ಮೈಸೂರು ನಗರ ಪೊಲೀಸರ ವೆಬ್‍ಸೈಟ್ ಪುನಾರಂಭ
ಮೈಸೂರು

ಮೈಸೂರು ನಗರ ಪೊಲೀಸರ ವೆಬ್‍ಸೈಟ್ ಪುನಾರಂಭ

February 5, 2021

ಮೈಸೂರು,ಫೆ.4(ಎಂಕೆ)-ಕಳೆದ 1 ವರ್ಷದಿಂದ ಸ್ಥಗಿತಗೊಂಡಿದ್ದ ಮೈಸೂರು ನಗರ ಪೊಲೀಸ್ ಘಟಕದ ವೆಬ್‍ಸೈಟನ್ನು mಥಿsuಡಿuಛಿiಣಥಿಠಿoಟiಛಿe.ಞಚಿಡಿಟಿಚಿಣಚಿಞಚಿ.gov.iಟಿ ಹೊಸ ವಿನ್ಯಾಸದೊಂದಿಗೆ ಗುರುವಾರ ಪುನಾರಂಭ ಮಾಡಲಾಗಿದೆ.

ಪೊಲೀಸ್ ಆಯುಕ್ತರ ಕಚೇರಿ ಕಟ್ಟಡ, ನಗರ ಪೊಲೀಸ್ ಆಯು ಕ್ತರ ಭಾವಚಿತ್ರ ಸೇರಿದಂತೆ ಹೊಸ ವಿನ್ಯಾಸ ಮತ್ತು ಹೆಚ್ಚಿನ ಮಾಹಿತಿಯೊಂದಿಗೆ ವಿಳಾಸ ಬದಲಿಸಿ ವೆಬ್‍ಸೈಟ್‍ಗೆ ಮರು ಚಾಲನೆ ನೀಡಲಾಗಿದೆ. ಮೈಸೂರಿನ ನಾಗರಿಕರು ವೆಬ್‍ಸೈಟ್ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.

ಈ ಮೊದಲು ಆಯಾ ಜಿಲ್ಲೆಗಳಲ್ಲಿ ಒಂದೊಂದು ರೀತಿಯಲ್ಲಿ ವೆಬ್‍ಸೈಟ್ ವಿನ್ಯಾಸ ಮಾಡಿಕೊಳ್ಳಲಾಗಿತ್ತು. ಆದರೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಒಂದೇ ರೀತಿಯ ವೆಬ್‍ಸೈಟ್ ವಿನ್ಯಾಸ ಮಾಡಲಾಗಿದೆ. ಹಾಗೆಯೇ ವೆಬ್‍ಸೈಟ್‍ನ ನಿರ್ವಹಣೆ ಜವಾಬ್ದಾರಿಯನ್ನು ಎನ್‍ಐಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ) ವಹಿಸಿಕೊಂಡಿದೆ. ಇದರಿಂದ ಮಾಹಿತಿ ಸೋರಿಕೆಯಾಗದಂತೆ ಅಥವಾ ವೆಬ್‍ಸೈಟ್‍ಗೆ ಉಂಟಾಗುತ್ತಿದ್ದ ತೊಂದರೆಗೆ ಕಡಿವಾಣ ಹಾಕಿದಂತೆ ಅಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ‘ಮೈಸೂರು ಮಿತ್ರ’ನಿಗೆ ಗುರುವಾರ ತಿಳಿಸಿದರು.

ಹೆಚ್ಚು ಮಾಹಿತಿ ನೀಡುವ ಉದ್ದೇಶದಿಂದ ಹಳೆ ವೆಬ್‍ಸೈಟ್ ಗಿಂತ ಹೆಚ್ಚಿನ ಕಾಲಂಗಳನ್ನು ಹೊಸ ವೆಬ್‍ಸೈಟ್‍ನಲ್ಲಿ ನೀಡ ಲಾಗಿದೆ. ನಗರದ ಮಾಹಿತಿ, ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಗಳ ಮಾಹಿತಿ, ಅಪರಾಧ ತಡೆಗಾಗಿ ಸಂಚಾರ ನಿಯಮಗಳ ಮಾಹಿತಿಯ ಜೊತೆಗೆ ಜಾಗೃತಿ ವಿಡಿಯೋಗಳನ್ನು ಅಪಲೋಡ್ ಮಾಡಲಾಗಿದೆ ಎಂದರು.
ದೂರು ನೀಡುವ ವಿಧಾನ, ಪತ್ರಿಕಾ ಪ್ರಕಟಣೆಗಳು, ಪೊಲೀಸರ ಕರ್ತವ್ಯ, ಮಾಹಿತಿ ಹಕ್ಕಿನ ವಿವರ, ಕಾರ್ಯಕ್ರಮಗಳ ಮಾಹಿತಿ, ರಸ್ತೆಗಳ ಮಾಹಿತಿ ಹಾಗೂ ಇ-ಸೇವೆಗಳು, ಸರ್ಕಾರದ ಆ್ಯಪ್ ಗಳು, ಕೇಂದ್ರಸರ್ಕಾರ ಜಾಲತಾಣಗಳು ಸೇರಿದಂತೆ ಇನ್ನಿತರೆ ಜಾಲತಾಣಗಳನ್ನು ಹುಡುಕಲು ಅವಕಾಶ ಮಾಡಿಕೊಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.

Translate »