ಮಠ ಮಂದಿರಗಳು ರಾಜಕೀಯ ಕೇಂದ್ರಗಳಾಗಬಾರದು: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ
ಹಾಸನ

ಮಠ ಮಂದಿರಗಳು ರಾಜಕೀಯ ಕೇಂದ್ರಗಳಾಗಬಾರದು: ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ

November 14, 2018

ಬೇಲೂರು: ಮಠ ಮಂದಿರ ಗಳು ಶ್ರದ್ದಾ ಭಕ್ತಿಯ ಕೇಂದ್ರಗಳಾಗಬೇಕೆ ಹೊರತು ರಾಜಕೀಯ ಕೇಂದ್ರಗಳಾಗ ಬಾರದು ಎಂದು ಸಿರೆಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಹಿತೋಕ್ತಿ ನುಡಿದರು.

ಬೇಲೂರು ತಾಲೂಕು ಹನಿಕೆ ವಿ. ಕೊಪ್ಪಲು ಗ್ರಾಮದಲ್ಲಿ ಶ್ರೀಮುರುಘೇಶ್ವರ ಶ್ರೀ ಮಲ್ಲೇಶ್ವರ ಸ್ವಾಮೀಜಿ ದೇವಾಲಯದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಧಾರ್ಮಿಕ ಭಾವನೆ ಗಳಿಗೋಸ್ಕರವಾಗಿ ಪ್ರತಿ ಹಳ್ಳಿಗಳಲ್ಲಿ ದೇವಾಲಯವಿರಬೇಕು. ದೇವಾಲಯಗಳು ಧಾರ್ಮಿಕ ಭಾವನೆ ಮೂಡಿಸುವಂತೆ ಭಕ್ತಿಯ ನೆಲೆಯಂತೆ ಭಕ್ತಿಯ ಮಹಾ ಮನೆಯಾಗ ಬೇಕು. ಆದರೆ ಇದರಲ್ಲಿ ರಾಜಕೀಯ ಸುಳಿವು ಬರದಂತೆ ಎಚ್ಚರ ವಹಿಸಬೇಕು. ಪ್ರತಿ ಗ್ರಾಮಗಳು ಸಹ ಮದ್ಯಪಾನ ಮುಕ್ತವಾಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ಬುದ್ಧಿವಂತರೆ ಇಂತಹ ಒಂದು ದುಶ್ಚಟ ಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಒಬ್ಬ ವ್ಯಕ್ತಿ ರಾಜಕೀಯವಾಗಿ ಗುರು ತಿಸಿಕೊಳ್ಳುವ ಬದಲು ಒಂದು ಸಾಮಾನ್ಯ ಮನುಷ್ಯನಾಗಿ ಮಠ ಮಂದಿರಗಳಲ್ಲಿ ಸೇವಾ ಮನೋಭಾವನೆಯಿಂದ ಇರಬೇಕು. ಆದರೆ ರಾಜಕೀಯ ಗುಂಪುಗಾರಿಕೆಯಿಂ ದಾಗಿ ಮಠ ಮಾನ್ಯ ಕೆಂದ್ರಗಳನ್ನು ಅಳೆಯ ಲಾಗುತ್ತಿದೆ. ಮಠ ಮಾನ್ಯಗಳಿಂದ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಿಗೆ ಜಾಗೃತಿ ಮೂಡಿ ಸುವಂತಹ ಕೆಲಸ ಆಗಬೇಕು. ಮಠ ಮಾನ್ಯ ಗಳಿಂದ ಸಾಮಾಜಿಕ ಸಂಘರ್ಷಗಳಿಗೆ ಕಾರಣ ವಾಗಬಾರದು ಎಂದ ಅವರು ಇಲ್ಲಿ ಧಾರ್ಮಿಕ ಕಾರ್ಯಗಳನ್ನು ಬಿತ್ತುವ ಕೆಲಸ ಮಾಡ ಬೇಕು. ನಮ್ಮ ಧರ್ಮ, ಸಂಸ್ಕೃತಿ ಬೆಳೆಸುವ ಕೆಲಸ ಪೋಷಕರು ಮಾಡಬೇಕೆಂದರು.

