ಸ್ವದೇಶಿ ವಸ್ತುಗಳ ಬಳಸುವಂತೆ ಜಾಗೃತಿ ಅಭಿಯಾನ
ಮೈಸೂರು

ಸ್ವದೇಶಿ ವಸ್ತುಗಳ ಬಳಸುವಂತೆ ಜಾಗೃತಿ ಅಭಿಯಾನ

May 18, 2020

ಮೈಸೂರು, ಮೇ 17- ಕೊರೊನಾ ಹಾವಳಿ ಯೊಂದಿಗೆ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ವಿಸ್ತರಿಸುತ್ತಿದೆ. ಹಾಗೆಯೇ ಮೈಸೂ ರಿನ ನೇಸರ ಸೇವಾ ಸಂಸ್ಥೆ ವತಿಯಿಂದ `ಸ್ವದೇಶಿ ವಸ್ತುಗಳ ಬಳಸಿ, ದೇಶ ಉಳಿಸಿ’ ಅಭಿಯಾನ ನಡೆಸಲಾಯಿತು. ವಿದ್ಯಾರಣ್ಯ ಪುರಂ ಸೀವೆಜ್ ಫಾರಂ ರಸ್ತೆಯಿಂದ ಕನಕ ಗಿರಿ, ಚಾಮುಂಡಿಪುರಂ, ಅಗ್ರಹಾರ ಇನ್ನಿತರ ಕಡೆಗಳಲ್ಲಿ ಅಂಗಡಿಗಳ ಬಳಿ ಹೋಗಿ, ವ್ಯಾಪಾರಿ ಹಾಗೂ ಗ್ರಾಹಕರಿಗೆ ಕರಪತ್ರ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ಕೊರೊನಾ ಜಗತ್ತಿಗೆ ಶಿಸ್ತು ಬದ್ಧ ಜೀವ ನದ ಪಾಠ ಕಲಿಸಿದೆ. ಮುಂಜಾಗ್ರತೆಯಿಂದ ನಡೆದುಕೊಂಡರೆ ಆರೋಗ್ಯ ಕಾಪಾಡಿಕೊಳ್ಳ ಬಹುದು ಎಂದು ಅರಿವಿಗೆ ತಂದಿದೆ. ವ್ಯವಸ್ಥೆ ಯಲ್ಲಿ ಸಂಘಟಿತ ಕಾರ್ಯದ ಮಹತ್ವ ವನ್ನೂ ತಿಳಿಸಿಕೊಟ್ಟಿದೆ. ಜೊತೆಗೆ ಈ ಸಂದಿಗ್ಧ ಪರಿ ಸ್ಥಿತಿಯಲ್ಲಿ ಚೀನಾದಂತಹ ರಾಷ್ಟ್ರಗಳ ವರ್ತನೆ ಯನ್ನೂ ಬಯಲಾಗಿಸಿದೆ. ಸ್ವಾವಲಂಬಿ ದೇಶ ಎಂಬುದು ಘೋಷಣೆಯಾಗಿ ಉಳಿಯಬಾರದು. ಪ್ರತಿಯೊಬ್ಬ ಭಾರತೀ ಯರೂ ಇದರಲ್ಲಿ ಕೈಜೋಡಿಸಬೇಕು. ಸ್ವದೇಶಿ ವಸ್ತುಗಳನ್ನು ಬಳಸುವ ಮೂಲಕ ಸಹಕರಿಸಬೇಕುಎಂದು ಸಾರ್ವಜನಿಕರಿಗೆ ತಿಳಿಸಲಾಯಿತು. ಸಂಸ್ಥೆ ಅಧ್ಯಕ್ಷ ರವಿತೇಜ, ಶ್ರೀಕಾಂತ್ ಕಶ್ಯಪ್, ಮಮತಾ, ಗಾಯತ್ರೀ, ಯದುನಂದನ, ವಿನಯ್ ಇನ್ನಿತರ ಸದ ಸ್ಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Translate »