ಚಾಮರಾಜನಗರ: ಆಟೋಚಾಲಕರು ಹಾಗೂ ಆಟೋ ಮಾಲೀಕರಿಂದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ನಾಡಧ್ವಜಾರೋಹಣವನ್ನು ನಿವೃತ್ತ ಯೋಧ ಮಂಜುನಾಥ್ ನೆರವೇರಿಸಿ ಮಾತನಾಡಿ, ಆಟೋ ಚಾಲಕರು, ಮಾಲೀಕರು ಒಂದಾಗಿ ರಾಜ್ಯೋತ್ಸವ ಆಚರಿಸುತ್ತಿರುವುದು ಉತ್ತಮ ಬೆಳವಣಿಯಾಗಿದ್ದು, ಇದೇ ರೀತಿ ಆಟೋ ಚಾಲಕರು ಸಂಘಟಿತರಾಗಬೇಕೆಂದು ಹೇಳಿದರು.
ಆಟೋ ಚಾಲಕರು ತಾವು ಧರಿಸುವ ಸಮವಸ್ತ್ರಕ್ಕೆ ತನ್ನದೇ ಆದ ಮಹತ್ವವಿದ್ದು, ಚಾಲನೆ ಮಾಡುವಾಗ ತಪ್ಪದೇ ಸಮವಸ್ತ್ರ ಧರಿಸಬೇಕು. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ಅನಾರೋಗ್ಯ ಪೀಡಿತರನ್ನು, ಗರ್ಭಿಣಿಯರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸಿ ಜೀವ ಕಾಪಾಡುವ ಉತ್ತಮ ಕಾರ್ಯ ನಡೆಸುತ್ತಿದ್ದೀರಿ. ಇದೇರೀತಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಂತೆ ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಎಲ್ಲಾ ಆಟೋ ಚಾಲಕರು, ಮಾಲೀಕರು ಮತ್ತು ಸಂಘದ ಸದಸ್ಯರು ಪಾಲ್ಗೊಂಡಿದ್ದರು.