ಮೈಸೂರು,ಅ.31(ಎಂಟಿವೈ)- ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉಡ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿದ ಮೈಸೂರು ಅರಣ್ಯ ಸಂಚಾರಿ ದಳ ಸಿಬ್ಬಂದಿ, ಉಡವನ್ನು ರಕ್ಷಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೋವಿ ಕಾಲೋನಿ ನಿವಾಸಿ ರಾಮಂಜಿ ಅಲಿ ಯಾಸ್ ರಾಮಚಾರಿ ಸೆರೆಯಾದವನು.
ಈತ ಉಡ ಮಾರಲು ಯತ್ನಿಸುತ್ತಿರುವ ಮಾಹಿತಿ ತಿಳಿದ ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಶುಕ್ರವಾರ ಸಂಜೆ ದಾಳಿ ನಡೆಸಿದಾಗ ಗೋಣಿಚೀಲದಲ್ಲಿ ಉಡ ಇಟ್ಟು ಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ವಾರ ಮನೆ ಸಮೀಪದ ಚರಂಡಿ ಯಲ್ಲಿ ಬರುತ್ತಿದ್ದ ಉಡವನ್ನು ಹಿಡಿದಿಟ್ಟು ಕೊಂಡೆ. ಹಣದಾಸೆಗಾಗಿ ಮಾರಲು ಯತ್ನಿಸಿ ದ್ದಾಗಿ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ. ಆರೋಪಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾ ಧೀಶರೆದುರು ಹಾಜರುಪಡಿಸಿದಾಗ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಅರಣ್ಯ ಸಂಚಾರಿ ದಳದ ಡಿಸಿಎಫ್ ಪೂವಯ್ಯ ನೇತೃತ್ವದ ಕಾರ್ಯಾಚರಣೆ ಯಲ್ಲಿ ಆರ್‍ಎಫ್‍ಓ ವಿವೇಕ್, ಡಿಆರ್ ಎಫ್‍ಓಗಳಾದ ಮೋಹನ್‍ಕುಮಾರ್, ಲಕ್ಷ್ಮೀಶ್, ಪ್ರಮೋದ್, ಸುಂದರ್, ಸಿಬ್ಬಂದಿ ಗೋವಿಂದ್, ಚನ್ನಬಸವಯ್ಯ, ರವಿಕುಮಾರ್ ಪಾಲ್ಗೊಂಡಿದ್ದರು.