ಮೈಸೂರಲ್ಲಿ ಆಟೋ ಬಾಡಿಗೆ ದರ ಹೆಚ್ಚಳ
ಮೈಸೂರು

ಮೈಸೂರಲ್ಲಿ ಆಟೋ ಬಾಡಿಗೆ ದರ ಹೆಚ್ಚಳ

February 2, 2022

ಕನಿಷ್ಠ ೨ ಕಿಮೀಗೆ ೩೦ ರೂ. ನಂತರದ ಪ್ರತಿ ಕಿಮೀಗೆ ೧೫ ರೂ. ದರ ನಿಗದಿ

ಮೊದಲ ೫ ನಿಮಿಷ ಕಾಯಲು ಫ್ರೀ; ನಂತರದ ಪ್ರತಿ ೧೫ ನಿಮಿಷಕ್ಕೆ ೫ ರೂ. ದರ ನಿಗದಿ

ಮೈಸೂರು, ಫೆ.೧(ಆರ್‌ಕೆ )- ಮೈಸೂರಲ್ಲಿ ಆಟೋರಿಕ್ಷಾಗಳ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ಇಂದಿನಿAದಲೇ ಹೊಸ ದರಗಳು ಜಾರಿಗೆ ಬಂದಿವೆ. ಕನಿಷ್ಠ ೨ ಕಿಮೀಗೆ ೩೦ ರೂ. ಮತ್ತು ನಂತರದ ಪ್ರತಿ ಕಿಮೀಗೆ ೧೫ ರೂ. ದರ ನಿಗದಿ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಮೈಸೂರು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯು ಆಟೋರಿಕ್ಷಾ ಬಾಡಿಗೆ ದರವನ್ನು ಪರಿಷ್ಕರಿಸಲು ನಿರ್ಧರಿಸಿ, ಹೊಸ ದರವು ಇಂದಿನಿAದಲೇ ಜಾರಿಗೊಳ್ಳಲು ಅನುಮತಿ ನೀಡಲಾಯಿತು.
ಮೈಸೂರು ನಗರ ಆಟೋ ಚಾಲಕರು ಮತ್ತು ಮಾಲೀಕರ ಒಕ್ಕೂಟ ಹಾಗೂ ಮೈಸೂರು ಆಟೋರಿಕ್ಷಾ ಸರ್ವಿಸ್ ಟ್ರಸ್ಟ್ ಪದಾಧಿಕಾರಿಗಳು ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿ, ಎಲ್‌ಪಿಜಿ ಗ್ಯಾಸ್ ಲೀಟರ್‌ಗೆ ೬೯ರೂ. ಗಳಾಗಿದ್ದು, ಪೆಟ್ರೋಲ್ ದರವೂ ಏರಿಕೆಯಾಗಿರುವುದರಿಂದ ಆಟೋ ಬಾಡಿಗೆ ದರವನ್ನು ಹೆಚ್ಚಿಸಬೇಕೆಂದು ಕೋರಿಕೊಂಡಿದ್ದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲೂ ಇಂಧನ ಬೆಲೆಯ ನಿರ್ವಹಣಾ ವೆಚ್ಚ ದುಬಾರಿಯಾಗಿರುವುದರಿಂದ ಪ್ರಸ್ತುತ ಜಾರಿಯಲ್ಲಿರುವ ಬಾಡಿಗೆ ದರದಲ್ಲಿ ಸೇವೆ ಕಲ್ಪಿಸಲು ಸಾಧ್ಯವಿಲ್ಲ ಎಂದು ಆಟೋ ಮಾಲೀಕರು ಮತ್ತು ಚಾಲಕರು ಕೋರಿಕೊಂಡರು. ಈ ಕುರಿತು ಸುದೀರ್ಘ ಚರ್ಚೆ ನಡೆದ ನಂತರ ಅಂತಿಮವಾಗಿ ಆಟೋ ಬಾಡಿಗೆ ದರವನ್ನು ಪರಿಷ್ಕರಿಸಲು ಒಪ್ಪಿಗೆ ನೀಡಲಾಯಿತು.

