ಮೈಸೂರಲ್ಲಿ ಫಾರ್ಮಾ ಎಪಿಐ ಪಾರ್ಕ್, NIPER ಕೇಂದ್ರ ಸ್ಥಾಪನೆ
ಮೈಸೂರು

ಮೈಸೂರಲ್ಲಿ ಫಾರ್ಮಾ ಎಪಿಐ ಪಾರ್ಕ್, NIPER ಕೇಂದ್ರ ಸ್ಥಾಪನೆ

February 2, 2022

ಮೈಸೂರು,ಫೆ.೧(ಆರ್‌ಕೆಬಿ)- ಮೈಸೂರಿನಲ್ಲಿ ಫಾರ್ಮಾ ಎಪಿಐ ಪಾರ್ಕ್ (active pharmaceutical ingre dients – API) ಹಾಗೂ ಎನ್‌ಐಪಿಇಆರ್ (national institute of pharmaceutical education and research – NIPER) ಸಂಸ್ಥೆ ಸ್ಥಾಪಿಸುವಂತೆ ಮೈಸೂರು -ಕೊಡಗು ಸಂಸದ ಪ್ರತಾಪ್‌ಸಿಂಹ ಮಂಗಳವಾರ ದೆಹಲಿ ಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳು, ಹೊಸ ಮತ್ತು ನವೀಕರಿಸಬಹುದಾದ ಶಕ್ತಿಯ ರಾಜ್ಯ ಸಚಿವ ಭಗ ವಂತ್ ಖೂಬಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಎಪಿಐ ಪಾರ್ಕ್ ಹಾಗೂ ಎನ್‌ಐಪಿಇಅರ್ ಮೈಸೂರಿ ನಲ್ಲಿ ಸ್ಥಾಪಿಸುವುದರಿಂದ ಚೆನ್ನೆöÊ ಮತ್ತು ಮಂಗಳೂರು ಇನ್ನಿ ತರೆ ಭಾಗಗಳಿಗೆ ಸರಕುಗಳನ್ನು ಸಾಗಿಸಲು ಹೆಚ್ಚು ಅನುಕೂಲ ವಾಗಲಿದೆ ಎಂದು ಅವರು ಸಚಿವರ ಗಮನ ಸೆಳೆದಿದ್ದಾರೆ. ಭಾರತವು ಪ್ರಸ್ತುತ ಚೀನಾದಿಂದ ಮೌಲ್ಯದ ಪರಿಭಾಷೆಯಡಿ ಸುಮಾರು ಶೇ.೬೮ರಷ್ಟು ಸಕ್ರಿಯ ಔಷಧೀಯ ಪದಾರ್ಥ ಗಳನ್ನು (API) ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾದರೆ ನಮ್ಮ ಆರೋಗ್ಯ ವಲಯ ಅಪಾಯ ಸಿಲುಕುವ ಸಾಧ್ಯತೆಗಳಿವೆ. ಈ ಪರಿ ಸ್ಥಿತಿಯು ಭಾರತಕ್ಕೆ ಗಂಭೀರ ಆತಂಕ ಉಂಟು ಮಾಡಿದೆ. ಆಮದುಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿ ಸಲು, ಬೃಹತ್ ಪ್ರಮಾಣದಲ್ಲಿ ಕೆಎಸ್‌ಎಂಗಳು, ಡ್ರಗ್ ಇಂಟರ್‌ಮಿಡಿ ಯಡ್‌ಗಳು ಮತ್ತು ಎಪಿಐಗಳ ದೇಶೀಯ ಉತ್ಪಾದನೆ ಯನ್ನು ಉತ್ತೇಜಿಸಲು ನರೇಂದ್ರ ಮೋದಿ ಸರ್ಕಾರವು ಪಿಎಲ್‌ಐ ಯೋಜನೆ ಪರಿಚಯಿಸಿದೆ.

ಕೇಂದ್ರ ಸರ್ಕಾರವು ಸ್ಥಳೀಯವಾಗಿ ಎಪಿಐ ಉತ್ಪನ್ನಗಳ ತಯಾರಿಸಲು ಎಪಿಐ ಪಾರ್ಕ್ಗಳನ್ನು ಉತ್ತೇಜಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಅಂತಹ ಒಂದು ಅಥವಾ ಹೆಚ್ಚಿನ ಎಪಿಐ ಪಾರ್ಕ್ಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಹೀಗಾಗಿ ಕರ್ನಾಟಕದ ಮೈಸೂರು ಮತ್ತು ಕೊಡಗು ಲೋಕ ಸಭಾ ಕ್ಷೇತ್ರದ ಸಂಸದರಾಗಿರುವ ನನ್ನ ಕ್ಷೇತ್ರದಲ್ಲಿಯೂ ಎಪಿಐ ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡುವಂತೆ ಪ್ರತಾಪ್‌ಸಿಂಹ ಮನವಿ ಮಾಡಿದರು.

ಎಪಿಐ ಪಾರ್ಕ್ ಸ್ಥಾಪನೆಗೆ ಮೈಸೂರು ಪ್ರದೇಶವು ಸೂಕ್ತ ಹಾಗೂ ಅರ್ಹವಾಗಿದೆ. ಏಕೆಂದರೆ ಇಲ್ಲಿ ಸುಮಾರು ೫೦ ಸಣ್ಣ, ಮಧ್ಯಮ ಮತ್ತು ದೊಡ್ಡ ಔಷಧೀಯ ಘಟಕಗಳನ್ನು ಹೊಂದಿದೆ. ಬೆಂಗಳೂರು- ದಕ್ಷಿಣ ಭಾರತದ ಫಾರ್ಮ ಸ್ಯುಟಿಕಲ್ ಹಬ್ ಆಗಿದ್ದು, ಕೇವಲ ೧೧೦ ಕಿ.ಮೀ. ದೂರ ದಲ್ಲಿದೆ. ಎರಡೂ ನಗರಗಳು ಉತ್ತಮ ಸಂಪರ್ಕವನ್ನು ಹೊಂದಿವೆ. ಜೊತೆಗೆ ಮುಂಬರುವ ಒಳನಾಡಿನ ಕಂಟೈನರ್ ಡಿಪೋ (IಅW/ಒಒಐP) ಎಪಿಐ ಪಾರ್ಕ್ನಿಂದ ಒಳ ನಾಡಿಗೆ ಸರಕುಗಳನ್ನು ಸಾಗಿಸುವುದು ಸುಲಭಗೊಳಿಸು ತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣ ಸಿ, ಮೈಸೂರು ಪ್ರದೇಶದಲ್ಲಿ ಎಪಿಐ ಪಾರ್ಕ್ ಸ್ಥಾಪಿಸಲು ಅನುಮತಿ ನೀಡುವಂತೆ ಸಂಸದರು ಸಚಿವರಲ್ಲಿ ಮನವಿ ಮಾಡಿದರು.

Translate »