ಬೈಕ್ ಡಿಕ್ಕಿ; ಪ್ರವಾಸಿಗ ಸಾವು
ಚಾಮರಾಜನಗರ

ಬೈಕ್ ಡಿಕ್ಕಿ; ಪ್ರವಾಸಿಗ ಸಾವು

November 14, 2018

ಗುಂಡ್ಲುಪೇಟೆ:  ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿಯೊಬ್ಬರು ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ ತಾಲೂಕಿನ ಹಂಗಳ ಸಮೀಪದ ಕಲ್ಲಿಗೌಡನಹಳ್ಳಿ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಮಹಾರಾಷ್ಟ್ರ ಮೂಲದ ನಿಖಿಲ್ ಭೀಮರಾವ್ (30) ಎಂಬುವರೇ ಮೃತ ಪಟ್ಟವರು. ಇವರು ಊಟಿ ಪ್ರವಾಸಕ್ಕಾಗಿ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಕಲ್ಲಿಗೌಡನಹಳ್ಳಿ ಗೇಟ್ ಸಮೀಪ ಮೂತ್ರ ವಿಸರ್ಜನೆಗೆಂದು ತಮ್ಮ ಟೆಂಪೆÇೀ ಟ್ರಾವಲರ್ ವಾಹನದಿಂದ ಕೆಳಗಿಳಿದು ಹೋಗುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ನಿಖಿಲ್ ಅವರ ಮುಖಕ್ಕೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆಂದು ಪೆÇಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಸವಾರ ಅಭಿ ಎಂಬುವನನ್ನು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಸರ್ಕಲ್‍ಇನ್ಸ್‍ಪೆಕ್ಟರ್ ಬಾಲಕೃಷ್ಣ, ಸಬ್‍ಇನ್ಸ್‍ಪೆಕ್ಟರ್ ಲತೇಶ್‍ಕುಮಾರ್, ಮುಖ್ಯಪೇದೆ ಎಚ್.ಪಿ.ಶಿವನಂಜಪ್ಪ ಮತ್ತು ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Translate »