ಮೈಸೂರಲ್ಲಿ ಸೆಸ್ಕ್‍ನಿಂದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’
ಮೈಸೂರು

ಮೈಸೂರಲ್ಲಿ ಸೆಸ್ಕ್‍ನಿಂದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’

February 5, 2021

ಮೈಸೂರು,ಫೆ.4(ಎಂಟಿವೈ)- ವಿದ್ಯುತ್ ಸೇವೆಗಳಲ್ಲಿನ ತಾಂತ್ರಿಕ ವಿಸ್ತರಣೆ, ಬಲ ವರ್ಧನೆ, ಗುಣಮಟ್ಟದ ಸೇವೆ-ಅವಘಡ ಗಳ ಬಗ್ಗೆ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ(ಸೆಸ್ಕ್)ದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಮೈಸೂರು ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ ಗುರುವಾರ ಬೆಳಿಗ್ಗೆ ನಡೆದ `ವಿದ್ಯುತ್ ಸೇವೆಗಳ ಅರಿವು-ಸಪ್ತಾಹ’ ಕಾರ್ಯ ಕ್ರಮ ದಲ್ಲಿ ಜನಜಾಗೃತಿ ಮೂಡಿಸಲಾಯಿತು.

ಸೆಸ್ಕ್ ಕೇಂದ್ರ ಉಪ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೆಸ್ಕ್ ನಿಂದ ನಡೆಸುವ ತಾಂತ್ರಿಕ ಜಾಗದ ವಿಸ್ತ ರಣೆ, ಗುಣಮಟ್ಟದ ವಿದ್ಯುತ್ ಸಂಪರ್ಕ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲಾಯಿತು. ವಿದ್ಯುತ್ ತಂತಿ ತುಂಡಾ ಗಿದ್ದರೆ ಜನತೆ ಕೈಗೊಳ್ಳಬೇಕಾದ ಕ್ರಮ, ಮನೆ ಕಟ್ಟುವ ವೇಳೆ ಕಬ್ಬಿಣದ ಸರಳುಗಳನ್ನು ಕೊಂಡೊಯ್ಯುವಾಗ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸೂಕ್ಷ್ಮ ವಾಗಿ ಗಮನಿಸುವಂತೆ ಜಾಗೃತಿ ಮೂಡಿಸ ಲಾಯಿತು. ಉತ್ತಮ ಗ್ರಾಹಕರಾದ ರಾಜು, ತಾಂಡವಮೂರ್ತಿ, ಸಂಸ್ಥೆಗಳಾದ ಶಾಂ ಮೋಟಾರ್ಸ್, ಮೋರ್ ಮೆಘಾ ಸ್ಟೋರ್ಸ್ ಪ್ರತಿ ನಿಧಿಗಳನ್ನು ಸನ್ಮಾನಿಸಲಾಯಿತು.

ಕಾರ್ಯ ನಿರ್ವಾಹಕ ಇಂಜಿನಿಯರ್ ಯೋಗೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಾದ ರುದ್ರೇಶ್, ಶ್ರೀಧರ ನಾಯಕ್, ಧರಣಿದೇವಿ, ಪಾಲಿಕೆ ಸದಸ್ಯ ರಾದ ಎಂ.ಡಿ. ನಾಗರಾಜು, ಛಾಯಾದೇವಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಶಿವಣ್ಣ, ರಾಜಲಕ್ಷ್ಮಿ ಶಿವಣ್ಣ, ವನಿತಾ ಪ್ರಸನ್ನ, ಕುಶಲ್ ಕುಮಾರ್, ಸೆಸ್ಕ್ ಸಿಬ್ಬಂದಿ ಸಂಘದ ಕ್ರೀಡಾ ಕಾರ್ಯದರ್ಶಿ ಎಂ.ಎ.ಮಂಜುನಾಥ್, ಜೆಇ ಕೆ.ಎಸ್.ಸಿದ್ದರಾಜು ಇನ್ನಿತರರು ಉಪಸ್ಥಿತರಿದ್ದರು.

 

Translate »