ರಾಜಕೀಯ ಪಕ್ಷಗಳ ಹೊಣೆಗಾರಿಕೆ ಮುಖ್ಯ; ಯುವ ಮತದಾರರ ಸೇರ್ಪಡೆಗೆ ಆದ್ಯತೆ ನೀಡಿ: ರಾಜೇಂದ್ರ ಕುಮಾರ್ ಕಟಾರಿಯಾ
ಹಾಸನ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ರಾಜಕೀಯ ಪಕ್ಷಗಳ ಜವಾಬ್ದಾರಿ ಮಹತ್ವದಾಗಿದ್ದು, ಬೂತ್ ಮಟ್ಟದ ಏಜೆಂಟ್‍ಗಳನ್ನು ನೇಮಕ ಮಾಡಿ ಜಿಲ್ಲಾಡಳಿತಕ್ಕೆ ಪಟ್ಟಿ ಒದಗಿಸಬೇಕು’ ಎಂದು ಮತದಾರರ ಪಟ್ಟಿ ವೀಕ್ಷಕರಾದ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆ ಸಿದ ಅವರು, ಆರೋಗ್ಯಕರ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲಾ ಪಕ್ಷಗಳ ಹೊಣೆ ಗಾರಿಕೆಯೂ ಮುಖ್ಯವಾಗುತ್ತದೆ ಎಂದರು.
ಮತದಾರರ ಪಟ್ಟಿ ಪಾರದರ್ಶಕವಾಗಿ ಪರಿ ಷ್ಕರಣೆಯಾಗಬೇಕು. ಯಾವುದೇ ಅರ್ಹ ಮತದಾರರು ತಮ್ಮ ಹಕ್ಕುಗಳಿಂದ ವಂಚಿತ ರಾಗಬಾರದು ಹಾಗೂ ಅನರ್ಹರ ಹೆಸರು ಗಳನ್ನು ಕಡ್ಡಾಯವಾಗಿ ಪಟ್ಟಿಯಿಂದ ಕೈ ಬಿಡುಬೇಕು ಎಂದು ನಿರ್ದೇಶನ ನೀಡಿದರು.
ಬೂತ್ ಮಟ್ಟದ ಅಧಿಕಾರಿಗಳ ಕಾರ್ಯ ನಿರ್ವಹಣೆ ಬಗ್ಗೆ ನಿಗಾವಹಿಸಿ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ಪ್ರೇರಣೆ ನೀಡಬೇಕು. ಮತದಾರರ ಪಟ್ಟಿ ಪರಿಷ್ಕ ರಣೆ ಎಂಬುದು ನಿರಂತರ ಪ್ರಕ್ರಿಯೆಯಾ ದರೂ ವಿಶೇಷ ಪರಿಷ್ಕರಣೆ ಆಂದೋಲನದ ರೂಪದಲ್ಲಿ ನಡೆಸುವ ಸಂದರ್ಭ ಹೆಚ್ಚು ಕ್ರಿಯಾತ್ಮಕ ಹಾಗೂ ಜಾಗೃತಿ ಚಟುವಟಿಕೆ ಗಳು ನಡೆಯಬೇಕು. ಯುವ ಸಮುದಾ ಯದ ಸಹಭಾಗಿತ್ವ ಹಾಗೂ ಸೇರ್ಪಡೆ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ವೈಶಾಲಿ ಮಾತ ನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮತದಾರರ ಕರಡು ಪಟ್ಟಿ ಪ್ರಕಟಿಸಿದ್ದು, ನ. 20ರವರೆಗೆ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭಿ ಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಹಾಗೂ ರಾಜಕೀಯ ಪಕ್ಷಗಳ ಮೂಲಕ ಮಾಹಿತಿ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 19 ಹೊಸ ಮತಗಟ್ಟೆಗಳ ಸ್ಥಾಪನೆಗೆ ಚುನಾವಣಾ ಆಯೋಗದಿಂದ ಅನುಮೋದನೆ ಪಡೆಯಲಾಗಿದೆ. ಇನ್ನೂ 24 ಹೊಸ ಮತಗಟ್ಟೆಗಳ ಸ್ಥಾಪನೆಗೆ ಮತ್ತೆ ಮನವಿಗಳು ಬಂದಿವೆ. ಅವುಗಳನ್ನು ಪರಿ ಶೀಲಿಸಿ 10 ಕಡೆಗಳಲ್ಲಿ ಅಗತ್ಯವೆಂಬುದನ್ನು ಗುರುತಿಸಿ ಪ್ರಸ್ತಾವನೆಗೆ ಸಲ್ಲಿಸಲಾಗಿದೆ. ಆದರೆ, ಈಗಾಗಲೇ ಅದಕ್ಕೆ ಅವಕಾಶ ಮುಗಿದಿರು ವುದರಿಂದ ಚುನಾವಣೆ ವೇಳೆ ಹೆಚ್ಚುವರಿ ಮತಗಟ್ಟೆಗಳ ಸ್ಥಾಪನೆ ಬಗ್ಗೆ ಕ್ರಮವಹಿ ಸುವಂತೆ ಚುನಾವಣಾ ಆಯೋಗ ತಿಳಿಸಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಿಎಲ್‍ಓಗಳ ನೇಮಕವಾಗಿದೆÉ. ನ. 20ರವರೆಗೆ ಮತದಾರರ ಪಟ್ಟಿ ಪರಿಷ್ಕ ರಣೆಗೆ ಅರ್ಜಿಗಳನ್ನು ಸ್ವೀಕರಿಸಿ ಅವುಗಳನ್ನು