ಗುಂಡ್ಲುಪೇಟೆ: ಕೇಂದ್ರ ಸಚಿವರಾಗಿದ್ದ ಎಚ್.ಎನ್.ಅನಂತ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಅಜಾತಶ್ರತುವನ್ನು ಕಳೆದುಕೊಂಡು ಬಿಜೆಪಿ ಅನಾಥವಾಗಿದೆ ಎಂದು ಬಿಜೆಪಿ ಮುಖಂಡ ನಾಗೇಶ್‍ಜಿ ಸಂತಾಪ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಕರ್ನಾಟಕ ಕಾವಲು ಪಡೆ ವತಿಯಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತ ನಾಡಿ, ಅನಂತಕುಮಾರ್ ಬಿಜೆಪಿಗೆ ಶಕ್ತಿಯಾ ಗಿದ್ದರು. ಅವರ ಸಂಘಟನಾತ್ಮಕ ಚತುರತೆ ಯಿಂದ ರಾಜ್ಯದಲ್ಲಿ ಬಿಜೆಪಿಯು ಶಕ್ತಿಯುತವಾಗಿ ಬೆಳೆದಿದೆ ಎಂದರು.
ನೂರಾರು ಜನಪರ ಕಾಳಜಿಯ ಕಾರ್ಯ ಕ್ರಮವನ್ನು ಕೇಂದ್ರ ಸರ್ಕಾರದಿಂದ ಕೊಡುಗೆಯಾಗಿ ನೀಡುವಲ್ಲಿ ಅನಂತ ಕುಮಾರ್ ಪಾತ್ರ ಹಿರಿದಾಗಿದೆ ಎಂದು ಅವರ ಜನಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷ ರಶೀದ್, ಟೌನ್ ಅಧ್ಯಕ್ಷ ಅಬ್ದುಲ್ ಮಾಲಿಕ್, ಉಪಾಧ್ಯಕ್ಷ ಎಂ.ಸಾದೀಕ್‍ಪಾಷ, ಪದಾಧಿಕಾರಿಗಳಾದ ಎಸ್.ಮುಬಾರಕ್, ಗೌರವಾಧ್ಯಕ್ಷ ಟೈಲರ್ ಶಕೀಲ್, ಜಿಲ್ಲಾ ಉಪಾಧ್ಯಕ್ಷ ಅಮೀರ್, ಸಂಚಾಲಕ ಕೃಷ್ಣಪ್ಪ, ಮುಖಂಡರಾದ ಶ್ರೀನಿ ವಾಸಮೂರ್ತಿ, ರಾಜಣ್ಣ, ಶೈಲೇಶ್ ಇತರರಿದ್ದರು.