ಕಳ್ಳಿದೊಡ್ಡಿಯಲ್ಲಿ ಗಾಂಜಾ ವಶ
ಚಾಮರಾಜನಗರ

ಕಳ್ಳಿದೊಡ್ಡಿಯಲ್ಲಿ ಗಾಂಜಾ ವಶ

November 14, 2018

ಹನೂರು:  ಸಮೀಪದ ಕಳ್ಳಿದೊಡ್ಡಿ ಗ್ರಾಮದಲ್ಲಿ ಜೋಳದ ಫಸಲಿನೊಂದಿಗೆ ಅಕ್ರ ಮವಾಗಿ ಬೆಳೆದಿದ್ದ ಗಾಂಜಾವನ್ನು ಹನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆ ದಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸ್‍ಐ ನಾಗೇಶ್ ನೇತೃ ತ್ವದ ತಂಡ 4 ಕೆಜಿ ಗಾಂಜಾ ವಶಪಡಿಸಿಕೊಂಡು ಶಿವರಾಮು ಎಂಬುವರನ್ನು ಬಂಧಿಸಿ ಪ್ರಕ ರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಹೆಡ್‍ಕಾನ್ ಸ್ಟೇಬಲ್ ಗಳಾದ ರಾಮದಾಸ್, ಸಿದ್ದೇಶ್, ಕಾನ್ ಸ್ಟೇಬಲ್‍ಗಳಾದ ವಿಶ್ವ, ಬಿಳಿಗೌಡ, ನಂಜುಂಡ, ಪ್ರದೀಪ್‍ಕುಮಾರ್, ರಾಜು ಪಾಲ್ಗೊಂಡಿದ್ದರು.

Translate »