ತಂಬಾಕು ಸೇವನೆ ಕ್ಯಾನ್ಸರ್‍ಗೆ ಆಹ್ವಾನ… ಶೀಘ್ರ ಪತ್ತೆಯಿಂದ ಗುಣಮುಖ ಸಾಧ್ಯ…
ಮೈಸೂರು

ತಂಬಾಕು ಸೇವನೆ ಕ್ಯಾನ್ಸರ್‍ಗೆ ಆಹ್ವಾನ… ಶೀಘ್ರ ಪತ್ತೆಯಿಂದ ಗುಣಮುಖ ಸಾಧ್ಯ…

February 5, 2021

ಮೈಸೂರು, ಫೆ.4(ಪಿಎಂ)- `ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಆಹ್ವಾನ…’, `ಶೀಘ್ರ ಪತ್ತೆಯಿಂದ ಕ್ಯಾನ್ಸರ್ ಗುಣಮುಖ ಸಾಧ್ಯ…’ ಎಂಬಿತ್ಯಾದಿ ಜಾಗೃತಿ ಸಂದೇ ಶದ ಫಲಕಗಳನ್ನಿಡಿದು ಕಾಲೇಜು ವಿದ್ಯಾರ್ಥಿ ಗಳು ಹಾಗೂ ವಿವಿಧ ಸಂಘಟನೆ ಪ್ರತಿ ನಿಧಿಗಳು ಜಾಗೃತಿ ಜಾಥಾ ನಡೆಸಿದರು.

ದಿ ಆರ್ಗನೈಜೇಷನ್ ಆಫ್ ದಿ ಡೆವ ಲಪ್‍ಮೆಂಟ್ ಆಫ್ ಪೀಪಲ್ (ಓಡಿಪಿ), ಕಾರಿಥಾಸ್ ಇಂಡಿಯಾ, ಸಂತ ಜೋಸಫ್ ಆಸ್ಪತ್ರೆ, ಸಂತ ಫಿಲೋಮಿನಾ ಕಾಲೇಜು ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಗುರುವಾರ ನಡೆದ ಜಾಗೃತಿ ಜಾಥಾದಲ್ಲಿ ಹೀಗೆ ಜಾಗೃತಿ ಸಂದೇಶಗಳು ಗಮನ ಸೆಳೆದವು.

ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಎದುರು ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಮರ್‍ನಾಥ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಚಾಮ ರಾಜ ಒಡೆಯರ್ ವೃತ್ತ, ದೊಡ್ಡ ಗಡಿ ಯಾರ ವೃತ್ತ, ಅಶೋಕ ರಸ್ತೆ ಮಾರ್ಗ ವಾಗಿ ಸಾಗಿದ ಜಾಥಾ, ಸಂತ ಫಿಲೋಮಿನಾ ಚರ್ಚ್ ಆವರಣದಲ್ಲಿ ಮುಕ್ತಾಯಗೊಂಡಿತು.

ಬಳಿಕ ಚರ್ಚ್ ಆವರಣದಲ್ಲಿ ಡಾ. ಅನಿಲ್ ಥಾಮಸ್, ಕ್ಯಾನ್ಸರ್ ನಿರ್ಮೂ ಲನೆ ಕುರಿತು ಪ್ರವಾಸಿಗರು ಹಾಗೂ ಸಾರ್ವ ಜನಿಕರಿಗೆ ಮಾಹಿತಿ ನೀಡಿದರು. ಇದಾದ ಬಳಿಕ ಬನ್ನಿಮಂಟಪದ ಸಂತ ಫಿಲೋ ಮಿನಾ ಕಾಲೇಜು ಆವರಣದಲ್ಲಿ ಕಾಲೇ ಜಿನ ಪ್ರತಿಕೋದ್ಯಮ ವಿಭಾಗದ ವಿದ್ಯಾರ್ಥಿ ಗಳು ರೂಪಕ ಪ್ರದರ್ಶನದ ಮೂಲಕ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಿದರು. ನಂತರ ಕಾಲೇಜಿನ ಆಡಿಯೋ-ವಿಡೀಯೋ ಸ್ಟುಡಿಯೋದಲ್ಲಿ ಕ್ಯಾನ್ಸರ್ ವೈದ್ಯರ ವೆಬಿ ನಾರ್ ಪ್ಯಾನಲ್ ಚರ್ಚಾ ಕಾರ್ಯಕ್ರಮ ನಡೆಯಿತು. ಇದರಲ್ಲಿ ಕ್ಯಾನ್ಸರ್ ತಜ್ಞ ವೈದ್ಯ ರಾದ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಡಾ.ವಿಶ್ವೇ ಶ್ವರ, ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಡಾ.ಶ್ಯಾಮ್‍ಸುಂದರ್, ಕ್ಲಿಯರ್ ಮೆಡಿ ರೇಡಿಯಂಟ್ ಆಸ್ಪತ್ರೆಯ ಡಾ.ಚೈತ್ರಾ ಪಾಲ್ಗೊಂಡಿದ್ದರು. ಮೈಸೂರು ಧರ್ಮ ಕ್ಷೇತ್ರದ ಧರ್ಮಗುರುಗಳಾದ ರೆವರೆಂಡ್ ಫಾದರ್ ಸಿ.ರಾಯಪ್ಪ, ರೆವರೆಂಡ್ ಫಾದರ್ ಲೆಸ್ಲಿ ಮೊರಾಸ್, ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ರೆವರೆಂಡ್ ಫಾದರ್ ಡಾ.ಬೆರ್ನಾಡ್ ಪ್ರಕಾಶ್ ಬಾರ್ನಿಸ್, ಓಡಿಪಿ ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾದರ್ ಅಲೆಕ್ಸ್ ಸಿಕ್ವೇರ ಮತ್ತಿ ತರರು ಜಾಥಾದಲ್ಲಿ ಹಾಜರಿದ್ದರು.

Translate »