ಯೂತ್ ಹಾಸ್ಟೆಲ್ ಹೊರತು ಉಳಿದ ನಿರಾಶ್ರಿತ ಕೇಂದ್ರಗಳು ಬಂದ್
ಮೈಸೂರು

ಯೂತ್ ಹಾಸ್ಟೆಲ್ ಹೊರತು ಉಳಿದ ನಿರಾಶ್ರಿತ ಕೇಂದ್ರಗಳು ಬಂದ್

May 18, 2020

ಮೈಸೂರು, ಮೇ 17(ಎಂಕೆ)- ಲಾಕ್ ಡೌನ್ ಹಿನ್ನೆಲೆ ಮೈಸೂರು ನಗರಪಾಲಿಕೆ ಯಿಂದ ತೆರೆಯಲಾಗಿದ್ದ 5 ನಿರಾಶ್ರಿತರ ಕೇಂದ್ರಗಳಲ್ಲಿ ಯೂತ್ ಹಾಸ್ಟೆಲ್ ಹೊರತು ಪಡಿಸಿ ಉಳಿದೆಲ್ಲಾ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ನಗರದ ನಂಜರಾಜ ಬಹ ದ್ದೂರ್ ಕಲ್ಯಾಣ ಮಂಟಪ, ನೇರಂಬಳ್ಳಿ ಕಲ್ಯಾಣ ಮಂಟಪ, ನಿತ್ಯೋತ್ಸವ ಕಲ್ಯಾಣ ಮಂಟಪ ಮತ್ತು ಹೊಯ್ಸಳ ಕರ್ನಾಟಕ ಸಂಘದ ಭವನದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರಗಳನ್ನು ಮುಚ್ಚಲಾಗಿದೆ.

ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿದ್ದ 93 ನಿರಾಶ್ರಿತರಲ್ಲಿ 90 ಮಂದಿಗೆ ಕ್ರೆಡಿಟ್-ಐ ಸಂಸ್ಥೆ ಮತ್ತು ಪಾಲಿಕೆ ಜತೆಗೂಡಿ ಖಾಯಂ ಉದ್ಯೋಗ ಕಲ್ಪಿಸಿ ಕೊಟ್ಟಿವೆ. ಇತರೆ ಕೇಂದ್ರಗಳಲ್ಲಿದ್ದ ನಿರಾಶ್ರಿತ ರಲ್ಲಿ ಕೆಲವರಿಗೂ ಉದ್ಯೋಗ ಕಲ್ಪಿಸಲಾ ಗಿದೆ. ಊರಿಗೆ ಹೋಗಲು ಇಚ್ಚಿಸುವವ ರನ್ನು ಕಳುಹಿಸಿಕೊಡಲಾಗಿದೆ. ಯೂತ್ ಹಾಸ್ಟೆಲ್‍ನಲ್ಲಿರುವ ನಿರಾಶ್ರಿತರನ್ನು ಅವರ ಊರಿಗೆ ಕಳುಹಿಸಿಕೊಡುವ ಯತ್ನ ನಡೆದಿದೆ. ಮಂದಿನ ದಿನಗಳಲ್ಲಿ ನಿರಾಶ್ರಿತ ಮಹಿಳೆ ಯರನ್ನು ಯೂತ್ ಹಾಸ್ಟೆಲ್‍ನಲ್ಲಿ, ಪುರುಷ ರನ್ನು ನಂಜರಾಜ ಬಹದ್ದೂರ್ ಛತ್ರದಲ್ಲಿ ಇರಿಸುವ ಸಂಬಂಧ ಚಿಂತನೆ ನಡೆದಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

45 ಸಾವಿರ ಸಂಪಾದನೆ: ನಂಜರಾಜ ಬಹದ್ದೂರ್ ಛತ್ರದಲ್ಲಿದ್ದ ನಿರಾಶ್ರಿತರು ಪೇಪರ್ ಕವರ್ಸ್ ತಯಾರಿಸುವ ಮೂಲಕ 45 ಸಾವಿರ ರೂ. ಸಂಪಾದಿಸಿದ್ದಾರೆ. ನಿರಾಶ್ರಿತರೆಲ್ಲರೂ ಪೇಪರ್ ಕವರ್ಸ್ ತಯಾರಿಕೆಯಲ್ಲಿ ಭಾಗ ವಹಿಸಿದ್ದು, ಯಾರ್ಯಾರು ಎಷ್ಟೆಷ್ಟು ಪೇವರ್ ಕವರ್ಸ್ ಮಾಡಿದ್ದಾರೆ ಎಂಬುದನ್ನು ಪರಿ ಗಣಿಸಿ, ಹಣವನ್ನು ನೀಡಿ ಕಳುಹಿಸಿಕೊಡ ಲಾಗಿದೆ. 93 ಮಂದಿ ನಿರಾಶ್ರಿತರಲ್ಲಿ 90 ಮಂದಿಗೆ ಖಾಯಂ ಉದ್ಯೋಗ ಗುರುತಿಸಿ ಕೊಡಲಾಗಿದೆ. ಉಳಿದಿದ್ದ 800 ಕೆ.ಜಿ ಪೇಪರ್ ಕವರ್‍ಗಳನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರ ಸಮ್ಮುಖದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಮಾರಾಟ ಮಾಡಿ ಬಳಿಕ ನಿರಾಶ್ರಿತರ ಕೇಂದ್ರವನ್ನು ಬಂದ್ ಮಾಡಲಾಗಿದೆ.

Translate »