ಸಾರಿಗೆ ಸಂಸ್ಥೆ ನೌಕರರನ್ನು ಕೊರೊನಾ ವಾರಿಯರ್ಸ್ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಲು ಒತ್ತಾಯ
ಮೈಸೂರು

ಸಾರಿಗೆ ಸಂಸ್ಥೆ ನೌಕರರನ್ನು ಕೊರೊನಾ ವಾರಿಯರ್ಸ್ ಆರೋಗ್ಯ ವಿಮೆ ವ್ಯಾಪ್ತಿಗೆ ಸೇರಿಸಲು ಒತ್ತಾಯ

May 18, 2020

ಮೈಸೂರು, ಮೇ 17(ಎಸ್‍ಪಿಎನ್)- ಕರ್ತವ್ಯನಿರತ ಕೆಎಸ್‍ಆರ್‍ಟಿಸಿ ನೌಕರರನ್ನು ಕೊರೊನಾ ವಾರಿಯರ್ಸ್ ತಂಡದ ಆರೋಗ್ಯ ವಿಮಾ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾ ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರÀ ಸಂಘದ ಮೈಸೂರು ಗ್ರಾಮಾಂತರ ವಿಭಾಗದ ಪದಾಧಿಕಾರಿ ಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರ್ತವ್ಯದ ವೇಳೆ ಸೋಂಕು ತಗುಲಿದರೆ ಚಿಕಿತ್ಸೆ ಪಡೆಯಲು ಅಥವಾ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ ಪಡೆಯಲು ಅವಕಾಶ ವಾಗುವಂತೆ ಕೊರೊನಾ ವಾರಿಯರ್ಸ್‍ಗಳ ವಿಮಾ ವ್ಯಾಪ್ತಿಗೆ ಸಾರಿಗೆ ನೌಕರರನ್ನೂ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.

10 ಲಕ್ಷ ರೂ.ಗೆ ಹೆಚ್ಚಿಸಿ: 2008ರ ಫೆ.1ರಂದು ಜಾರಿಗೆ ತರಲಾದ ಸಾರಿಗೆ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನಿಗಮದ ನೌಕರರು ಅಥವಾ ಅಧಿಕಾರಿಗಳು ಕರ್ತವ್ಯ ದಲ್ಲಿದ್ದಾಗ ಮೃತಪಟ್ಟರೆ, ಆತನ ಅವಲಂಬಿತ ಕುಟುಂಬವರ್ಗಕ್ಕೆ ನೀಡುವ ಪರಿಹಾರ ಧನವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರೋಗ್ಯ ವಿಮೆ: ಸಾರಿಗೆ ಸಂಸ್ಥೆಯ ನೌಕರರು ಮತ್ತು ಅಧಿಕಾರಿಗಳಿಗೆ ವೈದ್ಯಕೀಯ ವೆಚ್ಚದ ಮರುಪಾವತಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು. ಜ್ಯೋತಿ ಸಂಜೀವಿನಿ ಆರೋಗ್ಯ ವಿಮೆ ಯೋಜನೆ ಪರಿಣಾಮಕಾರಿಯಾಗಿ ಅಳವಡಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

ಲಾಭ ಕಷ್ಟ: ಕೊರೊನಾ ಸೋಂಕಿನಿಂದ ದೂರವಿರುವ ಚಾಮರಾಜನಗರ ಮೊದಲಿನಿಂ ದಲೂ ಗ್ರೀನ್ ಝೋನ್‍ನಲ್ಲಿದೆ. ಈ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಾರಿಗೆ ಬಸ್‍ಗಳನ್ನು ಓಡಿಸುವಂತೆ ರಾಜ್ಯ ಸರ್ಕಾರ 3 ದಿನಗಳ ಹಿಂದೆಯೇ ಆದೇಶಿಸಿದೆ. ಆದರೆ, `ಸಾಮಾಜಿಕ ಅಂತರ ಕಾಯ್ದುಕೊಂಡು’ ಸಾರಿಗೆ ಬಸ್‍ಗಳನ್ನು ಓಡಿಸುವುದರಿಂದ ಡೀಸೆಲ್ ವೆಚ್ಚದಷ್ಟೂ ಹಣ ಸಂಗ್ರಹವಾಗುತ್ತಿಲ್ಲ ಎಂದು ನಷ್ಟದ ಚಿತ್ರಣ ನೀಡಿದ್ದಾರೆ. ಇದಕ್ಕೆ ಪರಿಹಾರ ಸೂಚಿಸಬೇಕು ಎಂದಿದ್ದಾರೆ.

ಪ್ರಮಾಣಪತ್ರ ಕಡ್ಡಾಯ: ಚಾಲಕರು, ನಿರ್ವಾಹಕರಿಗೆ ಕೋವಿಡ್-19 ಟೆಸ್ಟ್ ಕಡ್ಡಾಯ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಫೀವರ್ ಕ್ಲಿನಿಕ್‍ನಲ್ಲಿ ಬಿಪಿ ಪರೀಕ್ಷಿಸಿ, ಥರ್ಮಲ್ ಸ್ಕ್ಯಾನರ್ ಹಿಡಿದು ಪ್ರಮಾಣಪತ್ರ ನೀಡುತ್ತಿದ್ದಾರೆ. ಅಲ್ಲದೆ, ಮೇ 30 ನಂತರ ಕೋವಿಡ್-19 ಸೋಂಕು ಪೀಡಿತರಾದರೆ ಚಿಕಿತ್ಸಾ ವೆಚ್ಚವನ್ನು ರೋಗಿಗಳೇ ಭರಿಸಬೇಕೆಂಬ ಮಾತುಗಳೂ ಕೇಳಿಬರುತ್ತಿವೆ. ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ನೌಕರರ ಸಂಘದ ಪ್ರಧಾನ ಕಾರ್ಯ ದರ್ಶಿ ಎಂ.ಪಿ.ನಾಗಪ್ರಸಾದ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »