ಡಾ.ಎಸ್.ಪಿ.ಯೋಗಣ್ಣ ಅವರಿಗೆ ಪ್ರಶಸ್ತಿ ಪ್ರದಾನ
ಮೈಸೂರು

ಡಾ.ಎಸ್.ಪಿ.ಯೋಗಣ್ಣ ಅವರಿಗೆ ಪ್ರಶಸ್ತಿ ಪ್ರದಾನ

July 5, 2021

ಮೈಸೂರು, ಜು.4(ಎಸ್‍ಪಿಎನ್)- ವೈದ್ಯ ದಿನಾಚರಣೆ ಅಂಗವಾಗಿ ಹಿರಿಯ ವೈದ್ಯ ಹಾಗೂ ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ ಅವರಿಗೆ ಡಾ.ಬಿ.ಸಿ.ರಾಯ್ ವೈದ್ಯ ಪ್ರಶಸ್ತಿ ಯನ್ನು ಕರ್ನಾಟಕ ಸೇನಾಪಡೆ ವತಿ ಯಿಂದ ಪ್ರದಾನ ಮಾಡಲಾಯಿತು.

ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಸೇನಾಪಡೆ ಜಿಲ್ಲಾ ಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ನೇತೃತ್ವ ದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಎಸ್.ಪಿ.ಯೋಗಣ್ಣ ಅವರು, ವೈದ್ಯರಾಗಿ, ಲೇಖಕರಾಗಿ, ಸಾಹಿತಿಗಳಾಗಿ ಸಮಾಜ ಸೇವೆ ಯಲ್ಲಿ ತೊಡಗಿದ್ದಾರೆ. ಕೊರೊನಾ ಸಂದರ್ಭ ದಲ್ಲಿ ವೈದ್ಯರ ಸೇವೆ ಯಾರೂ ಬೆಲೆ ಕಟ್ಟ್ಟ ಲಾಗದು. ಹಾಗಾಗಿ ಈ ಸಾಲಿನ ಡಾ.ಬಿ.ಸಿ ರಾಯ್ ಪ್ರಶಸ್ತಿಯನ್ನು ಡಾ.ಎಸ್.ಪಿ. ಯೋಗಣ್ಣ ಅವರಿಗೆ ಕೊರೊನಾ ಹಿನ್ನೆಲೆ ಯಲ್ಲಿ ಸರಳ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದರು. ಈ ವೇಳೆ ಕರ್ನಾಟಕ ಸೇನಾ ಪಡೆಯ ಉಪಾಧ್ಯಕ್ಷ ಪಿ.ಶಾಂತರಾಜೇಅರಸ್, ಅನಂತ್, ವಿಜ ಯೇಂದ್ರ, ಪಿ.ನಾಗರಾಜೇ ಅರಸ್, ಕುಮಾರ್ ಗೌಡ, ಮಂಜುನಾಥ್, ಎಂ.ಜೆ.ಚಂದು, ರವಿ, ಗಣೇಶ್ ಪ್ರಸಾದ್, ದರ್ಶನ್‍ಗೌಡ, ಸಿ.ಎಚ್.ಕೃಷ್ಣಯ್ಯ ಉಪಸ್ಥಿತರಿದ್ದರು.

Translate »