ರೈತರ ಆದಾಯ ದ್ವಿಗುಣ; ಬಡವರ ಕಲ್ಯಾಣಕ್ಕೆ ಪೂರಕ ಬಜೆಟ್
ಮೈಸೂರು

ರೈತರ ಆದಾಯ ದ್ವಿಗುಣ; ಬಡವರ ಕಲ್ಯಾಣಕ್ಕೆ ಪೂರಕ ಬಜೆಟ್

February 2, 2022

ನವದೆಹಲಿ, ಫೆ.೧- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳ ವಾರ ಲೋಕಸಭೆ ಯಲ್ಲಿ ಮಂಡಿಸಿದ ೨೦೨೨-೨೩ನೇ ಸಾಲಿನ ಕೇಂದ್ರ ಬಜೆಟ್ ಎಲ್ಲ ವರ್ಗಕ್ಕೂ ವಿಶೇಷ ವಾಗಿ ಬಡವರು ಮತ್ತು ಸಮಾಜದ ಹಿಂದುಳಿದ ವರ್ಗದವರಿಗೆ ಪ್ರಯೋ ಜನಕಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.
ದುಡಿಯುವ, ಮಧ್ಯಮ ವರ್ಗ ದವರಿಗೆ ಈ ಬಜೆಟ್‌ನಲ್ಲಿ ಯಾವ ಪ್ರಯೋಜನವೂ ದೊರೆತಿಲ್ಲ ಎಂದು ಪ್ರತಿಪಕ್ಷಗಳು ಪ್ರತಿಪಾದಿಸುತ್ತವೆ. ಆದರೆ ಇದು ಜನ ಸ್ನೇಹಿ ಮತ್ತು ಪ್ರಗತಿಪರ, ಬಡ ಜನರ ಕಲ್ಯಾಣವನ್ನು ಕೇಂದ್ರೀ ಕರಿಸಿದ ಬಜೆಟ್ ಎಂದು ಹೇಳಿದರು.

ಕಾವೇರಿ-ಪೆನ್ನಾರ್ ಸೇರಿ ೫ ಪ್ರಮುಖ ನದಿಗಳ ಜೋಡಣೆ
ನವದೆಹಲಿ:ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ ಪ್ರಮುಖ ಐದು ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿ ದ್ದಾರೆ. ಕಾವೇರಿ-ಪೆನ್ನಾರ್ ಸೇರಿದಂತೆ ಕೃಷ್ಣಾ-ಪೆನ್ನಾರ್ ನದಿ, ನರ್ಮದಾ-ಗೋದಾವರಿ, ಗೋದಾವರಿ-ಕೃಷ್ಣ ಜೋಡಣೆಗೂ ಅನುಮೋದನೆ ನೀಡಲಾಗಿದೆ. ಈ ಐದು ನದಿಗಳ ಜೋಡಣೆಗೆ ಕೇಂದ್ರ ಬಜೆಟ್‌ನಲ್ಲಿ ೪೪,೬೦೫ ಕೋಟಿ ರೂ. ಅನುದಾನ ಮೀಸಲಿಡಲಾಗುತ್ತದೆ. ನೀರಾವರಿ ವಿಚಾರ ವಾಗಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆ ಈ ವಿವಾದಗಳಿಗೆ ತೆರೆ ಎಳೆ ಯುವ ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ಅಡ್ಡಿಯಾದ ಬ್ರಿಟಿಷ್ ಕಾಯ್ದೆ: ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜಲಾನಯನ ಪ್ರದೇಶ ಹೊಂದಿರುವ ಪಾಲಾರ್ ಮತ್ತು ಪೆನ್ನಾರ್ ನದಿಯ ನೀರನ್ನು ಕರ್ನಾ ಟಕ ಬಳಸಿಕೊಳ್ಳಲು ಬ್ರಿಟಿಷರ ಕಾಲದ `೧೮೯೨ರ ಕಾಯ್ದೆ’ ಅಡ್ಡಿಯಾಗಿದೆ. ಈ ಕಾಯ್ದೆ ರದ್ದತಿಗೆ ೩ ರಾಜ್ಯಗಳು ಸರ್ಕಾ ರದ ಮೇಲೆ ಒತ್ತಡ ಹೇರುತ್ತಿವೆ.