ಅದರಂತೆ ಕನಿಷ್ಠ ೨.ಕಿಮೀಗೆ (ಮೂವರು ಪ್ರಯಾಣ ಕರಿಗೆ) ೩೦ ರೂ. ನಂತರದ ಪ್ರತೀ ಕಿಮೀಗೆ ೧೫ ರೂ. ಏರಿಕೆಯಾದಂತಾ ಗಿದೆ. ಮೊದಲ ೫ ನಿಮಿಷ ಕಾಯುವುದು (ವೆಯ್ಟಿಂಗ್ ಚಾರ್ಜ್) ಉಚಿತವಾಗಿದ್ದು, ನಂತರದ ಪ್ರತಿ ೧೫ ನಿಮಿಷಕ್ಕೆ ೫ ರೂ. ಲಗೇಜು ದರ ೨೦ ಕೆಜಿವರೆಗೆ ಉಚಿತವಾಗಿದ್ದು, ನಂತರದ ತೂಕಕ್ಕೆ ೫ ರೂ. ಪ್ರಯಾಣ ಕರಿಗೆ ಗರಿಷ್ಠ ಲಗೇಜು ೫೦ ಕೆಜಿಗೆ ಮಿತಿ ಗೊಳಿಸಲಾಗಿದೆ. ರಾತ್ರಿ ೧೦ರಿಂದ ಮುಂಜಾನೆ ೫ರವರೆಗೆ ಪ್ರಯಾಣ ದರವನ್ನು ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಭಾಗ ಹೆಚ್ಚುವರಿಯಾಗಿ ಪಾವತಿಸುವುದು ಎಂದು ಸಭೆ ನಿರ್ಧರಿಸಿತು. ಈವರೆಗೆ ಮೊದಲ ೨ ಕಿಮೀಗೆ ೨೫ ರೂ. ನಂತರದ ಪ್ರತಿ ಕಿಮೀಗೆ ೧೩ ರೂ. ಆಟೋ ಬಾಡಿಗೆ ದರ ಚಾಲ್ತಿಯಲ್ಲಿತ್ತು. ಅದೇ ರೀತಿ ಬಸ್ ಸ್ಟಾö್ಯಂಡ್, ರೈಲ್ವೇ ಸ್ಟೇಷನ್ ಗಳಿಂದ ಹೊರಡುವ ಪ್ರೀಪೇಯ್ಡ್ ಆಟೋಗಳಿಗೆ ಬರುವ ಪ್ರಯಾಣ ಕರಿಗೆ ಕೊಡುವ ಚೀಟಿಯಲ್ಲೂ ಹೊಸ ದರವನ್ನು ನಮೂದಿಸುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್-೧೯ ನಿರ್ಬಂಧ ಸಂದರ್ಭ ಸರ್ಕಾರ ನೀಡಿದ ೩ ಸಾವಿರ ರೂ. ಹಣ ಸಂದಾಯವಾಗದ ಆಟೋ ಚಾಲಕರಿಗೆ ಪಾವತಿಸಬೇಕು, ಡಿಎಲ್ ರಿನೀವಲ್, ಎಫ್‌ಸಿಯಂತಹ ಸೇವೆಗಳನ್ನು ವಿಳಂಬ ಮಾಡದೇ ಒದಗಿಸಿ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಪ್ರತೀ ೩ ತಿಂಗಳಿಗೊಮ್ಮೆ ಸಾರಿಗೆ ಅದಾಲತ್ ನಡೆಸಿ ಆಟೋ ಚಾಲಕರ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆಯೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಡಿಷನಲ್ ಎಸ್ಪಿ ಆರ್.ಶಿವಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮಾನಂದ ಪಾಟೀಲ್, ಅಸಿಸ್ಟೆಂಟ್ ಆರ್‌ಟಿಒ ಹೇಮಾವತಿ, ಆಟೋ ಸಂಘದ ಶ್ರೀನಿವಾಸ್ ಮಿತ್ರ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »