ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಚವನ್‍ಪ್ರಾಶ್, ಕಷಾಯ
ಮೈಸೂರು

ಪತ್ರಕರ್ತರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಚವನ್‍ಪ್ರಾಶ್, ಕಷಾಯ

May 5, 2020

ಮೈಸೂರು, ಮೇ 4(ಆರ್‍ಕೆಬಿ)- ಕೊರೊನಾ ವಾರಿಯರ್ಸ್ ರೀತಿಯಲ್ಲಿಯೇ ಕೊರೊನಾ ವಿರುದ್ಧ ಹೋರಾಡುತ್ತಿರುವ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿ ಕಾರಿಗಳ ಸಂಘವು ಪತ್ರಕರ್ತರಿಗೆ ಚವನ ಪ್ರಾಶ್, ನೆಲ್ಲಿಕಾಯಿ ಜ್ಯೂಸ್ ಮತ್ತು ಕಷಾಯ ಪೌಡರ್ ವಿತರಿಸುವ ಕಾರ್ಯ ಕ್ರಮಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾ ಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿ ಗಳ ಸಂಘದ ರಾಜ್ಯ ಖಜಾಂಚಿ ಡಾ. ಪಾಂಡುರಂಗ ಮಾತನಾಡಿ, ಪತ್ರಕರ್ತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಗತ್ಯ. ಹಾಗಾಗಿ ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ಪತ್ರಕರ್ತರಿ ಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದೆ. ದಿನನಿತ್ಯ ಶ್ರಮಿಸುವ ಪತ್ರಕರ್ತರು ತಮ್ಮ ಆರೋಗ್ಯವರ್ಧಕ ರೋಗನಿರೋಧಕ ಶಕ್ತಿಯನ್ನು ಹೊಂದಬೇಕು. ಅದಕ್ಕೆಂದೇ ಆಯುಷ್ ವೈದ್ಯಾಧಿಕಾರಿಗಳ ಸಂಘ ಅವರಿಗೆ ಶಕ್ತಿವರ್ಧಕ ಚವನ್‍ಪ್ರಾಶ್, ಕಷಾಯ ಹಾಗೂ ನೆಲ್ಲಿ ಕಾಯಿ ಜ್ಯೂಸ್ ನೀಡುತ್ತಿದೆ ಎಂದು ತಿಳಿಸಿದರು.

ಆಯುರ್ವೇದದಲ್ಲಿ ಆದಿಕಾಲದಿಂದಲೂ ಚವನಪ್ರಾಶ್ ಬಳಕೆ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚವನ್ ಪ್ರಾಶ್ ನೆಗಡಿ, ಅಲರ್ಜಿ, ಶ್ವಾಸಕೋಶದ ಕಾಯಿಲೆಗಳನ್ನು ತಡೆಯಲು ಸಹಾಯಕ ವಾಗಿದೆ. ಅಲ್ಲದೆ ತುಳಸಿ, ದಾಲ್ಜಿನಿ, ಮೆಣಸು, ಒಣಶುಂಠಿ ಇನ್ನಿತರೆ ಪದಾರ್ಥಗಳಿರುವ ಕಷಾಯ ನೆನಪಿನ ಶಕ್ತಿ ಹೆಚ್ಚಿಸುವ ಜೊತೆಗೆ ಉಸಿರಾಟದ ಸಮಸ್ಯೆಯನ್ನು ಹೋಗ ಲಾಡಿಸುತ್ತದೆ. ಆಸ್ತಮಾ, ಕೆಮ್ಮಿನ ಲಕ್ಷಣ ಗಳನ್ನು ಕಡಿಮೆ ಮಾಡಲು ಸಹಾಯಕ ವಾಗಿದೆ ಎಂದರು. ಈ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಯತೀಶ್, ಜಿಲ್ಲಾ ಆಯುಷ್ ಅಧಿಕಾರಿ ಟಿ.ಎನ್.ಸೀತಾಲಕ್ಷ್ಮಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ಮಹೇಂದ್ರ, ಪತ್ರ ಕರ್ತ ಚಿ.ಜ.ರಾಜೀವ ಉಪಸ್ಥಿತರಿದ್ದರು.

Translate »