ಸಾಯಿ ಫೌಂಡೇಷನ್‍ನಿಂದ ಪೊಲೀಸ್ ಸಿಬ್ಬಂದಿಗೆ ಉಚಿತ ಭೋಜನ
ಮೈಸೂರು

ಸಾಯಿ ಫೌಂಡೇಷನ್‍ನಿಂದ ಪೊಲೀಸ್ ಸಿಬ್ಬಂದಿಗೆ ಉಚಿತ ಭೋಜನ

May 5, 2020

ಮೈಸೂರು, ಮೇ 4- ಕೋವಿಡ್-19 ಕೊರೊನಾ ವೈರಾಣುವಿನ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಸಾಯಿ ಫೌಂಡೇಷನ್ ವತಿಯಿಂದ ಇಂದು ಉಚಿತವಾಗಿ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಸುಮಾರು 100 ಮಂದಿ ಪೊಲೀಸ್ ಸಿಬ್ಬಂದಿಗೆ ಉಚಿತವಾಗಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಸಾಯಿ ಫೌಂಡೇಷನ್‍ನ ಸಂಸ್ಥಾಪಕ ನಿರ್ದೇಶಕ ಸಾಯಿ ಕಿರಣ ರೆಡ್ಡಿ ಮಾತನಾಡಿ, ನಗರದ ಎಲ್ಲ ಪೊಲೀಸ್ ಸಿಬ್ಬಂದಿಯೂ ತಮ್ಮ ಕುಟುಂಬವನ್ನೂ ಲೆಕ್ಕಿಸದೇ ಸಾರ್ವಜನಿಕರ ಹಿತಾಸಕ್ತಿಗೆ ತಮ್ಮ ಜೀವವನ್ನೇ ಒತ್ತೆ ಇಟ್ಟು, ಹಗಲಿರುಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಅವರಿಗೆ ಅಭಿನಂದನೆಗಳು. ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ಅನ್ನದಾನ. ಅನ್ನ ದಾತೋಃ ಸುಖೀ ಭವಃ ಎಂಬ ನಾಣ್ಣುಡಿಯಂತೆ ಮನುಷ್ಯನನ್ನು ಊಟದಲ್ಲಿ ತೃಪ್ತಿಪಡಿ ಸಬೇಕೇ ಹೊರತು, ಬೇರೆ ಯಾವುದರಲ್ಲೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿ ದರು. ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಭ್ರಷ್ಟಾಚಾರ ನಿಗ್ರಹ ದಳದ ಅಧ್ಯಕ್ಷೆ ಮಂಜುಳ ರಮೇಶ್, ಸಾಜಿದ ಎಂ.ಖಾನ್, ಅರ್ಚನ, ಪ್ರವಾಲಿಕ ಭಾಗವಹಿಸಿದ್ದರು.

Translate »