ವಿಲೇವಾರಿ ಮಾಡಲಾಗುವುದು. ಹೊಸ ದಾಗಿ ನಮೂನೆ- 6ರಲ್ಲಿ 6000 ಹಾಗೂ ನಮೂನೆ-1ರಲ್ಲಿ 5,000 ಅರ್ಜಿಗಳು ಬಂದಿವೆ. ಜನಗಣತಿಯಂತೆ ಜಿಲ್ಲೆಯಲ್ಲಿ ಪುರುಷ ಮತ್ತು ಮಹಿಳೆಯರ ಲಿಂಗಾನುಪಾತ 1000: 1010 ರಂತಿದೆ. ಆದರೆ ಮತದಾರರ ಪಟ್ಟಿಯಲ್ಲಿ ಅದರ ಅನುಪಾತ 1000:975 ರಷ್ಟಿದೆ. ಈ ಬಗ್ಗೆ ಪರಿಶೀಲಿಸಿ ಮಹಿಳಾ ಮತದಾ ರರ ವ್ಯತ್ಯಾಸವನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 18.21ಲಕ್ಷ ಜನಸಂಖ್ಯೆಯಿದ್ದು, ಅದರಲ್ಲಿ 14.30ಲಕ್ಷ ಮಂದಿ ಹೆಸರು ಮತ ದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಇದರಲ್ಲಿ ಶೇ. 78ರಷ್ಟು ಮತದಾರರಿದ್ದಾರೆ. ಆದರೆ ರಾಜ್ಯದ ಸರಾಸರಿ ಸರ್ಕಾರ ಶೇ. 75 ರಷ್ಟಿದ್ದು, ಜಿಲ್ಲೆಯಲ್ಲಿ ಶೇ. 3 ರಷ್ಟು ಹೆಚ್ಚಾಗಿದೆ. ಪರಿಷ್ಕರಣೆ ವೇಳೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ವೀಕ್ಷಕರ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 18 ರಿಂದ 19 ವರ್ಷದೊಳ ಗಿನ 57,000 ಜನಸಂಖ್ಯೆಯನ್ನು ಗುರುತಿ ಸಲಾಗಿದೆ. ಆದರೆ ಈವರೆಗೆ 10,000 ಯುವ ಮತದಾರರ ಮಾತ್ರ ನೋಂದಣಿ, ಬಾಕಿ ಉಳಿದವರನ್ನು ಪತ್ತೆ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕಿದೆ ಎಂದರು.
ಎಲ್ಲಾ ಕ್ಷೇತ್ರಗಳನ್ನೊಳಗೊಂಡಂತೆ ಜಿಲ್ಲೆ ಯಲ್ಲಿ ಬಹುತೇಕ ಭಾವಚಿತ್ರವಿರುವ ಗುರು ತಿನ ಚೀಟಿ ಎಣಿಕೆ ವಿತರಣೆ ಮುಗಿದಿದ್ದು, ಕೇವಲ 266 ಬಾಕಿ ಉಳಿದಿವೆ. ಅದನ್ನು ಆದಷ್ಟು ಶೀಘ್ರ ಮುಕ್ತಾಯಗೊಳಿಸ ಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜೇಂದ್ರಕುಮಾರ್ ಕಟಾರಿಯಾ ಅವರು, ಲಿಂಗಾನುಪಾತ, ಜನಸಂಖ್ಯೆ ಮತ್ತು ಮತದಾರರ ಸರಾಸರಿ ಗಳ ವ್ಯತ್ಯಾಸಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ತಹಶೀಲ್ದಾರರು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಹೆಚ್ಚಿನ ನಿಗಾವಹಿಸ ಬೇಕು ಎಂದು ತಿಳಿಸಿದರು.
ಸಭೆ ನಡೆಸುತ್ತಲೇ ಹೆಚ್ಚುವರಿ ಜಿಲ್ಲಾಧಿ ಕಾರಿಗಳ ಮೂಲಕ ವಿವಿಧ ಬೂತ್ ಮಟ್ಟದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿಸಿ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಬಿಎಲ್‍ಓ ಗಳಿಗಿರುವ ಜ್ಞಾನ, ಕಾರ್ಯ ನಿರ್ವಹಿಣೆ ವಿಧಾನದ ಬಗ್ಗೆ ಖಾತರಿ ಪಡಿಸಿಕೊಂಡರು. ಉಪ ವಿಭಾಗಾಧಿಕಾರಿ ಡಾ.ನಾಗರಾಜ್, ಹಾಗೂ ಲಕ್ಷ್ಮಿಕಾಂತ ರೆಡ್ಡಿ ಅವರು ಕ್ಷೇತ್ರವಾರು ಮತದಾರರ ಪಟ್ಟಿ ಪರಿಷ್ಕರಣೆಗೆ ವಹಿಸಿರುವ ಕ್ರಮಗಳ ಬಗ್ಗೆ ವಿವರಿಸಿದರು. ವಿವಿಧ ತಾಲೂಕುಗಳ ತಹ ಶೀಲ್ದಾರರು, ವಿವಿಧ ಇಲಾಖಾ ಅಧಿಕಾರಿ ಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.