ಪ್ರಸಕ್ತ ವರ್ಷವೇ ೫ಜಿ ಸೇವೆ ಆರಂಭ ಸರ್ಕಾರದಿAದ ಪಿಪಿಪಿ ಮಾದರಿಯಲ್ಲಿ ಸ್ಪೆಕ್ಟçಮ್ ಹರಾಜು ಪ್ರಕ್ರಿಯೆ
ನವದೆಹಲಿ, ಫೆ.೧- ಕೇಂದ್ರ ಸರ್ಕಾರವು ಈ ವರ್ಷ ಸ್ಪೆಕ್ಟçಮ್ ಹರಾಜನ್ನು ನಡೆಸಲಿದೆ. ಇದು ೨೦೨೨-೨೩ರ ಹಣಕಾಸು ವರ್ಷದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್ ಗಳಿಂದ ೫ಜಿ ಸೇವೆಗಳನ್ನು ಪಡೆದುಕೊಳ್ಳಲು ಅನು ಕೂಲವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಪ್ರಕಟಿಸಿದ್ದಾರೆ.

ಇಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿ ಸಿದ ಅವರು, ಖಾಸಗಿ ಟೆಲಿಕಾಂ ಪೂರೈಕೆದಾರರು ೨೦೨೨-೨೩ರೊಳಗೆ ೫ಉ ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ ೨೦೨೨ರಲ್ಲಿ ಸ್ಪೆಕ್ಟçಮ್ ಹರಾಜು ನಡೆಸಲಾಗುವುದು ಎಂದರು. ದೂರಸಂಪರ್ಕ ವಲಯ ಮತ್ತು ೫ಉ ನಿರ್ದಿಷ್ಟವಾಗಿ, ದೇಶದ ಆರ್ಥಿಕ ಮತ್ತು ಟೆಲಿಕಾಂ ಬೆಳವಣ ಗೆಯನ್ನು ಸಕ್ರಿಯಗೊಳಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ. ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಯ ಭಾಗವಾಗಿ ೫ಜಿಗಾಗಿ ಪರಿಸರ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ವಿನ್ಯಾಸ ಆಧಾರಿತ ಉತ್ಪಾದನೆಯನ್ನು ಆರಂಭಿಸಲಾಗು ವುದು. ಗ್ರಾಮೀಣ ಮತ್ತು ಕುಗ್ರಾಮ, ಹಳ್ಳಿ ಪ್ರದೇಶಗಳಲ್ಲಿನ ಜನರಿಗೆ ಕೈಗೆಟಕುವ ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೇವೆಯನ್ನು ನೀಡಲು ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯ ಅಡಿಯಲ್ಲಿ ವಾರ್ಷಿಕಸಂಗ್ರಹಣೆಯಲ್ಲಿ ಶೇಕಡಾ ೫ರಷ್ಟು ವಾರ್ಷಿಕ ಸಂಗ್ರಹಣೆ ನಿಧಿಯನ್ನು ನೀಡಲಾಗು ವುದು. ಇದರಿಂದ ಸಂಶೋಧನೆ ಮತ್ತು ಅಭಿವೃದ್ಧಿ ಹೆಚ್ಚಾಗಿ ತಂತ್ರಜ್ಞಾನ ಮತ್ತು ಪರಿಹಾರಗಳ ವಾಣ ಜ್ಯೀಕರಣವಾಗಲಿದೆ ಎಂದರು. ನಗರ ಪ್ರದೇಶಗಳ ಜನರಂತೆ ಕುಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರಿಗೆ ಸಹ ಇ-ಸೇವೆ, ಸಂಪರ್ಕ ವ್ಯವಸ್ಥೆ ಮತ್ತು ಡಿಜಿಟಲ್ ಸೌಲಭ್ಯಗಳು ಸರಾಗವಾಗಿ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು. ಎಲ್ಲಾ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕ ನೀಡಲು ಕಾಮಗಾರಿ ಗುತ್ತಿಗೆಯನ್ನು ಪ್ರಸಕ್ತ ವರ್ಷದಲ್ಲಿಯೇ ಪಿಪಿಪಿ ಮಾದರಿಯಲ್ಲಿ ಭಾರತ್ ನೆಟ್ ಯೋಜನೆಯಡಿಯಲ್ಲಿ ನೀಡಲಾಗುವುದು. ಇದರ ಕಾಮಗಾರಿ ೨೦೨೫ರ ಹೊತ್ತಿಗೆ ಪೂರ್ಣವಾಗುವ ನಿರೀಕ್ಷೆಯಿದೆ. ಆಪ್ಟಿಕಲ್ ಫೈಬರ್‌ನ್ನು ಹೆಚ್ಚು ದಕ್ಷತೆಯಿಂದ ಇನ್ನಷ್ಟು ಸುಗಮವಾಗಿ ಉತ್ತಮವಾಗಿ ಬಳಸುವಂತಾಗಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದರು.

ಸರ್ಕಾರಿ ನೌಕರರಿಗೆ ತೆರಿಗೆ ವಿನಾಯಿತಿ ಮಿತಿ ಶೇ.೧೦ ರಿಂದ ಶೇ.೧೪ಕ್ಕೆ ಹೆಚ್ಚಳ
ನವದೆಹಲಿ, ಫೆ.೧- ಕೇಂದ್ರ ಬಜೆಟ್ ೨೦೨೨ರಲ್ಲಿ ಸರ್ಕಾರಿ ನೌಕರರ ತೆರಿಗೆ ವಿನಾಯಿತಿ ಮಿತಿಯನ್ನು ಶೇ.೧೦ ರಿಂದ ಶೇ.೧೪ಕ್ಕೆ ಹೆಚ್ಚಳ ಮಾಡಿದೆ.
ಕೇಂದ್ರ ಸರ್ಕಾರಿ ನೌಕರರು ಪಿಂಚಣ ನಿಧಿಗಾಗಿ ಪಾವತಿಸು ತ್ತಿದ್ದ ಮೊತ್ತದಲ್ಲಿ ಸಿಗುತ್ತಿದ್ದ ತೆರಿಗೆ ವಿನಾಯ್ತಿಯ ಮಿತಿಯನ್ನು ಕಡಿತ ಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟಿçÃಯ ಪಿಂಚಣ ಯೋಜನೆ (ಓಚಿಣioಟಿಚಿಟ Peಟಿsioಟಿ Sಛಿheme : ಓPS) ಹೂಡಿಕೆಗಾಗಿ ರಾಜ್ಯ ಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆಯಲ್ಲಿ ಶೇ.೧೪ರ ಮಿತಿ ಸಿಗಲಿದೆ. ರಾಷ್ಟಿçÃಯ ಪಿಂಚಣ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮಾಡುವ ಹೂಡಿಕೆಗೆ ಈವರೆಗೆ ಶೇ.೧೮ರಷ್ಟು ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಈ ಮೊತ್ತವನ್ನು ಇದೀಗ ಶೇ.೧೫ಕ್ಕೆ ಇಳಿಸಲಾಗಿದೆ. ಈಗ ಎನ್‌ಪಿಎಸ್‌ನಲ್ಲಿ (ಓPS) ಶೇ.೧೦ರ ಬದಲು ಶೇ.೧೪ರಷ್ಟು ಕೊಡುಗೆ ನೀಡಲಾ ಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಅಂದರೆ ಸರ್ಕಾರಿ ನೌಕರರಿಗೆ ಎನ್‌ಪಿಎಸ್ ಯೋಜನೆಯಲ್ಲಿ ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.

 

