ಹಿಂದೂ ವಿರೋಧಿ ಹೇಳಿಕೆ ಆರೋಪ; ಪೆÇ್ರ.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ
ಮೈಸೂರು

ಹಿಂದೂ ವಿರೋಧಿ ಹೇಳಿಕೆ ಆರೋಪ; ಪೆÇ್ರ.ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ

February 5, 2021

ಬೆಂಗಳೂರು,ಫೆ.4-ಹಿಂದೂ ಧರ್ಮ ವಿರೋಧಿ ಹೇಳಿಕೆ ನೀಡಿ ದ್ದಾರೆ ಎಂದು ಸಾಹಿತಿ ಫೆÇ್ರ. ಭಗವಾನ್ ಮುಖಕ್ಕೆ ವಕೀಲೆಯೊಬ್ಬರು ಮಸಿ ಬಳಿದಿರುವ ಘಟನೆ ಬೆಂಗ ಳೂರಿನಲ್ಲಿ ನಡೆದಿದೆ.

ವಕೀಲೆ ಮೀರಾ ರಾಘವೇಂದ್ರ ಎಂಬು ವರು, ಪೆÇ್ರ. ಭಗವಾನ್ ಮುಖಕ್ಕೆ ಮಸಿ ಬಳಿದಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಇಂದು ಮಧ್ಯಾಹ್ನ 1 ಗಂಟೆ ವೇಳೆಗೆ ಘಟನೆ ನಡೆದಿದೆ. ಸದ್ಯ ವಕೀಲೆ ವಿರುದ್ಧ ಪೆÇ್ರ. ಕೆ.ಎಸ್.ಭಗವಾನ್ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೋರ್ಟ್ ಕಟಕಟೆಯಲ್ಲಿ ತಂದು ನಿಲ್ಲಿಸಬೇಕು ಎಂದುಕೊಂಡಿದ್ದೆ. ಈಗ ನಿಲ್ಲಿಸಿದ್ದೇನೆ. ನನ್ನನ್ನು ಅರೆಸ್ಟ್ ಮಾಡಿ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಇಷ್ಟು ವಯ ಸ್ಸಾಗಿದೆ ಇನ್ನು ರಾಮನ ಬಗ್ಗೆ, ಧರ್ಮದ ಬಗ್ಗೆ ಮಾತನಾಡುತ್ತೀರಿ, ನಾಚಿಕೆ ಆಗುವು ದಿಲ್ಲವಾ ಎಂದು ವಕೀಲೆ ಮೀರಾ ರಾಘ ವೇಂದ್ರ, ಮಸಿ ಬಳಿದು ಆಕ್ರೋಶ ವ್ಯಕ್ತಪಡಿ ಸಿದ್ದಾರೆ. 2020ರ ಅಕ್ಟೋಬರ್ 11ರಂದು ಮಾತನಾಡಿದ್ದ ಪೆÇ್ರ.ಭಗವಾನ್, ಹಿಂದೂ ಧರ್ಮವೆಂಬುದೇ ಇಲ್ಲ. ಹಿಂದೂ ಧರ್ಮ ಅವಮಾನಕರ. ಏಕೆಂದರೆ ಪರ್ಷಿ ಯನ್ ಭಾಷೆಯಲ್ಲಿ ಆಧಾರ ಇಲ್ಲ. ಅದಕ್ಕೆ ಸಿಂಧೂ ಎಂಬ ಪದದಿಂದ ಹಿಂದೂ ಪದ ಬಂತು. ಮಾನ-ಮರ್ಯಾದೆ ಇರೋರು ಹಿಂದೂ ಶಬ್ದ ಬಳಸಬಾರದು. ಹಿಂದೂ ಧರ್ಮ ಎಂದರೆ ಬ್ರಾಹ್ಮಣ ಧರ್ಮ. ಬಾಬಾ ಸಾಹೇಬರು, ಪೆರಿಯಾರ್, ವಿವೇಕಾ ನಂದರೂ ಹಿಂದೂ ಧರ್ಮವನ್ನು ಬಿಟ್ಟರು ಎಂದು ಹೇಳಿದ್ದರು.

ಈ ಹೇಳಿಕೆ ವಿರುದ್ಧ ವಕೀಲೆ ಮೀರಾ ರಾಘವೇಂದ್ರ ಅವರು ಐಪಿಸಿ ಸೆಕ್ಷನ್ ಯು/ಎಸ್ 298 ಮತ್ತು 505 ಅಡಿ ಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿ ಸಿದ್ದರು. ಈ ಪ್ರಕರಣದಲ್ಲಿ ನಗರದ ಎಸಿ ಎಂಎಂ ನ್ಯಾಯಾಲಯ ಭಗವಾನ್ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.

ಕೃತ್ಯ ಖಂಡಿಸಿ ಜಾಗೃತ ವೇದಿಕೆ ಪ್ರತಿಭಟನೆ
ಮೈಸೂರು, ಫೆ.4(ವೈಡಿಎಸ್)- ಲೇಖಕ ಪ್ರೊ.ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ನ್ಯಾಯಾಲಯ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.

ವೈಚಾರಿಕ, ಮಾನವೀಯ ಮತ್ತು ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವ ಕೆ.ಎಸ್.ಭಗವಾನ್ ನ್ಯಾಯಾಲಯಕ್ಕೆ ಹೋಗಿ ದ್ದಾಗ ಅವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಎಂಬ ವರು ಮಸಿ ಬಳಿದು ಅವಿವೇಕದಿಂದ ವರ್ತಿಸಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ವಿಚಾರ ಅಥವಾ ವ್ಯಕ್ತಿಯನ್ನು ನೈತಿಕ, ಸಾಂವಿ ಧಾನಿಕ ಮತ್ತು ಸಭ್ಯತೆ ಆಧಾರ ಟೀಕಿಸುವ ಹಕ್ಕು ಪ್ರಜಾಪ್ರಭುತ್ವ ದಲ್ಲಿ ಎಲ್ಲರಿಗೂ ಇದೆ. ಪ್ರತಿಭಟಿಸುವ ಹಕ್ಕನ್ನು ಮೀರಾ ರಾಘ ವೇಂದ್ರ ಅವರು ಸಂವಿಧಾನದ ಚೌಕಟ್ಟಿನಲ್ಲಿ ಬಳಸದೇ ಅಸಭ್ಯ ವಾಗಿ ವರ್ತಿಸಿರುವುದನ್ನು ಖಂಡಿಸುತ್ತೇವೆ ಎಂದರು.

ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಮಹೇಶ್ ಚಂದ್ರಗುರು, ಪ್ರೊ.ಪಿ.ವಿ.ನಂಜರಾಜ ಅರಸ್, ಮಾಜಿ ಮೇಯರ್ ಪುರು ಷೋತ್ತಮ್, ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕಸಾಪ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮುಖಂಡರಾದ ಆರ್.ಕೆ.ರವಿ, ಮಹೇಂದ್ರ ಎಂ.ಕಾಗಿನೆಲೆ, ಸುನೀಲ್, ನಾರಾ ಯಣ್, ರೋಹಿತ್, ಪವನ್, ಸಿದ್ದರಾಜು, ರವಿಕುಮಾರ್, ಶರತ್, ರವಿ, ಸೋಮಣ್ಣ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

 

 

Translate »