ಮೈಸೂರು, ಅ.5(ಆರ್‍ಕೆಬಿ)- ಅಂದು ಕೋಲು ಹಿಡಿದಿದ್ದ ಗಾಂಧಿ ಇಂದು ಪೊರಕೆ ಹಿಡಿದು ಸ್ವಚ್ಛತೆಯ ಸಂದೇಶ ನೀಡುತ್ತಿದ್ದಾರೆ. ಬಲಗೈಯಲ್ಲಿ ಕೋಲು ಹಿಡಿದಿರುವ ಗಾಂಧಿಯವರ ಎಡಗೈನಲ್ಲಿ `ಸಾಮಾಜಿಕ ಅಂತರ ಕಾಪಾಡಿ’ ಎಂಬ ಫಲಕ, ಎಲ್ಲೋ `ಗಾಂಧಿ’ ಚಿತ್ರ 150 ದಿನ ಓಡಿರಬೇಕು ಎಂದು ಗೋಡೆಯ ಮೇಲಿದ್ದ ಗಾಂಧಿ-150 ಭಿತ್ತಿಪತ್ರ ನೋಡಿ ರಾಜಕಾರಣಿಯೊಬ್ಬ ಮತ್ತೊಬ್ಬನಿಗೆ ಹೇಳುತ್ತಿರು ವುದು, ಈಗಿನ ಪರಿಸ್ಥಿತಿ ನೋಡಿ ಗಾಂಧಿ ತಾತಾ ಅವತ್ತೇ ಕಣ್ಣು ಮುಚ್ಚಿ ಧ್ಯಾನ ಮಾಡಿ ಕುಳಿತುಬಿಟ್ಟರು.
ಮೈಸೂರಿನ ಮೈಸೂರುಮಿತ್ರ’ ವ್ಯಂಗ್ಯಚಿತ್ರಕಾರ, ಫುಲ್ ಬ್ರೈಟರ್ ಎಂ.ವಿ.ನಾಗೇಂದ್ರಬಾಬು ಅವರ ಕುಂಚದಿಂದ ಮೂಡಿಬಂದಿರುವ ಇಂತಹ ಹಲವು ವ್ಯಂಗ್ಯಚಿತ್ರಗಳನ್ನು ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಪ್ರದರ್ಶನಕ್ಕಿಡ ಲಾಗಿದೆ. `ಗಾಂಧಿ-150+ನಡಿಗೆ’ ವ್ಯಂಗ್ಯಚಿತ್ರ ಪ್ರದರ್ಶ ನವನ್ನು ಅಮರ ಬಾಪು ಚಿಂತನ ಆಯೋಜಿಸಿದೆ.
ಹಿರಿಯ ಗಾಂಧಿವಾದಿ, ಸಮಾಜಸೇವಕ ಕೆ. ರಘುರಾಂ ವಾಜಪೇಯಿ ಅವರು ಎರಡು ದಿನಗಳ ಈ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಸೋಮವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗಾಂಧಿ ಯವರನ್ನು ಕುರಿತು ಎಂ.ವಿ.ನಾಗೇಂದ್ರಬಾಬು ರಚಿಸಿ ರುವ ಈ ವ್ಯಂಗ್ಯಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಲಿವೆ. ಜನರಲ್ಲಿ ಸಾಮಾಜಿಕ ಅರಿವು ಮೂಡಿಸುತ್ತಿವೆ. ಪ್ರತಿಯೊಂದು ವ್ಯಂಗ್ಯಚಿತ್ರವೂ ನೋಡುಗರ ಮನಸ್ಸನ್ನು ತಟ್ಟಿ ಅವರನ್ನು ಚಿಂತನೆಗೆ ಹಚ್ಚುವಂತಿವೆ. ಇದು ರಾಜ್ಯಾ ದ್ಯಂತ ಪ್ರದರ್ಶನಕ್ಕೆ ಹೋಗುತ್ತಿರುವುದು ಖುಷಿ ತಂದಿದೆ. ಇದನ್ನು ಹೆಚ್ಚು ಹೆಚ್ಚು ಜನರು ನೋಡಿ ಸಾಮಾಜಿಕ ಅರಿವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಡಿಟಿಎಸ್ ಫೌಂಡೇಷನ್ ಸಂಸ್ಥಾಪಕ ಡಿ.ಟಿ.ಪ್ರಕಾಶ್ ಮಾತನಾಡಿ, ಇಲ್ಲಿರುವ ವ್ಯಂಗ್ಯಚಿತ್ರಗಳೆಲ್ಲವೂ ಪುಸ್ತಕದ ರೂಪದಲ್ಲಿ ಬರುವಂತಾ ದರೆ ಮುಂದಿನ ಪೀಳಿಗೆಗೂ ಶಾಶ್ವತ ಸಂದೇಶ ನೀಡಿ ದಂತಾಗುತ್ತದೆ ಎಂದು ಸಲಹೆ ನೀಡಿದರು. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದೊಳಗೆ ಗಾಂಧೀಜಿ ಯವರ ಉಪ್ಪಿನ ಸತ್ಯಾಗ್ರಹದ ಪ್ರತಿಮೆಗಳ ಬಳಿ ಏರ್ಪಡಿ ಸಿರುವ ವ್ಯಂಗ್ಯಚಿತ್ರ ಪ್ರದರ್ಶನವನ್ನು ಮಂಗಳವಾರವೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನೋಡಬಹುದಾಗಿದೆ. ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ವ್ಯಂಗ್ಯಚಿತ್ರಕಾರ ಎಂವಿ.ನಾಗೇಂದ್ರಬಾಬು, ಹಿರಿಯ ಉದ್ಯಮಿ ದೊರೆಸ್ವಾಮಿ, ಮೈಸೂರು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಅಮರ ಬಾಪು ಚಿಂತನದ ಉಪ ಸಂಪಾ ದಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಯೋಜಕ ವಿಕ್ರಂ ಅಯ್ಯಂಗಾರ್ ಇನ್ನಿತರರು ಉಪಸ್ಥಿತರಿದ್ದರು.