ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ    ಮಾಜಿ ಶಾಸಕ ಎಂಕೆಎಸ್ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ   ಮಾಜಿ ಶಾಸಕ ಎಂಕೆಎಸ್ ದಿನಸಿ ಕಿಟ್ ವಿತರಣೆ

May 5, 2020

ಮೈಸೂರು, ಮೇ 4(ಆರ್‍ಕೆಬಿ)- ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಆಹಾರ ಪೂರೈಸುತ್ತಿರುವ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸೋಮವಾರವೂ ತಮ್ಮ 41ನೇ ದಿನದ ಕಾರ್ಯಕ್ರಮ ದಲ್ಲಿ ನೂರಾರು ಮಂದಿ ಬಡ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು. ಕುರು ಬಾರಹಳ್ಳಿ, ಜೆ.ಸಿ.ನಗರ ಆಟೋ ಚಾಲಕರಿಗೆ, ಬಡ ಕೂಲಿ ಕಾರ್ಮಿಕರಿಗೆ ಹಾಗೂ ಮನೆ ಕೆಲಸ ಮಾಡುವ ಮಹಿಳೆಯರಿಗೆ ಅಕ್ಕಿ, ತೊಗರಿಬೇಳೆ, ಉಪ್ಪು, ಅಡುಗೆ ಎಣ್ಣೆ, ರವೆ, ಗೋಧಿ ಹಿಟ್ಟು ಇನ್ನಿತರೆ ದಿನಸಿ ಪದಾರ್ಥಗಳಿರುವ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ಮುಖಂಡರಾದ ಕುರುಬಾರಹಳ್ಳಿ ಸೋಮು, ವಿಶ್ವ, ಐಟಿ ಸೆಲ್‍ನ ನಿರಾಲ್, ಹರೀಶ್, ಪುಟ್ಟಮಾದೇಗೌಡ, ಶ್ರೀನಿವಾಸ್, ಚಿಕ್ಕಲಿಂಗು ಇನ್ನಿತರರು ಉಪಸ್ಥಿತರಿದ್ದರು.

 

Translate »