ಬಸವ ಮಂದಿರದ ಜಯ ಬಸವಾ ನಂದ ಸ್ವಾಮೀಜಿ ಮಾತನಾಡಿ, ಭಕ್ತಿ ಶ್ರದ್ಧೆ ಯಿಂದ ಬುದ್ದ, ಬಸವ, ಅಂಬೇಡ್ಕರ್ ಈ ಮೂವರು ಮಹಾನ್ ವ್ಯಕ್ತಿಗಳು ಸಮಾಜ ಕಟ್ಟಿದವರು. ಇವರ ದಿವ್ಯ ಸಂದೇಶಗಳು ಮನುಕುಲಕ್ಕೆ ಆದರ್ಶಪ್ರಾಯ. ಇಂದು ಈ ಮಹಾನ್ ನಾಯಕರುಗಳನ್ನು ಒಂದೊಂದು ಜಾತಿಗೆ ಮೀಸಲಿಟ್ಟು ಅವರನ್ನು ವಿಂಗಡಿ ಸುವಂತಹ ಕೆಲಸವನ್ನು ಮಾಡಲಾಗುತ್ತಿದೆ. ಅವರ ಆದರ್ಶಗಳು ಮಾಯವಾಗುತ್ತಿವೆ, ದೇವಾಲಯಗಳು ಶಾಂತಿಯ ನೆಲೆಯಾಗ ಬೇಕೆ ಹೊರತು ಕ್ರಾಂತಿಯಾಗಬಾರದು. ಇದು ಸಂಸ್ಕೃತಿಯ ಕೇಂದ್ರವಾಗಿ ಮಾರ್ಪಟ್ಟಾಗಿ ಪ್ರತಿಯೊಬ್ಬರಿಗೂ ಸಹ ಎಲ್ಲಾ ಜಾತಿ, ಮತ, ಭೇದ ರಹಿತ ಕೇಂದ್ರಗಳಾಗ ಬೇಕೆಂದು ಆಶಯ ವ್ಯಕ್ತಪಡಿಸಿದರು.

ಶಾಸಕ ಕೆ.ಎಸ್,ಲಿಂಗೇಶ್ ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಇಂದು ಮಂದಿರಗಳು ಹೆಚ್ಚಾಗುತ್ತಿದ್ದು, ಭಕ್ತಿಯ ಸಂಕೇತವಿದು. ಕೇವಲ ಮಂದಿರಗಳನ್ನು ಕಟ್ಟಿ ಬಿಡದೆ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಬಿತ್ತುವ ಕೆಲಸ ಆಗಬೇಕು. ಈಗಾಗಲೇ ಈ ಭಾಗಗಳಲ್ಲಿ ಸುಮಾರು 10 ವರ್ಷಗಳಿಂದ ಬರಗಾಲವಾದ್ದರಿಂದ ಕುಡಿ ಯುವ ನೀರಿಗೆ ತುಂಬ ತೊಂದರೆಯಾ ಗಿದ್ದು ನದಿಮೂಲದಿಂದ ನೀರು ಹರಿಸುವ ಕೆಲಸವನ್ನು ಮಾಡಲಾಗುವುದು. ಈ ಭಾಗದ ಹಲವಾರು ಗ್ರಾಮಗಳಿಗೆ ರಸ್ತೆ, ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುವುದು. ನಮ್ಮ ಹಿಂದಿನ ಕಾಲದ ಹನಿಕೆ ಸಂತೆಯನ್ನು ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಶಾಸಕ ಸಿಟಿ.ರವಿ, ಬಿಜೆಪಿ ಅಧ್ಯಕ್ಷ ಕೊರಟಿ ಗೆರೆ ಪ್ರಕಾಶ್, ಹಾಸನ ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಹುಲ್ಲಳ್ಳಿ ಸುರೇಶ್, ಜಿಪಂ ಸದಸ್ಯ ಹೆಚ್.ಎಂ. ಮಂಜಪ್ಪ, ತಾಪಂ ಸದಸ್ಯ ಮಂಜುನಾಥ್, ವೀರಶೈವ ಸಮಾಜದ ತಾ.ಅಧ್ಯಕ್ಷ ರಾಜಶೇಖರ್, ಗ್ರಾನೇಟ್ ರಾಜಶೇಖರ್, ಸಾಹಿತಿ ಚಟ್ನಳ್ಳಿ ಮಹೇಶ್, ಭುವನೇಶ್, ದೇವಾಲಯ ಸಮಿತಿಯ ಅಧ್ಯಕ್ಷ ಶಾಂತವೀರಪ್ಪ ಇತರರು ಇದ್ದರು.

Translate »