ಅರಸೀಕೆರೆಯಲ್ಲಿ ಅನಧಿಕೃತ ಕಟ್ಟಡ, ಅನೈರ್ಮಲ್ಯದ ಕಿರಿಕಿರಿ..!
ಹಾಸನ

ಅರಸೀಕೆರೆಯಲ್ಲಿ ಅನಧಿಕೃತ ಕಟ್ಟಡ, ಅನೈರ್ಮಲ್ಯದ ಕಿರಿಕಿರಿ..!

November 14, 2018

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ: ಸಾಂಕ್ರಾಮಿಕ ಕಾಯಿಲೆಗಳ ಭೀತಿ

ಅರಸೀಕೆರೆ:  ಪ್ರತಿಯೊಂದು ಕಟ್ಟಡದ ನಿರ್ಮಾಣ ಸರ್ಕಾರದ ಕಾನೂನಿ ನನ್ವಯ ನಡೆಯಬೇಕು. ಅಧಿಕೃತವಾಗಿ ಸರ್ಕಾರಿ ನಿಯಮಗಳ ಪಾಲನೆಯಾದಾಗ ಕಾನೂನುಗಳಿಗೆ ಮಾನ್ಯತೆ ನೀಡಿದಂತಾ ಗುತ್ತದೆ. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರಸೀಕೆರೆಯಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿದೆ. ಜೊತೆಗೆ, ನಗರದಲ್ಲಿ ಅನೈರ್ಮಲ್ಯ ತಾಂಡವಾಡು ತ್ತಿದ್ದು, ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ.

ನಗರದ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಜವಾಬ್ದಾರಿಯುತ ಅಧಿಕಾರ ಹಂಚಿಕೆಯಾಗದ ಕಾರಣ ಅಧಿ ಕಾರಿಗಳ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾರ್ವ ಜನಿಕರ ಸಮಸ್ಯೆಗೆ ಅವರು ಸ್ಪಂದಿಸುತ್ತಿಲ್ಲ. ನಗರದ ಸ್ವಚ್ಛತೆ ಮರಿಚೀಕೆಯಾಗಿದ್ದು, ಜನರು ಡೆಂಗ್ಯೂ, ಚಿಕನ್‍ಗುನ್ಯಾ, ಹೆಚ್1 ಎನ್1 ಅಂತಹ ಸಾಂಕ್ರಾಮಿಕ ಕಾಯಿಲೆ ಗಳಿಗೆ ತುತ್ತಾಗುತ್ತಿದ್ದಾರೆ.

ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ: ನಗರದ ರಾಷ್ಟ್ರೀಯ ಹೆದ್ದಾರಿ ಬಲಭಾಗ ದಲ್ಲಿರುವ ವಾಚನಾಲಯ ರಸ್ತೆ, ಅರಳಿಕಟ್ಟೆ ಬೀದಿಗಳು ಸೇರಿದಂತೆ ವಿವಿಧ ಪ್ರದೇಶ ಗಳಲ್ಲಿ ಕಸದ ರಾಶಿ ಸಂಗ್ರಹವಾಗಿದೆ. ಚರಂಡಿಗಳಲ್ಲಿ ಹೂಳು ತುಂಬಿದ್ದು, ಗಬ್ಬು ನಾರುತ್ತಿದೆ. ಇದರಿಂದ ಸುತ್ತಲಿನ ಜನರಿಗೆ ಕಿರಿಕಿರಿಯುಂಟಾಗುತ್ತಿದೆ.

‘ನಗರದ ವಿವಿಧೆಡೆ ಕಸದ ರಾಶಿ ಸಂಗ್ರಹ ವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿ ಗಳಿಗೆ ಮಾಹಿತಿ ನೀಡಿದರೂ ಅವರು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಸುತ್ತಲಿನ ಜನರು ಜೀವನ ನಡೆಸುವುದೆ ಕಷ್ಟಕರ ವಾಗಿದೆ. ಇನ್ನಾದರೂ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕಸದ ರಾಶಿಗಳನ್ನು ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡ ಬೇಕು’ ಎಂದು ಸ್ಥಳೀಯ ಮುಖಂಡ ರೊಬ್ಬರು ಒತ್ತಾಯಿಸಿದ್ದಾರೆ.