ಮೂರು ವರ್ಷದಲ್ಲಿ ೪೦೦ `ವಂದೇ ಭಾರತ್’ ರೈಲು ಕವಚ್ ಅಡಿ ೨,೦೦೦ ಕಿ.ಮೀ. ರೈಲ್ವೇ ಜಾಲ ನಿರ್ಮಾಣ
ನವದೆಹಲಿ, ಫೆ.೧-ಸಂಸತ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ರೈಲ್ವೇ ಇಲಾಖೆಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ದೇಶದಲ್ಲಿ ಒಟ್ಟು ೪೦೦ ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದ್ದು, ಸಮಯ ಪಾಲನೆ ಮತ್ತು ಪ್ರಯಾಣ ಕರಿಗೆ ಅತ್ಯಾಧುನಿಕ ಸೌಕರ್ಯ ಗಳನ್ನು ಈ ರೈಲುಗಳು ಒದಗಿಸುತ್ತವೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರೈಲ್ವೆ ಪ್ರಯಾಣ ಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿದ್ದಾರೆ. ಮುಂದಿನ೩ ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ ೪೦೦ ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು. ೧೦೦ ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ೩ ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಮೆಟ್ರೋ ವ್ಯವಸ್ಥೆಯನ್ನು ನಿರ್ಮಿಸಲು ನವೀನ ಮಾರ್ಗಗಳ ಅನುಷ್ಠಾನ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕವಚ್ ಅಡಿ ೨,೦೦೦ ಕಿ.ಮೀ. ರೈಲ್ವೇ ಜಾಲ ನಿರ್ಮಾಣ: ಅಂತೆಯೇ ರೈಲ್ವೆಯ ಸುರಕ್ಷತೆ ಮತ್ತು ಸಾಮರ್ಥ್ಯವರ್ಧನೆಗಾಗಿ ೨,೦೦೦ ಕಿಮೀ ರೈಲು ಜಾಲವನ್ನು ಸ್ಥಳೀಯ ವಿಶ್ವ ದರ್ಜೆಯ ತಂತ್ರಜ್ಞಾನ ಕವಚ್ ಅಡಿಯಲ್ಲಿ ತರಲಾಗುವುದು ಎಂದು ಹೇಳಿದರು.

ಇನ್ನೂ ೩೫ ಲಕ್ಷ ಉದ್ಯೋಗ ಸೃಷ್ಟಿ
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯು ದೇಶದ ಆರ್ಥಿಕತೆ ಯನ್ನು ಉತ್ತೇಜಿಸಲಿದ್ದು, ಯುವಕರಿಗೆ ಹೆಚ್ಚಿನ ಉದ್ಯೋಗ ಗಳು ದೊರಕುವಂತೆ ಮಾಡುವಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಕ್ಕೆ ಮುಂದಾಗುವ ಭರವಸೆಯನ್ನು ನೀಡಿದ್ದಾರೆ. ನಿರ್ಮಲಾ ಸೀತಾರಾಮನ್ ಇಂದು ೪ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಇದು ನರೇಂದ್ರ ಮೋದಿ ನೇತೃತ್ವ ಸರ್ಕಾರದ ೧೦ನೇ ಬಜೆಟ್. ಕೊರೊನಾ ಕಾರಣ ದಿಂದಾಗಿ ಬಜೆಟ್‌ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಕಳೆದ ೨ ವರ್ಷಗಳಿಂದ ಬಜೆಟ್ ಪ್ರತಿ ಮುದ್ರಿಸದೇ, ಈ ಬಾರಿಯೂ ಡಿಜಿಟಲ್ ರೂಪದಲ್ಲಿ ಮಂಡಿಸಿದರು. ೨೦೨೦ ರಲ್ಲಿ ದಾಖಲೆಯ ೧೬೦ ನಿಮಿಷ ಬಜೆಟ್ ಮಂಡಿಸಿದ್ದರೇ, ಈ ಬಾರಿ ೯೩ ನಿಮಿಷಗಳ ಕಾಲ ಬಜೆಟ್ ಮಂಡಿಸಿದರು.

