ ಹುಲಿ ದಾಳಿ:ಸರ್ಕಾರಕ್ಕೆ ಬೇಡವಾದ ಕೊಡಗು
ಕೊಡಗು

ನಿರಂತರ ಹುಲಿ ದಾಳಿ:ಸರ್ಕಾರಕ್ಕೆ ಬೇಡವಾದ ಕೊಡಗು

March 30, 2022

ಮಡಿಕೇರಿ, ಮಾ.೨೯- ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಮಾನವ ಜೀವಹಾನಿಯಾಗುತ್ತಿದ್ದರೂ ಸಮಸ್ಯೆಯ ಗಂಭೀರತೆಯನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಅರಣ್ಯ ಪ್ರದೇಶದಿಂದ ಕೂಡಿರುವ ಕೊಡಗು ಜಿಲ್ಲೆಯನ್ನು ಅರಣ್ಯ ಸಚಿವರು ಮರೆತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಕ್ಷಿಣ ಕೊಡಗಿನ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಿಂದ ಕಾರ್ಮಿಕ ಬಲಿಯಾಗಿ ರುವ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ೫ ವರ್ಷಗಳಿಂದ ಕೊಡಗು ಜಿಲ್ಲೆಯನ್ನು ವನ್ಯಜೀವಿಗಳು ಅತಿಯಾಗಿ ಕಾಡುತ್ತಿವೆ. ಕಳೆದ ವರ್ಷ ಹುಲಿ ದಾಳಿಗೆ ಮೂವರು ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಲೆಕ್ಕವಿಲ್ಲದಷ್ಟು ಜಾನುವಾರುಗಳು ಜೀವ ಕಳೆದುಕೊಂಡಿವೆ. ಇದೀಗ ಮತ್ತೊಂದು ಜೀವ ಬಲಿಯಾ ಗಿದೆ. ಆದರೆ ಕಳೆದ ೨೦-೨೫ ವರ್ಷಗಳಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಶಾಸಕರು ಸರ್ಕಾರದ ಮೇಲೆ ಪ್ರಭಾವ ಬೀರಿ ವನ್ಯಜೀವಿ ದಾಳಿ ತಡೆಗೆ ಶಾಶ್ವತ ಪರಿಹಾರ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಸರ್ಕಾರಕ್ಕೆ ಕೊಡಗಿನ ಬಗ್ಗೆ ಕರುಣೆ ಇಲ್ಲದಾಗಿದೆ, ಹುಲಿ ಮತ್ತು ಆನೆಗಳ ದಾಳಿಯಿಂದ ಮಾನವ ಜೀವಗಳು ಬಲಿಯಾಗುತ್ತಿದ್ದರೂ ಅರಣ್ಯ ಸಚಿವರನ್ನು ಜಿಲ್ಲೆಗೆ ಕಳುಹಿಸಿ ಪರಿಹಾರ ಸೂಚಿಸುವಂತೆ ಆದೇಶ ಹೊರಡಿಸುವ ಇಚ್ಛಾಶಕ್ತಿಯನ್ನು ಮುಖ್ಯಮಂತ್ರಿಗಳು ಪ್ರದರ್ಶಿಸುತ್ತಿಲ್ಲ. ಸರ್ಕಾರಕ್ಕೆ ಕೊಡಗು ಬೇಡವಾಗಿದೆ. ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ಮಾತ್ರವಲ್ಲದೆ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸಂಬAಧಿಸಿದ ಜ್ವಲಂತ ಸಮಸ್ಯೆಗಳಿವೆ. ಸಂಬAಧಪಟ್ಟ ಖಾತೆಯ ಸಚಿವರು ಜಂಟಿಯಾಗಿ ಕೊಡಗಿನಲ್ಲೇ ಸಭೆ ನಡೆಸಬೇಕೆನ್ನುವ ಒತ್ತಾಯವನ್ನು ಜನ ಮಾಡಿದ್ದರೂ ನಿರ್ಲಕ್ಷö್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Translate »