ತಲೆ ಎತ್ತಿ ನಿಂತಿದೆ ಅನಧಿಕೃತ ಕಟ್ಟಡ: ನಗರಸಭೆ ಪರವಾನಗಿ ಪಡೆಯದೇ ನಗರದ ಹೃದಯ ಭಾಗದಲ್ಲಿ ಅಕ್ರಮ ಕಟ್ಟಡ ಗಳನ್ನು ಕಟ್ಟಲಾಗುತ್ತಿದೆ. ಈ ಬಗ್ಗೆ ನಗರ ಸಭೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೆ ಅವರು, ಇದು ನಮಗೆ ಸಂಬಂಧಿಸಿದ ವಿಷಯವಲ್ಲ ವೆಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.

ಪಾತ್ರೆ ಪುಟ್ಟಯ್ಯ ಶೆಟ್ಟಿ ವೃತ್ತದಲ್ಲಿ ಪಿ.ಪಿ. ಆರ್ಕೆಡ್ ಎಂಬ ಹೆಸರಿನ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. ಇದರ ಮುಂಭಾಗದಲ್ಲಿ ಕಟ್ಟಡ ನೀಲ ನಕ್ಷೆಯಂತೆ ಕಾನೂನಾತ್ಮಕ ಖಾಲಿ ಸ್ಥಳವನ್ನು ಬಿಡ ಲಾಗಿತ್ತು. ಆದರೆ, ಆ ಸ್ಥಳದಲ್ಲಿ ಕಟ್ಟಡದ ಮಾಲೀಕರು ನಗರಸಭೆ ಗಮನಕ್ಕೆ ತರದೇ ಮೀಸಲಾಗಿದ್ದ ಖಾಲಿ ಸ್ಥಳದಲ್ಲಿ ರಾತ್ರೋ ರಾತ್ರಿ ಅನಧಿಕೃತ ಕಟ್ಟಡವನ್ನು ನಿರ್ಮಿಸ ಲಾಗಿದೆ. ಇದನ್ನು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ನಡ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷ ಕಿರಣ್‍ಕುಮಾರ್ ದೂರಿದರು.

ನಗರದಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿ ರುವ ಕಟ್ಟಡಗಳಿಗೆ ತಡೆ ಹಾಗೂ ನಗರದ ಸ್ವಚ್ಛತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳ ಬೇಕು. ಈ ಸಂಬಂಧ ಜಿಲ್ಲಾಡಳಿತ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಒತ್ತಾಯಿಸಿದೆ.

ನಗರದಲ್ಲಿ ಅನಧಿಕೃತ ಕಟ್ಟಡಗಳು ಎಗ್ಗಿ ಲ್ಲದೇ ನಿರ್ಮಾಗುತ್ತಿದೆ. ಪರವನಾಗಿ ಪಡೆ ಯದೇ ಕಟ್ಟುತ್ತಿರುವ ಕಟ್ಟಡಗಳಿಗೆ ಸ್ಥಳೀಯ ನಗರಸಭೆ ಕೆಲವು ಅಧಿಕಾರಿಗಳು ಮತ್ತು ಮಧ್ಯ ವರ್ತಿಗಳು ಪರೋಕ್ಷವಾಗಿ ಕೈ ಜೋಡಿಸಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಉಂಟು ಮಾಡುತ್ತಿದ್ದಾರೆ. ಕಾಯ್ದಿರಿಸಲಾದ ಸ್ಥಳವನ್ನು ಅಧಿಕಾರಿಗಳು ದುರುಪಯೋಗವಾಗದಂತೆ ಎಚ್ಚರ ವಹಿಸಿ ಅನಧಿಕೃತ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು. -ಕಿರಣ್‍ಕುಮಾರ್,ಅಧ್ಯಕ್ಷರು, ಕರವೇ ನಗರ ಘಟಕ

ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ಅನಧಿಕೃತ ಮಳಿಗೆ ಕಟ್ಟಡದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ಆರ್‍ಓ ಅವರಿಗೆ ನಿದೆರ್Éೀಶನ ನೀಡಲಾಗಿದೆ. ವರದಿ ಪ್ರಕಾರ ಕಾನೂನು ಬಾಹಿರ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು. ನಗರದ ಸ್ವಚ್ಛತೆ ಬಗ್ಗೆ ಸಾಕಷ್ಟು ಗಮನವನ್ನು ನಗರಸಭೆ ನೀಡಿದ್ದು, ಈಗಾಗಲೇ ಶೇಖರಣೆ ಆಗಿರುವ ಕಸವನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ -ಪರಮೇಶ್ವರಪ್ಪ, ಪೌರಾಯುಕ್ತರು ಅರಸೀಕೆರೆ ನಗರಸಭೆ

Translate »