ಕೃಷಿಕರಿಗೆ ಸಂತಸದ ಸುದ್ದಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕೃಷಿಕರಿಗೆ ಸಂತಸದ ಸುದ್ದಿಯನ್ನು ನೀಡಲಾಗಿದೆ. ರೈತರಿಂದ ೧,೨೦೦ ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಮೂಲಕದೇಶದಲ್ಲಿಯೇ ತೈಲ ಉತ್ಪಾದನೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ತೈಲ ಆಮದು ಕಡಿತಗೊಳಿಸಿ, ಭಾರತದಲ್ಲಿಯೇ ತೈಲ ತಯಾರಿಕೆಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ರೈತರ ಬೆಳೆಗಳನ್ನು ಖರೀದಿ ಮಾಡಲು ೨.೩೭ ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗುವುದು. ಇದು ಏಪ್ರಿಲ್, ೨೦೨೨ ರಿಂದ ಮಾರ್ಚ್ ೨೦೨೩ ರವರೆಗೆ ಜಾರಿಯಲ್ಲಿರುತ್ತದೆ. ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ರಫ್ತಿಗೆ ಒತ್ತು ನೀಡುವ ಮೂಲಕ ಎಣ್ಣೆಬೀಜ ಕೃಷಿಯನ್ನು ಉತ್ತೇಜಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲು ಭೂ ದಾಖಲೆಗಳ ಡಿಜಿಟ ಲೀಕರಣವನ್ನು ತ್ವರಿತಗೊಳಿಸಲಾಗುವುದು. ಕಳೆದ ಬಾರಿ ರೈತರ ಬೆಳೆಗಳ ಬೆಂಬಲ ಬೆಲೆಯಡಿ ಖರೀದಿಸಲು ೨.೪೨ ಕೋಟಿ ಮೀಸಲಿಡಲಾಗಿತ್ತು.

ಗೋಧಿ, ರಾಗಿ ಬೆಳೆಗಳ ಖರೀದಿಯನ್ನೂ ಸರ್ಕಾರ ಹೆಚ್ಚಿಸಲಿದೆ. ರೈತರು ತಮಗೆ ಅನುಕೂಲವಾಗುವಂತಹ ಹಣ್ಣು, ತರಕಾರಿ ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು. ರೈತರಿಂದ ಎಂಎಸ್‌ಪಿ ದರದಲ್ಲಿ ದಾಖಲೆಯ ಖರೀದಿ ಮಾಡಲಾಗುವುದು. ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ಅವರು ತಿಳಿಸಿದರು. ಕೃಷಿ ವಿಶ್ವವಿದ್ಯಾ ಲಯದಲ್ಲಿ ಆಧುನಿಕ ಕೃಷಿ ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಪಠ್ಯ ಹಾಗೂ ಸಂಶೋಧನೆಗೆ ಅತ್ಯಗತ್ಯ ನೆರವು ನೀಡಲಾಗುವುದು ಎಂದು ಸಚಿವೆ ತಿಳಿಸಿದರು.
ವಿದ್ಯಾರ್ಥಿಯ ಮನೆ ಬಾಗಿಲಿಗೆ ಶಿಕ್ಷಣ: ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಈ ಡಿಜಿಟಲ್ ಯೂನಿವರ್ಸಿಟಿಯು ದೇಶದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಶಿಕ್ಷಣವನ್ನು ನೀಡಲಿದೆ ಎಂದರು. ವಿಶ್ವದರ್ಜೆಯ ಸಾರ್ವತ್ರಿಕ ಶಿಕ್ಷಣವನ್ನು ವೈಯಕ್ತಿಕ ಕಲಿಕಾ ಅನುಭವದೊಂದಿಗೆ ದೇಶದ ವಿದ್ಯಾರ್ಥಿಗಳ ಮನೆಯ ಬಾಗಿಲಿಗೆ ಪೂರೈಸಲು ಡಿಜಿಟಲ್ ಯುನಿವರ್ಸಿಟಿಯನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಹಿಳೆಯರು, ಮಕ್ಕಳ ಸಮಗ್ರ ಅಭಿವೃದ್ಧಿ: ಕೇಂದ್ರ ಬಜೆಟ್‌ನಲ್ಲಿ `ನಾರಿ ಶಕ್ತಿ’ಯ ಪ್ರಾಮುಖ್ಯತೆಯನ್ನು ಗುರುತಿಸಿ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ೩ ಯೋಜನೆಯನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. `ಮಿಷನ್ ಪೋಷಣ್ ೨.೦’, `ಮಿಷನ್ ವಾತ್ಸಲ್ಯ’ ಮತ್ತು `ಮಿಷನ್ ಶಕ್ತಿ’ ಎಂಬ ೩ ಯೋಜನೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಮಿಷನ್ ಪೋಷನ್ ಯೋಜನೆಯಡಿ ಮಕ್ಕಳಿಗಾಗಿ `ಸಕ್ಷಮ್ ಅಂಗನವಾಡಿ’ ರೂಪಿಸಲಾಗಿದ್ದು, ದೇಶಾದ್ಯಂತ ೨ ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಅಂಗನವಾಡಿಗಳಿಗೆ ಆಡಿಯೋ ಮತ್ತು ವಿಡಿಯೋ ವ್ಯವಸ್ಥೆ ಸೌಲಭ್ಯ ಒದಗಿಸಿ, ಮಕ್ಕಳ ಬೆಳವಣ ಗೆಗೆ ಉತ್ತಮ ಪರಿಸರ ನಿರ್ಮಿಸುವ ಹಾಗೂ ಮಹಿಳಾ ಅಭಿವೃದ್ಧಿಗೆ ಯೋಜನೆಗಳ ಪರಿಷ್ಕರಣೆ ಬಗ್ಗೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ: ದೇಶದಲ್ಲಿ ಲಭ್ಯವಿರುವ ಎಲ್ಲಾ ವೈದ್ಯಕೀಯ ಸೇವೆಗಳ ವಿವರಗಳನ್ನು ಪಡೆಯಲು ಅನುಕೂಲವಾಗುವಂತೆ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆನ್‌ಲೈನ್ ಮೂಲಕ ಆರೋಗ್ಯ ಸೇವೆಗಳ ವಿವರವನ್ನೂ ಒದಗಿಸಲು ಈ ಯೋಜನೆಯನ್ವಯ ರಾಷ್ಟಿçÃಯ ವೈದ್ಯಕೀಯ ಸೇವೆಗಳ ಸಮಗ್ರ ವಿವರಗಳನ್ನು ಒದಗಿಸುವ ವೇದಿಕೆಯನ್ನು ಕೇಂದ್ರ ಸರ್ಕಾರ ರೂಪಿಸಲಿದೆ. ಇದರಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಸೇವೆಗಳ ಸಮಗ್ರ ಮಾಹಿತಿ ಲಭ್ಯವಿದೆ. ವಿಶಿಷ್ಠ ಆರೋಗ್ಯ ಗುರುತು ಸಂಖ್ಯೆ ಮತ್ತು ಸಾರ್ವತ್ರಿಕ ಆರೋಗ್ಯ ಸೇವೆಗಳ ಮಾಹಿತಿಯೂ ಇದರಲ್ಲಿ ಲಭಿಸಲಿದೆ.

೨೦೨೫ರೊಳಗೆ ಎಲ್ಲಾ ಗ್ರಾಮಗಳಲ್ಲು ಓಎಫ್‌ಸಿ ಕೇಬಲ್ ಅಳವಡಿಕೆ: ಪ್ರತಿ ಗ್ರಾಮದಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ (ಓಎಫ್‌ಸಿ) ಸೌಕರ್ಯ ಒದಗಿಸಲಾಗುವುದು. ತಂತ್ರಜ್ಞಾನ ಆಧರಿತ ಸರ್ಕಾರಿ ಯೋಜನೆಗಳನ್ನು ಗ್ರಾಮಗಳಿಗೆ ತಲುಪಿಸುವ ಉದ್ದೇಶದಿಂದ ೨೦೨೫ರೊಳಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು.
ಎಲೆಕ್ಟಿçಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ: ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಎಲೆಕ್ಟಿçಕ್ ವಾಹನಗಳಿಗೆ ಉತ್ತೇಜಿಸಲು ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೊಳಿಸ ಲಾಗುತ್ತಿದೆ. ಅಲ್ಲದೇ, ಗ್ರೀನ್ ಪಬ್ಲಿಕ್ ಟ್ರಾನ್ಸ್ಪೋರ್ಟ್ಗೆ ಉತ್ತೇಜನ ನೀಡಲು ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಎಲೆಕ್ಟಿçಕ್ ವಾಹನ ಬ್ಯಾಟರಿ ಬದಲಾವಣೆ ಯೋಜನೆ ಯನ್ನೂ ಜಾರಿಗೊಳಿಸಲಾಗುತ್ತಿದೆ. ಚಾರ್ಜ್ ಆಗಿರುವ ಬ್ಯಾಟರಿ ಬದಲಾವಣೆಗಳಿಗೆ ಸ್ಟೇಷನ್‌ಗಳನ್ನು ತೆರೆಯಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

Translate »