ರೋಗ ನಿರೋಧಕ ಶಕ್ತಿ ವೃದ್ಧಿಸುವ ಚವನಪ್ರಾಶ, ಕಷಾಯದ `ಆರೋಗ್ಯ ಕಿಟ್’ ಹಂಚಿಕೆಗೆ ಸಿದ್ಧತೆ
ಮೈಸೂರು

ರೋಗ ನಿರೋಧಕ ಶಕ್ತಿ ವೃದ್ಧಿಸುವ ಚವನಪ್ರಾಶ, ಕಷಾಯದ `ಆರೋಗ್ಯ ಕಿಟ್’ ಹಂಚಿಕೆಗೆ ಸಿದ್ಧತೆ

May 18, 2020

ಮೈಸೂರು, ಮೇ17(ಆರ್‍ಕೆಬಿ)- ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚವನಪ್ರಾಶ, ಕಷಾಯ ಪೌಡರ್, ಪ್ರಾಣಾಯಾಮ ಪುಸ್ತಕ, ಅರೋಗ್ಯ ಸೇತು ಮಾಹಿತಿ ಇರುವ `ರೋಗ ಮಕ್ತ ಭಾರತ-ಆರೋಗ್ಯ ಕಿಟ್’ಗಳನ್ನು ಕೃಷ್ಣರಾಜ ಕ್ಷೇತ್ರದ ಎಲ್ಲಾ 80 ಸಾವಿರ ಮನೆ ಗಳಿಗೂ ವಿತರಿಸಲು ಶಾಸಕ ಎಸ್.ಎ. ರಾಮದಾಸ್ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೊರೊನಾ ಅಥವಾ ಯಾವುದೇ ವೈರಸ್ ಮಾನವ ದೇಹದೊಳಗೆ ಸೇರದಂತೆ ತಡೆ ಯಲು ರೋಗ ನಿರೋಧಕ ಶಕ್ತಿ ಅಗತ್ಯ. ಆ ನಿಟ್ಟಿನಲ್ಲಿ ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಚವನಪ್ರಾಶ, ಕಷಾಯ ಪೌಡರ್ ಇನ್ನಿತರೆ ಆರೋಗ್ಯ ಕುರಿತ ಮಾಹಿತಿ ಒದಗಿಸುವ ಆರೋಗ್ಯ ಕಿಟ್ ವಿತರಿಸುವ ಸಂಬಂಧ ಮಾಜಿ ಸಚಿವ, ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆಯಲ್ಲಿ ಭಾನು ವಾರ ಕಾಡಾ ಕಚೇರಿ ಆವರಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಕೊರೊನಾ ವಿಶ್ವವನ್ನೇ ತತ್ತರಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ವಹಸ ಬೇಕಾದ ಮುನ್ನೆಚ್ಚರಿಕೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕಿದೆ. ಅದಕ್ಕಾಗಿ ಕ್ಷೇತ್ರದ ಎಲ್ಲಾ ಮನೆಗಳಿಗೂ ರೋಗ ನಿರೋ ಧಕ ಶಕ್ತಿ ವೃದ್ಧಿಸುವ ಆರೋಗ್ಯ ಕಿಟ್ ಗಳನ್ನು ವಿತರಿಸಲಾಗುವುದು. ಮನೆಯಲ್ಲಿರುವ ಹಿರಿ ಯರು, ಮಕ್ಕಳು ಸೇರಿದಂತೆ ಮನೆಯಲ್ಲಿ ರುವ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ರಲು ಈ ಯೋಜನೆ ರೂಪಿಸಲಾಗಿದೆ ಎಂದರು.

ಈ ಕಿಟ್‍ಗಳನ್ನು ಮನೆ ಮನೆಗೆ ತಲುಪಿ ಸಲು ಎಲ್ಲಾ ಪಾಲಿಕೆ ಸದಸ್ಯರು, ಪಕ್ಷದ ಪದಾ ಧಿಕಾರಿಗಳು, ವಾರ್ಡ್ ಉಸ್ತುವಾರಿಗಳನ್ನು ಒಳಗೊಂಡಂತೆ ಮುಂದಿನ ಕಾರ್ಯ ಯೋಜನೆ ಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಕೋವಿಡ್ ಮತ್ತೊಮ್ಮೆ ಜನಸಾಮಾನ್ಯರಿಗೆ ಹರಡದಂತೆ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳು ವಂತೆ ಸಮಗ್ರವಾಗಿ ಚರ್ಚಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜ್ಯದಲ್ಲಿ ಸಂಘಟನಾತ್ಮಕ ವಾಗಿ ಬಲಾಢ್ಯ ಕ್ಷೇತ್ರವಾಗಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ಪಕ್ಷ ವನ್ನು ಬೇರು ಮಟ್ಟದಲ್ಲಿ ಕಟ್ಟಿ ಬೆಳೆಸಿದ್ದಾರೆ. ಕ್ಷೇತ್ರದ ಪದಾಧಿಕಾರಿಗಳು ಸೇವಾ ಮನೋ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಲಾಕ್ ಡೌನ್ ವೇಳೆ ಬಿಸಿಯೂಟ ತಲುಪಿಸುವ ದೊಡ್ಡ ಕಾರ್ಯ ತೃಪ್ತಿ ತಂದಿದೆ. ರಾಜ್ಯ, ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲನೆ ಮಾಡುವ ಜೊತೆಗೆ, ಕೊರೊ ನಾದ ಸಂದರ್ಭದಲ್ಲಿ ಕಾರ್ಯ ಕರ್ತರು ಸ್ಪಂದಿಸಿದ್ದಾರೆ ಎಂದು ಅಭಿನಂದಿಸಿದರು.

ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಸೌಮ್ಯ, ರೂಪಾ, ಶಾಂತಮ್ಮ, ಗೀತಾಶ್ರೀ, ಶಾರದಾ, ಎಂ.ಸಿ.ರಮೇಶ್, ಛಾಯಾದೇವಿ, ಬಿಜೆಪಿ ಕೃಷ್ಣರಾಜ ಕ್ಷೇತ್ರ ಅಧ್ಯಕ್ಷ ವಡಿ ವೇಲು, ಪ್ರಧಾನ ಕಾರ್ಯದರ್ಶಿ ನೂರ್ ಫಾತಿಮಾ, ನಾಗೇಂದ್ರ, ಪದಾಧಿಕಾರಿಗಳಾದ ಎಂ.ಆರ್.ಬಾಲಕೃಷ್ಣ, ಸಂತೋಷ್, ಶಂಭು, ವಿನಯನ್ ಪಾಂಚಜನ್ಯ, ಜೆ.ರವಿ, ಓಂ ಶ್ರೀನಿವಾಸ್, ಪ್ರಸಾದ್‍ಬಾಬು ಇನ್ನಿತರರಿದ್ದರು.

Translate »